‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾದ ಮೂಲಕ ಕೋಟ್ಯಂತರ ಹೃದಯಗಳನ್ನು ಗೆದ್ದ ನಟಿ ರುಕ್ಮಿಣಿ ವಸಂತ್ (Rukmini Vasanth), ತಮ್ಮ ಪ್ರತಿಭೆಯಿಂದ ಪರಭಾಷೆಯ ಚಿತ್ರರಂಗಗಳನ್ನು ಸಹ ಸೆಳೆದಿದ್ದಾರೆ. ಈಗಾಗಲೇ ಹಲವು ಪರಭಾಷೆ ಅವಕಾಶಗಳನ್ನು ರುಕ್ಮಿಣಿ ಪಡೆದಿದ್ದಾರೆ. ಆದರೆ ಎಲ್ಲಕ್ಕಿಂತಲೂ ಮೊದಲು ರುಕ್ಮಿಣಿ ಒಪ್ಪಿಕೊಂಡಿದ್ದು ತಮಿಳು ಸಿನಿಮಾ ಒಂದರ ಅವಕಾಶ. ಇದೀಗ ಆ ಸಿನಿಮಾದ ಟೈಟಲ್ ಟೀಸರ್ ಬಿಡುಗಡೆ ಆಗಿದೆ.
ಮಕ್ಕಳ್ ಸೆಲ್ವನ್ ಎಂದೇ ಖ್ಯಾತರಾದ ವಿಜಯ್ ಸೇತುಪತಿ ಜೊತೆಗೆ ರುಕ್ಮಿಣಿ ವಸಂತ್ ನಟಿಸಿದ್ದು, ಸಿನಿಮಾಕ್ಕೆ ‘ಏಸ್’ ಎಂದು ಹೆಸರಿಡಲಾಗಿದೆ. ಸಿನಿಮಾದ ಫಸ್ಟ್ ಲುಕ್ ಮತ್ತು ಟೈಟಲ್ ಟೀಸರ್ ಇದೀಗ ಬಿಡುಗಡೆಯಾಗಿದೆ. ಜೂಜು, ಬಂದೂಕು, ಸ್ಫೋಟ, ದರೋಡೆ ಮತ್ತು ಬೈಕ್ ಚೇಸಿಂಗ್ ಅಂಶಗಳನ್ನು ಒಳಗೊಂಡಿರುವ ಅನಿಮೇಟೆಡ್ ಸ್ವರೂಪದಲ್ಲಿ ಟೀಸರ್ ಅನಾವರಣಗೊಳ್ಳಿಸಲಾಗಿದೆ. ವಿಜಯ್ ಸೇತುಪತಿ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದು, ಅವರಿಗೆ ಜೋಡಿಯಾಗಿ ಕನ್ನಡತಿ ರುಕ್ಮಿಣಿ ವಸಂತ್ ಜೊತೆ ನೀಡಿದ್ದಾರೆ.
ಇದನ್ನೂ ಓದಿ:ಸಖತ್ ಕ್ಯೂಟ್ ಆಗಿ ಪೋಸ್ ಕೊಟ್ಟ ರುಕ್ಮಿಣಿ ವಸಂತ್ ಹಾಗೂ ಚೈತ್ರಾ ಆಚಾರ್
‘ಏಸ್’ ಸಿನಿಮಾದಲ್ಲಿ ತಮಿಳಿನ ಜನಪ್ರಿಯ ಹಾಸ್ಯ ನಟ ಯೋಗಿ ಬಾಬು ಪ್ರಮುಖ ಪಾತ್ರದಲ್ಲಿ ನಟಿಸಿದ್ದು ಅವರ ಜೊತೆಗೆ ದಿವ್ಯಾ ಪಿಳ್ಳೈ, ಪಿಎಸ್ ಅವಿನಾಶ್, ರಾಜಕುಮಾರ್, ಬಬ್ಲು ಮತ್ತು ಇನ್ನೂ ಕೆಲವು ಪ್ರಮುಖ ನಟರು ಸಿನಿಮಾದ ಭಾಗವಾಗಿ ಅಭಿನಯ ಮಾಡಿದ್ದಾರೆ. ಆರ್ಮುಗ ಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಕರಣ್ ಬಹದ್ದೂರ್ ರಾವತ್ ಕ್ಯಾಮೆರಾ ಕೆಲಸ ಮಾಡಿದ್ದಾರೆ. ಜಸ್ಟಿನ್ ಪ್ರಭಾಕರನ್ ಸಂಗೀತ ನೀಡಿದ್ದು, ಗೋವಿಂದರಾಜ್ ಸಂಕಲನದ ಜವಾಬ್ದಾರಿ ನಿರ್ವಹಣೆ ಮಾಡಿದ್ದಾರೆ.
‘ಎಸ್’ ಸಿನಿಮಾವು ಕ್ರೈಮ್ ಥ್ರಿಲ್ಲರ್ ಕಾಮಿಡಿ ಜಾನರ್ನ ಸಿನಿಮಾ ಆಗಿದೆ. ‘ಏಸ್’ ಸಿನಿಮಾವನ್ನು, 7Cs ಎಂಟರ್‌ಟೈನ್‌ಮೆಂಟ್ ಬ್ಯಾನರ್ ಅಡಿ ನಿರ್ಮಾಣ ಮಾಡಲಾಗಿದೆ. ಭಾರೀ ನಿರೀಕ್ಷೆ ಮೂಡಿಸಿರುವ ಚಿತ್ರ ಈ ವರ್ಷವೇ ರಿಲೀಸ್ ಆಗಲಿದೆ. ಆದರೆ ದಿನಾಂಕವನ್ನು ಚಿತ್ರತಂಡ ಇನ್ನಷ್ಟೆ ಖಾತ್ರಿಗೊಳಿಸಬೇಕಿದೆ. ಈ ಸಿನಿಮಾ ಮೂಲಕ ರುಕ್ಮಿಣಿ ವಸಂತ್ ಇನ್ನಷ್ಟು ಸ್ಟಾರ್ ನಟರ ಸಿನಿಮಾ ಅವಕಾಶಗಳನ್ನು ಬಾಚಿಕೊಳ್ಳುವ ನಿರೀಕ್ಷೆ ಇದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