ಸಂಪೂರ್ಣವಾಗಿ ಭಾರತದಲ್ಲೇ ಶೂಟ್ ಆಯ್ತು ರಷ್ಯಾ ಸಿನಿಮಾ; ಗಮನ ಸೆಳೆದೆ ಟ್ರೇಲರ್

ಭಾರತ-ರಷ್ಯಾ ಜಂಟಿ ನಿರ್ಮಾಣದ 'ಪರ್ಸಿಮನ್ ಆಫ್ ಲವ್' ಸಿನಿಮಾ ಸಂಪೂರ್ಣವಾಗಿ ಭಾರತದಲ್ಲೇ ಚಿತ್ರೀಕರಣಗೊಂಡಿದೆ. ವಿದೇಶಿ ಲೊಕೇಶನ್‌ಗಳ ಮೊರೆ ಹೋಗುವ ಭಾರತೀಯ ಚಿತ್ರರಂಗದ ನಡುವೆ, ಈ ರಷ್ಯಾ ಸಿನಿಮಾ ಭಾರತದ ಬೀದಿಗಳಲ್ಲಿ ಶೂಟ್ ಆಗಿ ಗಮನ ಸೆಳೆದಿದೆ. ಮರಿಯಸ್ ವೈಸ್‌ಬರ್ಗ್ ನಿರ್ದೇಶನದ ಬಾಲಿವುಡ್ ಶೈಲಿಯ ಈ ಹಾಸ್ಯ ಚಿತ್ರವು ಏಪ್ರಿಲ್ 1 ರಂದು ತೆರೆಗೆ ಬರಲಿದೆ.

ಸಂಪೂರ್ಣವಾಗಿ ಭಾರತದಲ್ಲೇ ಶೂಟ್ ಆಯ್ತು ರಷ್ಯಾ ಸಿನಿಮಾ; ಗಮನ ಸೆಳೆದೆ ಟ್ರೇಲರ್
ರಷ್ಯಾ ಸಿನಿಮಾ

Updated on: Mar 30, 2026 | 10:36 AM

ಕನ್ನಡ, ಹಿಂದಿ ಸೇರಿದಂತೆ ಭಾರತದ ಬಹುತೇಕ ಚಿತ್ರರಂಗದವರು ವಿದೇಶದಲ್ಲಿ ಶೂಟ್ ಮಾಡುತ್ತಾರೆ. ಅದರಲ್ಲೂ ಬಾಲಿವುಡ್​​ನವರು ವಿದೇಶಿ ಲೊಕೇಶನ್​​ಗಳನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು. ಈಗ ಅಚ್ಚರಿ ಎಂಬಂತೆ ರಷ್ಯಾದ ಚಿತ್ರವೊಂದು ಭಾರತದ ಬೀದಿಗಳಲ್ಲಿ ಶೂಟ್ ಆಗಿದೆ. ಏಪ್ರಿಲ್ 1ರಂದು ಸಿನಿಮಾ ತೆರೆಗೆ ಬರುತ್ತಿದೆ. ಈ ಸಿನಿಮಾ ಸಂಪೂರ್ಣವಾಗಿ ಭಾರತದ ಸಿನಿಮಾಗಳಿಂದ ಪ್ರೇರಿತವಾಗಿದೆ.

ಭಾರತ ಹಾಗೂ ರಷ್ಯಾ ಜಂಟಿಯಾಗಿ ಸಿನಿಮಾ ನಿರ್ಮಾಣ ಮಾಡಿದೆ. ‘ಪರ್ಸಿಮನ್ ಆಫ್ ಲವ್’ ಎಂಬುದು ಚಿತ್ರದ ಹೆಸರು. ಪರ್ಸಿಮನ್ ಎಂದರೆ ಆರೆಂಜ್ ರೀತಿಯಲ್ಲೇ ಇರುವ ಒಂದುಹಣ್ಣು. ಭಾರತ ಹಾಗೂ ರಷ್ಯಾ ಒಟ್ಟಾಗಿ ನಿರ್ಮಿಸಿರುವ ಮೊದಲ ಸಿನಿಮಾ ಇದಾಗಿದೆ. ಈ ಸಿನಿಮಾ ಟ್ರೇಲರ್ ಮೂಲಕ ಗಮನ ಸೆಳೆದಿದೆ.

ಮಾರಿಯಸ್ ವೈಸ್‌ಬರ್ಗ್ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಬಾಲಿವುಡ್ ಶೈಲಿಯಲ್ಲಿ ಸಿನಿಮಾ ಮೂಡಿಬಂದಿದೆ. ಕಾಮಿಡಿ ಕ್ಲಬ್ ತಾರೆಯರಾದ ಡೆಮಿಸ್ ಕರಿಬಿಡಿಸ್ ಮತ್ತು ಮಿಖಾಯಿಲ್ ಗಲುಸ್ಟಿಯನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೊತೆಗೆ ಅಡಿಲಾ ರಾಗಿಮೋವಾ ನಾಯಕಿಯಾಗಿ ಪಾದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: 11ನೇ ದಿನವೂ ಅದ್ಭುತ ಕಲೆಕ್ಷನ್ ಮಾಡಿದ ‘ಲವ್ ಮಾಕ್ಟೇಲ್ 3’ ಸಿನಿಮಾ; ಒಟ್ಟಾರೆ ಗಳಿಕೆ ಎಷ್ಟು?

ಒಬ್ಬರು ಪೊಲೀಸ್ ಅಧಿಕಾರಿ ಆದರೆ, ಇನ್ನೊಬ್ಬರು ಅಪರಾಧಿ. ಅವರ ಪೈಪೋಟಿಯು ದೀರ್ಘಕಾಲದಿಂದ ಸಮಾಧಿಯಾಗಿ ಉಳಿದಿರುವ ಸತ್ಯದ ಆವಿಷ್ಕಾರಕ್ಕೆ ಕಾರಣವಾಗುತ್ತದೆ. ಬಾಲ್ಯದಲ್ಲಿ ಬೇರ್ಪಟ್ಟ ಒಡಹುಟ್ಟಿದವರು ಎಂಬ ವಿಷಯ ನಂತರ ಹೊರ ಬರುತ್ತದೆ.


ಇದು ಭಾರತದಲ್ಲಿ ಶೈಟ್ ಆಗಿರುವುದರಿಂದ ಭಾರತದ ಪ್ರಮುಖ ನಗರಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಹಿಂದಿಗೆ ಡಬ್ ಮಾಡುವ ಪ್ಲ್ಯಾನ್ ಕೂಡ ಇದೆಯೇ ಎಂಬುದು ಸದ್ಯದ ಪ್ರಶ್ನೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us