ನಟಿ ಸಾಯಿ ಪಲ್ಲವಿ ಅವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ನಟನೆಯಲ್ಲಿ ಅವರನ್ನು ಮೀರೀಸೋರು ಯಾರೂ ಇಲ್ಲ ಎಂದರೂ ತಪ್ಪಾಗಲಾದರು. ಯಾವುದೇ ಗ್ಲಾಮರ್ ಪಾತ್ರಗಳನ್ನು ಮಾಡದೆ ಮೆಚ್ಚುಗೆ ಪಡೆದವರು ಅವರು. ಅವರ ನಟನೆಯ ‘ಅಮರನ್’ ಸಿನಿಮಾ ಇಂದು (ಅಕ್ಟೋಬರ್ 31) ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಶಿವಕಾರ್ತಿಕೇಯ ಅವರ ಜೊತೆ ಸಾಯಿ ಪಲ್ಲವಿ ಜೊತೆಯಾಗಿದ್ದಾರೆ. ಈ ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಮಣಿರತ್ನಂ ಅವರು ಅತಿಥಿಯಾಗಿ ಬಂದಿದ್ದರು. ಅವರು ಸಾಯಿ ಪಲ್ಲವಿಯನ್ನು ಹೊಗಳಿದ್ದಾರೆ.
‘ಸಾಯಿ ಪಲ್ಲವಿ ಅವರು ಮಾಡುವ ಪಾತ್ರಗಳು ನೈಜವಾಗಿ ಇರುತ್ತವೆ. ಈ ಸಿನಿಮಾದಲ್ಲಿ ಚೆನ್ನಾಗಿಯೇ ಮಾಡಿರುತ್ತಾರೆ ಎಂದು ನನಗೆ ಅನಿಸುತ್ತಿದೆ. ನಾನು ಅವರ ದೊಡ್ಡ ಅಭಿಮಾನಿ’ ಎಂದು ಮಣಿರತ್ನಂ ಅವರು ಹೇಳುತ್ತಿದ್ದಂತೆ ಸಾಯಿ ಪಲ್ಲವಿ ಅವರು ನಾಚಿ ನೀರಾದರು.
ಸಾಯಿ ಪಲ್ಲವಿ ಜೊತೆ ಕೆಲಸ ಮಾಡಬೇಕು ಎಂದು ಅನೇಕ ಯುವ ನಿರ್ದೇಶಕರು ಅಂದುಕೊಳ್ಳೋದು ಸಹಜ. ಪಲ್ಲವಿ ಕೇವಲ ಯುವ ನಿರ್ದೇಶಕರಿಗೆ ಮಾತ್ರವಲ್ಲ ಹಿರಿಯ ನಿರ್ದೇಶಕರ ಫೇವರಿಟ್ ಕೂಡ ಹೌದು ಅನ್ನೋದು ಸಾಬೀತಾಗಿದೆ. ‘ನಾನು ಮುಂದೊಂದು ದಿನ ನಿಮ್ಮ ಜೊತೆ ಕೆಲಸ ಮಾಡಬೇಕು’ ಎಂದು ಅವರು ಹೇಳಿದ್ದಾರೆ.
ಸಾಯಿ ಪಲ್ಲವಿ ಅವರು ಮಣಿರತ್ನಂ ಅವರಿಂದ ಈ ರೀತಿಯ ಮಾತುಗಳನ್ನು ನಿರೀಕ್ಷಿಸಿರಲೇ ಇಲ್ಲ. ಹೀಗಾಗಿ ಅವರು ಕರಗಿ ನಾಚಿ ನೀರಾದರು. ಅವರು ಮಣಿರತ್ನಂ ಅವರ ಮಾತಿಗೆ ಧನ್ಯವಾದ ಹೇಳಿದರು. ‘ಅಮರನ್’ ಚಿತ್ರವು ಮೇಜರ್ ಮುಕುಂದ್ ವರದರಾಜನ್ ಅವರ ಜೀವನ ಆಧರಿಸಿದೆ. ಶಿವಕಾರ್ತಿಕೇಯ ಅವರು ಮುಕುಂದ್ ಪಾತ್ರ ಮಾಡಿದ್ದಾರೆ. ಸಾಯಿ ಪಲ್ಲವಿ ಅವರು ಮುಕುಂದ್ ಪತ್ನಿ ಇಂದು ರೆಬೆಕಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವನ್ನು ರಾಜ್ಕುಮಾರ್ ಪೆರಿಯಸ್ವಾಮಿ ನಿರ್ದೇಶನ ಮಾಡಿದ್ದಾರೆ. ಈ ಚಿತ್ರವು ಶಿವ ಅರೂರ್ ಹಾಗೂ ರಾಹುಲ್ ಸಿಂಘ ಬರೆದ ಪುಸ್ತಕವನ್ನು ಆಧರಿಸಿದೆ.
ಇದನ್ನೂ ಓದಿ: 33 ವರ್ಷಗಳ ಬಳಿಕ ಮಣಿರತ್ನಂ ಸಿನಿಮಾದಲ್ಲಿ ನಟಿಸಲಿರುವ ರಜನೀಕಾಂತ್
ಮಣಿರತ್ನಂ ಅವರು ಸದ್ಯ ‘ಥಗ್ ಲೈಫ್’ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದಲ್ಲಿ ಕಮಲ್ ಹಾಸನ್ ಹೀರೋ. ಮಣಿರತ್ನಂ ಸಿನಿಮಾಗಳ ಬಗ್ಗೆ ಅವರ ಕೆಲಸಗಳ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಅವರ ಸಿನಿಮಾಗಳಲ್ಲಿ ಅದ್ದೂರಿತನ ಹೆಚ್ಚೇ ಇರುತ್ತದೆ. ಅವರು ಓಪನ್ ಆಗಿ ಒಂದು ಕಲಾವಿದರನ್ನು ಹೊಗಳಿದ್ದೂ ಕಡಿಮೆಯೇ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.