ಅವನು ನನ್ನನ್ನು ಕೊಲ್ಲಲು ಯತ್ನಿಸಿದ, ಮಗನನ್ನು ಗಾಯಗೊಳಿಸಿದ: ಸೈಫ್

Saif Ali Khan: ಕಳೆದ ವರ್ಷ ಜನವರಿ ತಿಂಗಳಲ್ಲಿ ಸೈಫ್ ಅಲಿ ಖಾನ್ ಮನೆ ಪ್ರವೇಶಿಸಿದ್ದ ಅಗಂತುಕನೊಬ್ಬ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ, ಹಲವು ಬಾರಿ ಸೈಫ್ ಅಲಿ ಖಾನ್ ಅನ್ನು ಚಾಕುವಿನಿಂದ ಚುಚ್ಚಿ ದಾಳಿ ಮಾಡಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ಸೈಫ್ ಅಲಿ ಖಾನ್ ಕೆಲ ದಿನಗಳ ಬಳಿಕ ಗುಣಮುಖರಾಗಿ ಹೊರಬಂದಿದ್ದರು. ಈ ಹಿಂದೆ ಕೆಲ ಬಾರಿ ಆ ಬಗ್ಗೆ ಮಾತನಾಡಿದ್ದ, ಸೈಫ್ ಅಲಿ ಖಾನ್ ಇದೀಗ ಮತ್ತೊಮ್ಮೆ ಆ ದಾಳಿಕೋರನ ಬಗ್ಗೆ ಮಾತನಾಡಿದ್ದು, ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

ಅವನು ನನ್ನನ್ನು ಕೊಲ್ಲಲು ಯತ್ನಿಸಿದ, ಮಗನನ್ನು ಗಾಯಗೊಳಿಸಿದ: ಸೈಫ್
Saif Ali Khan

Updated on: Jun 27, 2026 | 7:38 PM

ಬಾಲಿವುಡ್ ಸ್ಟಾರ್ ನಟ ಸೈಫ್ ಅಲಿ ಖಾನ್ (Saif Ali Khan), ಇತ್ತೀಚೆಗೆ ದಕ್ಷಿಣ ಭಾರತ ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಕಳೆದ ವರ್ಷ ಜನವರಿ ತಿಂಗಳಲ್ಲಿ ಸೈಫ್ ಅಲಿ ಖಾನ್ ಮನೆ ಪ್ರವೇಶಿಸಿದ್ದ ಅಗಂತುಕನೊಬ್ಬ ಸೈಫ್ ಅಲಿ ಖಾನ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದ, ಹಲವು ಬಾರಿ ಸೈಫ್ ಅಲಿ ಖಾನ್ ಅನ್ನು ಚಾಕುವಿನಿಂದ ಚುಚ್ಚಿ ದಾಳಿ ಮಾಡಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ಸೈಫ್ ಅಲಿ ಖಾನ್ ಕೆಲ ದಿನಗಳ ಬಳಿಕ ಗುಣಮುಖರಾಗಿ ಹೊರಬಂದಿದ್ದರು. ಈ ಹಿಂದೆ ಕೆಲ ಬಾರಿ ಆ ಬಗ್ಗೆ ಮಾತನಾಡಿದ್ದ, ಸೈಫ್ ಅಲಿ ಖಾನ್ ಇದೀಗ ಮತ್ತೊಮ್ಮೆ ಆ ದಾಳಿಕೋರನ ಬಗ್ಗೆ ಮಾತನಾಡಿದ್ದು, ಅಂದು ನಡೆದ ಘಟನೆಯನ್ನು ವಿವರಿಸಿದ್ದಾರೆ.

ಸೈಫ್ ಅಲಿ ಖಾನ್ ಹೇಳಿರುವಂತೆ, ಆ ವ್ಯಕ್ತಿ ಸೈಫ್​ ಅವರ ಮನೆಯ ಬಾತ್​​ರೂಂ ಕಿಟಕಿ ಮೂಲಕ ಪ್ರವೇಶಿಸಿದವನೇ ನೇರವಾಗಿ ಪುತ್ರ ಜೆಹ್ ಮಲಗಿದ್ದ ರೂಮಿಗೆ ಹೋದನಂತೆ. ಜೆಹ್ ಅನ್ನು ನೋಡಿಕೊಳ್ಳಲು ನೇಮಿಸಲಾಗಿದ್ದ ನ್ಯಾನಿ, ಸೈಫ್ ಅಲಿ ಖಾನ್ ರೂಮಿಗೆ ಬಂದವರೇ ಜೆಹ್ ರೂಮಿಗೆ ಅಗಂತುಕ ಬಂದಿದ್ದು, ಚಾಕು ಹಿಡಿದು ಹಣಕ್ಕೆ ಬೇಡಿಕೆ ಇಡುತ್ತಿದ್ದಾನೆ ಎಂದರಂತೆ. ಕೂಡಲೆ ಎದ್ದು ಓಡಿದ ಸೈಫ್ ಅಲಿ ಖಾನ್, ಹೋದವರೆ ಅಗಂತುಕನ ಮೇಲೆ ಹಾರಿ ಬಿದ್ದರಂತೆ.

