AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾಯಿ ಪಲ್ಲವಿ ನಟಿಸಬೇಕಿದ್ದ ಬಯೋಪಿಕ್ ಸಿನಿಮಾ ರುಕ್ಮಿಣಿ ವಸಂತ್ ಪಾಲು?

Rukmini Vasanth movie: ರುಕ್ಮಿಣಿ ವಸಂತ್, ಸೌಂದರ್ಯ, ನಟನಾ ಪ್ರತಿಭೆ, ಸುಂದರ ವ್ಯಕ್ತಿತ್ವ, ಗಾಂಭೀರ್ಯ ಎಲ್ಲವೂ ಸಮನಾಗಿ ಉಳ್ಳ ಕೆಲವೇ ನಟಿಯರಲ್ಲಿ ಒಬ್ಬರು. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಭಾರಿ ಯಶಸ್ವಿನ ಬಳಿಕ ರುಕ್ಮಿಣಿ ವಸಂತ್ ಅವರಿಗೆ ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈಗಂತೂ ರುಕ್ಮಿಣಿ ವಸಂತ್ ಬಾಲಿವುಡ್ನ ನಿರ್ಮಾಣ ಸಂಸ್ಥೆಯೊಂದರ ಜೊತೆಗೂ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇವುಗಳ ನಡುವೆ, ಖ್ಯಾತ ನಟಿ ಸಾಯಿ ಪಲ್ಲವಿ ನಟಿಸಬೇಕಿದ್ದ ಪ್ರಮುಖ ಸಿನಿಮಾ ಒಂದು ಈಗ ರುಕ್ಮಿಣಿ ವಸಂತ್ ಪಾಲಾಗಿದೆ ಎನ್ನಲಾಗುತ್ತಿದೆ.

ಸಾಯಿ ಪಲ್ಲವಿ ನಟಿಸಬೇಕಿದ್ದ ಬಯೋಪಿಕ್ ಸಿನಿಮಾ ರುಕ್ಮಿಣಿ ವಸಂತ್ ಪಾಲು?
Sai Rukmini
ಮಂಜುನಾಥ ಸಿ.
|

Updated on: Apr 26, 2026 | 6:11 PM

Share

ರುಕ್ಮಿಣಿ ವಸಂತ್ (Rukmini Vasanth), ಸೌಂದರ್ಯ, ನಟನಾ ಪ್ರತಿಭೆ, ಸುಂದರ ವ್ಯಕ್ತಿತ್ವ, ಗಾಂಭೀರ್ಯ ಎಲ್ಲವೂ ಸಮನಾಗಿ ಉಳ್ಳ ಕೆಲವೇ ನಟಿಯರಲ್ಲಿ ಒಬ್ಬರು. ‘ಸಪ್ತ ಸಾಗರದಾಚೆ ಎಲ್ಲೊ’ ಸಿನಿಮಾದ ಭಾರಿ ಯಶಸ್ವಿನ ಬಳಿಕ ರುಕ್ಮಿಣಿ ವಸಂತ್ ಅವರಿಗೆ ಪರಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ಈಗಂತೂ ರುಕ್ಮಿಣಿ ವಸಂತ್ ಬಾಲಿವುಡ್ನ ನಿರ್ಮಾಣ ಸಂಸ್ಥೆಯೊಂದರ ಜೊತೆಗೂ ಕೆಲಸ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇವುಗಳ ನಡುವೆ, ಖ್ಯಾತ ನಟಿ ಸಾಯಿ ಪಲ್ಲವಿ ನಟಿಸಬೇಕಿದ್ದ ಪ್ರಮುಖ ಸಿನಿಮಾ ಒಂದು ಈಗ ರುಕ್ಮಿಣಿ ವಸಂತ್ ಪಾಲಾಗಿದೆ ಎನ್ನಲಾಗುತ್ತಿದೆ.

ಸಾಯಿ ಪಲ್ಲವಿ ಪ್ರಸ್ತುತ ಹಲವಾರು ಬಿಗ್ ಬಜೆಟ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಮೀರ್ ಖಾನ್ ಪುತ್ರ ಜುನೈದ್ ಖಾನ್ ಜೊತೆಗಿನ ಚಿತ್ರ, ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ ಸೇರಿದಂತೆ ಸಾಲು ಸಾಲು ಚಿತ್ರಗಳು ಅವರ ಕೈಯಲ್ಲಿವೆ. ಇವುಗಳ ಜೊತೆಗೆ ಮಣಿರತ್ನಂ ಅವರ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ. ತೆಲುಗಿನಲ್ಲಿ ಒಂದು ಹೊಸ ಸಿನಿಮಾನಲ್ಲಿ ನಟಿಸಲಿದ್ದಾರೆ. ಶಿವಕಾರ್ತಿಕೇಯನ್ ಜೊತೆಗೊಂದು ಸಿನಿಮಾಕ್ಕೂ ಓಕೆ ಹೇಳಿದ್ದಾರೆ. ಈ ಸಿನಿಮಾಗಳ ಜೊತೆಗೆ ಖ್ಯಾತ ಗಾಯಕಿ ಎಂಎಸ್ ಸುಬ್ಬಲಕ್ಷ್ಮಿ ಜೀವನ ಆಧರಿಸಿದ ಸಿನಿಮಾನಲ್ಲೂ ಸಾಯಿ ಪಲ್ಲವಿ ನಟಿಸುತ್ತಾರೆ ಎನ್ನಲಾಗಿತ್ತು.

