Prithviraj Sukumaran: ಸರ್ಜರಿ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ನಟ ಪೃಥ್ವಿರಾಜ್​ ಸುಕುಮಾರನ್​​; ಆದರೂ ಇದೆ ಒಂದು ಬೇಸರ

Prithviraj Sukumaran Discharged: ಪೃಥ್ವಿರಾಜ್​ ಸುಕುಮಾರನ್​ ಅವರಿಗೆ ಸಖತ್​ ಬೇಡಿಕೆ ಇದೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಅವರು ಯಶಸ್ಸು ಕಂಡಿದ್ದಾರೆ.

Prithviraj Sukumaran: ಸರ್ಜರಿ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆದ ನಟ ಪೃಥ್ವಿರಾಜ್​ ಸುಕುಮಾರನ್​​; ಆದರೂ ಇದೆ ಒಂದು ಬೇಸರ
ಪೃಥ್ವಿರಾಜ್​ ಸುಕುಮಾರನ್​

Updated on: Jun 29, 2023 | 1:13 PM

ಬಹುಭಾಷಾ ನಟ ಪೃಥ್ವಿರಾಜ್​ ಸುಕುಮಾರನ್​ (Prithviraj Sukumaran) ಅವರ ಅಭಿಮಾನಿಗಳಿಗೆ ಕೆಲವೇ ದಿನಗಳ ಹಿಂದೆ ಬೇಸರದ ಸುದ್ದಿ ಕೇಳಿಬಂದಿತ್ತು. ಶೂಟಿಂಗ್​ ಮಾಡುವಾಗ ಅವರಿಗೆ ಪೆಟ್ಟಾಗಿದ್ದರಿಂದ ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಈಗ ಅವರಿಗೆ ಶಸ್ತ್ರ ಚಿಕಿತ್ಸೆ (Prithviraj Sukumaran Surgery) ಮಾಡಲಾಗಿದೆ. ಸರ್ಜರಿ ಯಶಸ್ವಿಯಾಗಿದ್ದು, ಪೃಥ್ವಿರಾಜ್​ ಸುಕುಮಾರನ್​ ಅವರನ್ನು ಡಿಸ್ಚಾರ್ಜ್​ ಮಾಡಲಾಗಿದೆ. ಇದರಿಂದ ಅಭಿಮಾನಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದರೂ ಕೂಡ ಇನ್ನೊಂದು ಬೇಸರದ ವಿಷಯ ಇದೆ. ಅದೇನೆಂದರೆ, ಇನ್ನೂ ಕೆಲವು ತಿಂಗಳ ಕಾಲ ಪೃಥ್ವಿರಾಜ್​ ಸುಕುಮಾರನ್​ ಅವರು ಯಾವುದೇ ಸಿನಿಮಾದ ಶೂಟಿಂಗ್​ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಪೃಥ್ವಿರಾಜ್​ ಸುಕುಮಾರನ್​ ಅವರಿಗೆ ಸಖತ್​ ಬೇಡಿಕೆ ಇದೆ. ಹಲವು ವರ್ಷಗಳಿಂದ ಅವರು ಸಿನಿಮಾರಂಗದಲ್ಲಿ ತೊಡಗಿಕೊಂಡಿದ್ದಾರೆ. ನಟನಾಗಿ ಮಾತ್ರವಲ್ಲದೇ ನಿರ್ದೇಶಕರಾಗಿಯೂ ಅವರು ಯಶಸ್ಸು ಕಂಡಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್​’ ಸೇರಿದಂತೆ ಅನೇಕ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಗಳ ಜೊತೆಗೆ ಅವರು ಸಿನಿಮಾ ಮಾಡುತ್ತಿದ್ದಾರೆ. ಇಂಥ ಸಮಯದಲ್ಲಿ ಅವರಿಗೆ ಪೆಟ್ಟಾಗಿದ್ದು, ಎಲ್ಲ ಕೆಲಸಗಳಿಗೆ ಬ್ರೇಕ್​ ನೀಡಬೇಕಾಯಿತು. ಸರ್ಜರಿ ಯಶಸ್ವಿಯಾದರೂ ಕೂಡ ಪೃಥ್ವಿರಾಜ್​ ಸುಕುಮಾರನ್​ ಅವರು ಶೂಟಿಂಗ್​ನಲ್ಲಿ ಭಾಗಿಯಾಗಲು ಸದ್ಯಕ್ಕೆ ಸಾಧ್ಯವಿಲ್ಲ. ಒಂದಷ್ಟು ತಿಂಗಳ ಕಾಲ ಅವರು ಮನೆಯಲ್ಲೇ ವಿಶ್ರಾಂತಿ ಪಡೆಯಬೇಕಿದೆ.