‘ನಾನು ಅಂದು ತುಸು ತಡೆದು ಲೈಟ್ ಆನ್ ಮಾಡಿ ಆತನೊಂದಿಗೆ ಮಾತನಾಡಿದ್ದಿದ್ದರೆ ಸರಿ ಇರುತ್ತಿತ್ತು. ಆತನಿಗೆ ಸಹ ತಾನು ಎಲ್ಲಿಗೆ ಬಂದಿದ್ದೇನೆ ಎಂಬುದು ಅರಿವಾಗಿರುತ್ತಿತ್ತು’ ಎಂದಿದ್ದಾರೆ. ‘ಅಂದು ಆತನಿಗೂ ನನಗೆ ಒಂದು ರೀತಿ ಜಟಾಪಟಿಯೇ ನಡೆಯಿತು. ಆತ ಚಾಕುವಿನಿಂದ ಸತತವಾಗಿ ಚುಚ್ಚಿದ, ಆತ ನನ್ನನ್ನು ಕೊಲ್ಲಲೇ ಬೇಕು ಎಂದು ನಿರ್ಣಯಿಸಿದಂತೆ ಇತ್ತು ಆತನ ದಾಳಿ. ಆತ ನನ್ನ ಮಗ ಜೆಹ್​​ನಿಗೂ ಗಾಯ ಮಾಡಿದ’ ಎಂದಿದ್ದಾರೆ ಸೈಫ್ ಅಲಿ ಖಾನ್.

ಇದನ್ನೂ ಓದಿ:ಹಣ ಬಂದರೂ ಸಿನಿಮಾ ನಿರ್ಮಾಣ ಕೈಬಿಟ್ಟಿದ್ದೇಕೆ ಸೈಫ್ ಅಲಿ ಖಾನ್?

‘ನಾನು ಅಂದು ನೆಲದ ಮೇಲೆ ಬಿದ್ದಿದ್ದಾಗ ನಾನು ಬದುಕುವುದಿಲ್ಲ ಎಂದುಕೊಂಡಿದ್ದೆ. ನನ್ನ ಮಗ ಜೆಹ್ ಸಹ ಬಂದು ನೀವು ಸಾಯುತ್ತೀರ ಅಪ್ಪ ಎಂದು ಅಳುತ್ತಾ ಕೇಳಿದ್ದ. ಬಳಿಕ ನಾನು ಆಸ್ಪತ್ರೆಗೆ ಹೊರೆಟೆ ಆಗ ನನಗೆ ತುಸು ನಂಬಿಕೆ ಬಂದು. ನಾನು ಆಟೋ ಹತ್ತಿದಾಗ, ನಾನು ಧರಿಸಿದ್ದ ಪೈಜಾಮ ಸಂಪೂರ್ಣ ರಕ್ತಮಯವಾಗಿತ್ತು. ಆದರೆ ನನಗೆ ಬದುಕಬೇಕೆಂಬ ಛಲ ಬಂದುಬಿಟ್ಟಿತ್ತು’ ಎಂದಿದ್ದಾರೆ ಸೈಫ್ ಅಲಿ ಖಾನ್.

‘ನಾವು ಆ ಬಳಿಕ ಮನೆಯಲ್ಲಿ ಹಲವು ಬಾರಿ ಈ ಬಗ್ಗೆ ಮಾತನಾಡಿದೆವು. ಆ ವ್ಯಕ್ತಿಯನ್ನು ಕ್ಷಮಿಸಬೇಕಾ ಬೇಡವ ಎಂಬ ಬಗ್ಗೆ ನನಗೆ ನಾನು ಹಲವು ಬಾರಿ ಯೋಚಿಸಿದ್ದೇನೆ. ಆದರೆ ಆತ ನನ್ನನ್ನು ಕೊಲ್ಲಲೇ ಬೇಕೆಂಬ ಹಠದಲ್ಲಿ ಚಾಕು ಬೀಸಿದ್ದು ನೆನಪಿಸಿಕೊಂಡಾಗಲೆಲ್ಲ ನಾನು ಕ್ಷಮಿಸಲು ಸೋಲುತ್ತಿದ್ದೆ. ಕೊನೆಗೆ ಮನೆಯವರೆಲ್ಲ ಮಾತನಾಡಿ, ಅವನನ್ನು ಕ್ಷಮಿಸಲು ತೀರ್ಮಾನಿಸಿದೆವು’ ಎಂದಿದ್ದಾರೆ ಸೈಫ್ ಅಲಿ ಖಾನ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us