ಸಾಯಿ ಪಲ್ಲವಿ ನಿಜಕ್ಕೂ ಸ್ವಿಮ್​ಸ್ಯೂಟ್ ಧರಿಸಿದ್ರಾ? ವೈರಲ್ ಆಗ್ತಿದೆ ಫೋಟೋ

ಸಾಯಿ ಪಲ್ಲವಿ ಅವರ ಸ್ವಿಮ್‌ಸೂಟ್‌ನಲ್ಲಿರುವ ಫೋಟೋ ವೈರಲ್ ಆಗಿದೆ. ಅದು AI ನಿಂದ ರಚಿಸಲ್ಪಟ್ಟಿದೆ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ. ಅವರು ಸಾಂಪ್ರದಾಯಿಕ ಉಡುಪುಗಳಿಗೆ ಹೆಸರಾಗಿದ್ದು, ಈ ಫೋಟೋ ನಿಜವಾಗಿಯೂ ಅವರದ್ದೇ ಆಗಿದೆಯೇ ಎಂಬುದು ಪ್ರಶ್ನಾರ್ಹ. ಫೋಟೋದ ಸತ್ಯಾಸತ್ಯತೆಯ ಬಗ್ಗೆ ಅವರ ಸ್ಪಷ್ಟೀಕರಣ ಕಾಯುತ್ತಿದ್ದಾರೆ ಅಭಿಮಾನಿಗಳು.

ಸಾಯಿ ಪಲ್ಲವಿ ನಿಜಕ್ಕೂ ಸ್ವಿಮ್​ಸ್ಯೂಟ್ ಧರಿಸಿದ್ರಾ? ವೈರಲ್ ಆಗ್ತಿದೆ ಫೋಟೋ
ಸಾಯಿ ಪಲ್ಲವಿ
Updated By: ರಾಜೇಶ್ ದುಗ್ಗುಮನೆ

Updated on: Sep 22, 2025 | 11:15 AM

ನಟಿ ಸಾಯಿ ಪಲ್ಲವಿ (Sai Pallavi) ಅವರು ಸದಾ ಟ್ರೆಡಿಷನಲ್ ಲುಕ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆಯುವ ನಟಿ. ಅವರಿಗೆ ಸಾಕಷ್ಟು ಬೇಡಿಕೆ ಸೃಷ್ಟಿ ಆಗಿದೆ. ಈಗ ಅವರ ಫೋಟೋ ಒಂದು ವೈರಲ್ ಆಗಿದೆ. ಇದರಲ್ಲಿ ಅವರು ಸ್ವಮಿ ಸ್ಯೂಟ್ ಧರಿಸಿದ್ದಾರೆ. ಇದು ಎಐನಿಂದ ಮಾಡಲ್ಪಟ್ಟ ಫೋಟೋ ಎಂದು ಅನೇಕರು ಹೇಳುತ್ತಿದ್ದಾರೆ. ಫೋಟೋದ ಅಸಲಿಯತ್ತಿನ ಬಗ್ಗೆ ಅವರ ಕಡೆಯಿಂದಲೇ ಸ್ಪಷ್ಟನೆ ಸಿಗಬೇಕಿದೆ.

ಸಾಯಿ ಪಲ್ಲವಿ ಎಂದಾಕ್ಷಣ ನೆನಪಿಗೆ ಬರೋದು ಸಾಂಪ್ರದಾಯಕಿವಾಗಿ ಸೀರೆ ಉಟ್ಟ ಲುಕ್. ಅವರು ಚಿತ್ರಕ್ಕಾಗಿ ಮೇಕಪ್ ಹಾಕೋದಿಲ್ಲ. ಅವರು ಬಿಕಿನಿ ಧರಿಸೋದಿಲ್ಲ. ದೇಹ ಕಾಣಿಸುವ ಬಟ್ಟೆಯನ್ನೂ ಹಾಕೋದಿಲ್ಲ. ಈ ನಿಯಮವನ್ನು ಅವರು ಮೊದಲಿನಿಂದಲೂ ಪಾಲನೆ ಮಾಡಿಕೊಂಡು ಬಂದಿದ್ದಾರೆ. ಈಗ ಸಾಯಿ ಪಲ್ಲವಿ ಅವರದ್ದು ಎನ್ನಲಾದ ಫೋಟೋ ವೈರಲ್ ಆಗಿದೆ.