ಆದರೆ ಈಗ ಹೊರಬಿದ್ದಿರುವ ಕೆಲವು ಸುದ್ದಿಗಳ ಪ್ರಕಾರ, ಸಾಯಿ ಪಲ್ಲವಿ ಅವರು ನಟಿಸಬೇಕಿದ್ದ ಎಂಎಸ್ ಸುಬ್ಬಲಕ್ಷ್ಮಿ ಅವರ ಪಾತ್ರದಲ್ಲಿ ರುಕ್ಮಿಣಿ ವಸಂತ್ ಅವರು ನಟಿಸಲಿದ್ದಾರೆ ಎನ್ನಲಾಗುತ್ತಿದೆ. ಸಾಯಿ ಪಲ್ಲವಿ ಅವರು ಡೇಟ್ಸ್ ಸಮಸ್ಯೆಯಿಂದಾಗಿ ಆ ಸಿನಿಮಾನಿಂದ ಹೊರ ನಡೆದಿದ್ದು, ಆ ಪಾತ್ರ ಈಗ ರುಕ್ಮಿಣಿ ವಸಂತ್ ಅವರ ಪಾಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:ಎಷ್ಟು ಸಖತ್ ಆಗಿ ರೆಡಿ ಆಗ್ತಾರೆ ನೋಡಿ ರುಕ್ಮಿಣಿ ವಸಂತ್

ಸಾಯಿ ಪಲ್ಲವಿಯಂತೆ ರುಕ್ಮಿಣಿ ವಸಂತ್ ಕೂಡ ಸಹಜ ಅಭಿನಯಕ್ಕೆ ಹೆಸರಾದವರು. ಅವರ ಮುಗ್ಧ ನೋಟ ಮತ್ತು ಶಾಸ್ತ್ರೀಯ ನೃತ್ಯದ ಹಿನ್ನೆಲೆ ಎಂ.ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರಕ್ಕೆ ಪೂರಕವಾಗಲಿದೆ ಎಂದು ಚಿತ್ರತಂಡ ಭಾವಿಸಿದೆ ಎನ್ನಲಾಗಿದೆ. ‘ಜೆರ್ಸಿ’ ಖ್ಯಾತಿಯ ಗೌತಮ್ ತಿನ್ನನೂರಿ ಅವರು ಎಂಎಸ್ ಸುಬ್ಬಲಕ್ಷ್ಮಿ ಅವರ ಈ ಬಯೋಪಿಕ್ ಅನ್ನು ನಿರ್ದೇಶಿಸುತ್ತಿದ್ದು, ಸಂಗೀತ ಮಾಂತ್ರಿಕ ಅನಿರುದ್ಧ್ ರವಿಚಂದರ್ ಸಂಗೀತ ನೀಡಲಿದ್ದಾರೆ.

ಎಂ.ಎಸ್. ಸುಬ್ಬುಲಕ್ಷ್ಮಿ ಅವರಂತಹ ಐತಿಹಾಸಿಕ ವ್ಯಕ್ತಿತ್ವದ ಪಾತ್ರ ರುಕ್ಮಿಣಿ ವಸಂತ್ ಅವರಿಗೆ ಸಿಕ್ಕರೆ. ಅದು ಅವರ ವೃತ್ತಿಜೀವನಕ್ಕೆ ದೊಡ್ಡ ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ. ಆದರೆ ಇದಿನ್ನೂ ಖಾತ್ರಿ ಆಗಿಲ್ಲ. ಕೆಲ ಮಾಧ್ಯಮಗಳು ಸಾಯಿ ಪಲ್ಲವಿ ಸ್ಥಾನಕ್ಕೆ ರುಕ್ಮಿಣಿ ವಸಂತ್ ಬಂದಿದ್ದಾರೆ ಎಂದು ಬರೆದಿದ್ದರೆ, ಇನ್ನು ಕೆಲವು ಇದು ಸುಳ್ಳು ಸುದ್ದಿ ಎಂದು ಸಹ ಬರೆದಿವೆ. ಚಿತ್ರತಂಡದಿಂದ ಅಧಿಕೃತ ಘೋಷಣೆ ಹೊರಬೀಳುವವರೆಗೆ ಈ ಬಗ್ಗೆ ಖಾತ್ರಿ ಇಲ್ಲ.

ಪ್ರಸ್ತುತ ರುಕ್ಮಿಣಿ ವಸಂತ್ ಬೇರೆ ಬೇರೆ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೂ ಎನ್​​ಟಿಆರ್ ನಟಿಸಿ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ ಹೊಸ ಸಿನಿಮಾಕ್ಕೆ ಅವರೇ ನಾಯಕಿ. ಅದರ ಹೊರತಾಗಿ ಒಂದು ಹಿಂದಿ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾನಲ್ಲಿ ನಟಿಸಿದ್ದಾರೆ ಆ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ. ತಮಿಳಿನಲ್ಲಿ ಒಂದು ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us