Prabhas: ‘ಸಲಾರ್’ ರಿಲೀಸ್ಗೂ ಮೊದಲೇ ಪ್ರಭಾಸ್ಗೆ ಶಾಕ್ ಕೊಟ್ಟ ಹ್ಯಾಕರ್ಸ್
ಪ್ರಭಾಸ್ ಅವರು ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ರಿಲೀಸ್ಗೂ ಮೊದಲು ಪ್ರಭಾಸ್ ಫೇಸ್ಬುಕ್ ಖಾತೆ ಹ್ಯಾಕ್ ಮಾಡಲಾಗಿದೆ.
ಪ್ರಭಾಸ್ (Prabhas) ಅವರಿಗೆ ಇತ್ತೀಚೆಗೆ ಟೈಮ್ ಸರಿ ಇಲ್ಲ. ಅವರ ನಟನೆಯ ಸಾಲು ಸಾಲು ಸಿನಿಮಾಗಳು ಸೋಲು ಕಾಣುತ್ತಿವೆ. ಇತ್ತೀಚೆಗೆ ರಿಲೀಸ್ ಆದ ‘ಆದಿಪುರುಷ್’ ಸಿನಿಮಾ (Adipurush Movie) ಕೂಡ ಸೋತಿತ್ತು. ಬಿಗ್ ಬಜೆಟ್ನಲ್ಲಿ ರೆಡಿ ಆದ ಸಿನಿಮಾ ಕಮಾಲ್ ಮಾಡುವಲ್ಲಿ ವಿಫಲ ಆಯಿತು. ಈಗ ಪ್ರಭಾಸ್ ಅವರಿಗೆ ಹ್ಯಾಕರ್ಸ್ ಶಾಕ್ ನೀಡಿದ್ದಾರೆ. ಅವರ ಫೇಸ್ಬುಕ್ ಖಾತೆಯನ್ನು ಹ್ಯಾಕ್ ಮಾಡಿ ಬೇಕಾಬಿಟ್ಟಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ಈಗ ಅವರ ಖಾತೆಯನ್ನು ಹ್ಯಾಕರ್ಸ್ಗಳ ಕೈನಿಂದ ಮರಳಿ ಪಡೆಯಲಾಗಿದೆ. ಈ ಬಗ್ಗೆಯೂ ಪ್ರಭಾಸ್ ಅಪ್ಡೇಟ್ ನೀಡಿದ್ದಾರೆ.
ಕಳೆದ ತಿಂಗಳು ಪ್ರಭಾಸ್ ನಟನೆಯ ‘ಆದಿಪುರುಷ್’ ಚಿತ್ರ ರಿಲೀಸ್ ಆಯಿತು. ಈ ಸಿನಿಮಾಗೆ ಎಲ್ಲ ಕಡೆಗಳಿಂದ ಟೀಕೆ ವ್ಯಕ್ತವಾಯಿತು. ಈಗ ಅವರು ‘ಸಲಾರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರ ರಿಲೀಸ್ಗೂ ಮೊದಲು ಪ್ರಭಾಸ್ ಫೇಸ್ಬುಕ್ ಖಾತೆ ಹ್ಯಾಕ್ ಮಾಡಲಾಗಿದೆ. ಬಳಿಕ ಎರಡು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ. ಅವರ ಖಾತೆಯಿಂದ ಪೋಸ್ಟ ಆದ ಎರಡೂ ವೈರಲ್ ವಿಡಿಯೋಗಳು.
ಪ್ರಭಾಸ್ ಏಕೆ ವೈರಲ್ ವಿಡಿಯೋಗಳನ್ನು ಪೋಸ್ಟ್ ಮಾಡಿದರು ಎಂದು ಎಲ್ಲರೂ ಆಲೋಚಿಸಿದ್ದರು. ಕೆಲವರು ಈ ಬಗ್ಗೆ ಟೀಕೆ ಮಾಡಿದ್ದರು. ಇದಾದ ಕೆಲವೇ ಹೊತ್ತಲ್ಲಿ ಪ್ರಭಾಸ್ ಅವರು ಇನ್ಸ್ಟಾಗ್ರಾಮ್ನಲ್ಲಿ ಸ್ಟೋರಿ ಹಾಕಿದ್ದರು. ‘ಎಲ್ಲರಿಗೂ ಹೆಲೋ. ನನ್ನ ಫೇಸ್ಬುಕ್ ಖಾತೆ ಹ್ಯಾಕ್ ಮಾಡಲಾಗಿದೆ. ನಮ್ಮ ತಂಡದವರು ಇದನ್ನು ಸರಿಪಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದು ಬರೆದುಕೊಂಡಿದ್ದಾರೆ. ಈಗ ಫೇಸ್ಬುಕ್ ಖಾತೆ ಸರಿಯಾಗಿದ್ದು, ಮರಳಿ ಪಡೆಯಲಾಗಿದೆ.
ಇದನ್ನೂ ಓದಿ: ‘ಪ್ರಭಾಸ್ ಜೊತೆ ನಾನು ಸ್ಪರ್ಧಿಸಲ್ಲ, ನನ್ನನ್ನು ಬಿಟ್ಟುಬಿಡಿ’; ಬೇಡಿಕೊಂಡ ವಿವೇಕ್ ಅಗ್ನಿಹೋತ್ರಿ
ಪ್ರಭಾಸ್ ನಟನೆಯ ಮುಂದಿನ ಸಿನಿಮಾ ‘ಸಲಾರ್’ ಹಾಗೂ ‘ಕಲ್ಕಿ 2898 ಎಡಿ’ ಸಿನಿಮಾದ ಗ್ಲಿಂಪ್ಸ್ ರಿಲೀಸ್ ಆಗಿದೆ. ಈ ಎರಡೂ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ‘ಸಲಾರ್’ ಸಿನಿಮಾ ಸೆಪ್ಟೆಂಬರ್ 28ರಂದು ರಿಲೀಸ್ ಆಗಲಿದೆ. ‘ಕಲ್ಕಿ 2898 ಎಡಿ’ ಸಿನಿಮಾ ಮುಂದಿನ ವರ್ಷ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