ಇದನ್ನೂ ಓದಿ
‘BBK 12’ ಆರಂಭಕ್ಕೆ ಕೆಲವೇ ದಿನ ಬಾಕಿ ಇರುವಾಗ ಬಂತು ಸ್ಪರ್ಧಿಗಳ ಹೊಸ ಪಟ್ಟಿ
ಗಾಯಕ ಜುಬೀನ್ ಗಾರ್ಗ್ ಸಾಯಲು ಅಸಲಿ ಕಾರಣ ಏನು? ರಿವೀಲ್ ಮಾಡಿದ ಪತ್ನಿ
‘ಲೋಕಃ’ ಸಿನಿಮಾ ಒಟಿಟಿ ರಿಲೀಸ್ ವಿಚಾರದಲ್ಲಿ ಪ್ರೇಕ್ಷಕರಿಗೆ ಬೇಸರದ ಸುದ್ದಿ
ಬಾಲಿವುಡ್​ನಲ್ಲಿ ಗೆಲ್ಲೋ ಕನಸು ಕಂಡಿದ್ದ ಹರ್ಷಗೆ ಭಾರೀ ನಿರಾಸೆ

ಸಾಯಿ ಪಲ್ಲವಿ ಸಮುದ್ರ ತೀರದಲ್ಲಿ ಇದ್ದಾರೆ. ಇದರಲ್ಲಿ ಅವರು ಸ್ವಿಮ್ ಸ್ಯೂಟ್ ಧರಿಸಿದ್ದಾರೆ. ಈ ಫೋಟೋವನ್ನು ಅನೇಕರ ಬಳಿ ನಂಬಲು ಸಾಧ್ಯವಾಗುತ್ತಿಲ್ಲ. ಎಡಭಾಗದ ಫೋಟೋ ನೋಡಿದರೆ ಇದು ಅವರದ್ದೇ ಎಂದು ತಿಳಿಯುತ್ತದೆ. ಆದರೆ, ಬಲಭಾಗದ ಫೋಟೋ ಎಐನಿಂದ ಮಾಡಲ್ಪಟ್ಟಿದ್ದು ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ.

ಇದನ್ನೂ ಓದಿ: ಮೂರನೇ ಬಾರಿ ಸ್ಟಾರ್ ನಟನೊಟ್ಟಿಗೆ ತೆರೆ ಹಂಚಿಕೊಳ್ಳಲಿರುವ ಸಾಯಿ ಪಲ್ಲವಿ

ಸಾಯಿ ಪಲ್ಲವಿ ಸ್ವಿಮ್ ಸ್ಯೂಟ್ ಹಾಕಿರೋ ಫೋಟೋ ಮಾರ್ಫ್ ಮಾಡಿದಂತೆ ಕಾಣುತ್ತದೆ. ಹೀಗಾಗಿ, ಅನೇಕರು ಈ ಬಗ್ಗೆ ಸಿಟ್ಟು ಹೊರಹಾಕಿದ್ದಾರೆ. ಈ ರೀತಿ ಮಾಡೋದು ತಪ್ಪು ಎಂದು ಅನೇಕರು ಹೇಳಿದ್ದಾರೆ. ಇನ್ನೂ ಕೆಲವರು ಫೋಟೋ ಪ್ರೂಫ್ ಕೊಡುವಂತೆ ಕೇಳಿದ್ದಾರೆ. ಇನ್ನೂ ಕೆಲವರು ಇದು ನಿಜವೇ ಆದರೂ ವೈಯಕ್ತಿಕ ವೆಕೇಶನ್​ನಲ್ಲಿರುವಾಗ ಯಾವ ಉಡುಗೆ ಧರಿಸಬೇಕು ಎಂಬುದು ಅವರ ಆಯ್ಕೆ ಎಂದಿದ್ದಾರೆ.

ಸಾಯಿ ಪಲ್ಲವಿ ಸ್ವಿಮ್ ಸ್ಯೂಟ್

ಸಾಯಿ ಪಲ್ಲವಿ ಅವರು ಟ್ರೆಡಿಷನಲ್ ಉಡುಗೆಯಲ್ಲಿ ಮಾತ್ರ ಕಾಣಿಸಿಕೊಳ್ಳಲು ಒಂದು ಕಾರಣವೂ ಇದೆ. ಈ ಮೊದಲು ಅವರು ಡ್ಯಾನ್ಸ್ ಒಂದಕ್ಕಾಗಿ ಚಿಕ್ಕ ಉಡುಗೆ ಹಾಕಿದ್ದರು. ಈ ವೇಳೆ ಡ್ಯಾನ್ಸ್ ಹೈಲೈಟ್ ಆಗುವ ಬದಲು ಅವರ ಬಟ್ಟೆ ಬಗ್ಗೆ ಚರ್ಚೆ ಆಗಿತ್ತಂತೆ. ಇದು ಅವರ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಹೀಗಾಗಿ, ಅವರು ಮೈ ಕಾಣಿಸುವ ಬಟ್ಟೆಯನ್ನು ಹಾಕುವುದನ್ನೇ ನಿಲ್ಲಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.