ಇದನ್ನೂ ಓದಿ: Prithviraj Sukumaran: ‘ನನ್ನಿಂದ ತಪ್ಪಾಗಿದೆ, ಒಪ್ಪಿಕೊಳ್ತೀನಿ, ದಯವಿಟ್ಟು ಕ್ಷಮಿಸಿ’: ಬಹಿರಂಗವಾಗಿ ಕ್ಷಮೆ ಕೇಳಿದ ಪೃಥ್ವಿರಾಜ್​ ಸುಕುಮಾರನ್​

ಪ್ರಶಾಂತ್​ ನೀಲ್​ ನಿರ್ದೇಶನದ ‘ಸಲಾರ್​’ ಸಿನಿಮಾದಲ್ಲಿ ಪೃಥ್ವಿರಾಜ್​ ಸುಕುಮಾರನ್​ ಅವರಿಗೆ ಒಂದು ಪ್ರಮುಖ ಪಾತ್ರ ಇದೆ. ಪ್ರಭಾಸ್​ ನಾಯಕನಾಗಿರುವ ಈ ಚಿತ್ರದಲ್ಲಿ ಪೃಥ್ವಿರಾಜ್​ ಅವರದ್ದು ನೆಗೆಟಿವ್​ ರೋಲ್​ ಎಂದು ಸಿನಿಪ್ರಿಯರು ಊಹಿಸುತ್ತಿದ್ದಾರೆ. ಈ ಹಿಂದೆ ಬಿಡುಗಡೆಯಾದ ಫಸ್ಟ್​ ಲುಕ್​ ಪೋಸ್ಟರ್​ನಲ್ಲಿ ಅವರ ಗೆಟಪ್​ ಗಮನ ಸೆಳೆದಿತ್ತು. ಈ ಚಿತ್ರಕ್ಕೆ ಶೂಟಿಂಗ್​ ಮುಕ್ತಾಯವಾಗಿದೆ. ಪೃಥ್ವಿರಾಜ್​ ಸುಕುಮಾರನ್​ ಅವರು ವಿಶ್ರಾಂತಿ ಪಡೆದು, ಸಂಪೂರ್ಣ ಚೇತರಿಸಿಕೊಳ್ಳುವ ವೇಳೆಗೆ ಈ ಚಿತ್ರದ ಪ್ರಚಾರ ಕಾರ್ಯಗಳು ಆರಂಭ ಆಗಲಿವೆ.

ಇದನ್ನೂ ಓದಿ: ‘ಸಲಾರ್ ಚಿತ್ರದಲ್ಲಿ ನಾನೂ ನಟಿಸುತ್ತಿದ್ದೇನೆ’; ಬ್ರೇಕಿಂಗ್ ನ್ಯೂಸ್ ನೀಡಿದ ನಟ ಪೃಥ್ವಿರಾಜ್​ ಸುಕುಮಾರನ್

ಇಡುಕಿ ಜಿಲ್ಲೆಯಲ್ಲಿ ‘ವಿಲಾಯತ್​ ಬುದ್ಧ’ ಸಿನಿಮಾದ ಶೂಟಿಂಗ್​ ನಡೆಯುತ್ತಿತ್ತು. ಆ ಸಂದರ್ಭದಲ್ಲಿ ಆ್ಯಕ್ಷನ್​ ದೃಶ್ಯಗಳಲ್ಲಿ ನಟಿಸುತ್ತಿದ್ದ ಪೃಥ್ವಿರಾಜ್​ ಸುಕುಮಾರನ್​ ಅವರು ಗಾಯಗೊಂಡರು. ಆ ಸುದ್ದಿ ತಿಳಿದಾಗ ಅಭಿಮಾನಿಗಳಿಗೆ ಆತಂಕ ಆಗಿತ್ತು. ಆದರೆ ಈಗ ಅವರಿಗೆ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ತಾವು ಚೇತರಿಸಿಕೊಳ್ಳುತ್ತಿರುವುದಾಗಿ ಸ್ವತಃ ಪೃಥ್ವಿರಾಜ್​ ಸುಕುಮಾರನ್​ ಮಾಹಿತಿ ನೀಡಿದ್ದಾರೆ. ಅಲ್ಲದೇ ತಮ್ಮ ಬಗ್ಗೆ ಕಾಳಜಿ ತೋರಿಸಿದ ಎಲ್ಲರಿಗೂ ಅವರು ಧನ್ಯವಾದ ಅರ್ಪಿಸಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us