ಕೊರೊನಾ ವೈರಸ್ ಎರಡನೆ ಅಲೆ ಮಿತಿಮೀರಿ ಹರಡುತ್ತಿರುವುದರಿಂದ ಸಾಕಷ್ಟು ಕಡೆಗಳಲ್ಲಿ ಚಿತ್ರಮಂದಿರಗಳನ್ನು ಮುಚ್ಚುವ ಆದೇಶ ಹೊರಡಿಸಲಾಗಿದೆ. ಇದಕ್ಕೆ ಕರ್ನಾಟಕ ಕೂಡ ಹೊರತಾಗಿಲ್ಲ. ಇದರ ಮಧ್ಯೆಯೂ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷಿತ ರಾಧೆ ಸಿನಿಮಾ ತೆರೆಕಾಣುತ್ತಿದೆ. ಈ ಚಿತ್ರಕ್ಕೆ ಸೆನ್ಸಾರ್ ಮಂಡಳಿ U/A ಪ್ರಮಾಣಪತ್ರ ಸಿಕ್ಕಿದೆ. ವಿಶೇಷ ಎಂದರೆ, ಈ ಚಿತ್ರದ ಅವಧಿ ಕೇವಲ 114 ನಿಮಿಷ ಇರಲಿದೆಯಂತೆ.
ಸಲ್ಮಾನ್ ಖಾನ್ ಸಿನಿಮಾದಲ್ಲಿ ಆ್ಯಕ್ಷನ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಈ ಮೊದಲು ತೆರೆಕಂಡ ಸಲ್ಮಾನ್ ನಟನೆಯ ಚಿತ್ರಗಳು ಎರಡೂವರೆ ಗಂಟೆಗೂ ಮೀರಿ ಇರುತ್ತಿದ್ದವು. ಆದರೆ, ಈಗ ಈ ಸಿನಿಮಾ ಕೇವಲ 114 ನಿಮಿಷ ಇರಲಿದೆ ಎನ್ನುವ ವಿಚಾರ ಅಭಿಮಾನಿಗಳಿಗೆ ಕೊಂಚ ಬೇಸರ ತರಿಸಿದೆ.
ಪ್ರತಿ ವರ್ಷ ಈದ್ ಹಬ್ಬಕ್ಕೆ ಸಲ್ಮಾನ್ ಖಾನ್ ನಟನೆಯ ಯಾವುದಾದರೊಂದು ಸಿನಿಮಾ ಬಿಡುಗಡೆ ಆಗುವುದು ವಾಡಿಕೆ. ಈ ವರ್ಷವೂ ಅದು ಮುಂದುವರಿಯಲಿದೆ. ಮೇ 13ರಂದು ಈ ಚಿತ್ರ ಓಟಿಟಿ ಮತ್ತು ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಕೊರೊನಾ ನಿಯಂತ್ರಣಕ್ಕೆ ಮಹಾರಾಷ್ಟ್ರ, ಕರ್ನಾಟಕ ಸೇರಿ ಸಾಕಷ್ಟು ಕಡೆಗಳಲ್ಲಿ ಚಿತ್ರಮಂದಿರ ಬಂದ್ ಮಾಡಲಾಗಿದೆ. ಹೀಗಾಗಿ, ಸಾಕಷ್ಟು ಚಿತ್ರಗಳ ರಿಲೀಸ್ ದಿನಾಂಕ ಮುಂದೂಡಲ್ಪಟ್ಟಿದೆ. ಆದರೆ, ರಾಧೆ ಮಾತ್ರ ಈ ವಿಚಾರದಲ್ಲಿ ನಿರ್ಧಾರ ಬದಲಿಸಿಲ್ಲ. ಇತ್ತೀಚೆಗೆ ಚಿತ್ರದ ಟ್ರೇಲರ್ ರಿಲೀಸ್ ಆಗಿ ಭಾರೀ ಹೈಪ್ ಸೃಷ್ಟಿ ಮಾಡಿತ್ತು.
Help #Radhe so that he can help you. Check out Radhe’s new dialogue promo.https://t.co/fc8OS8DNXC @BeingSalmanKhan @bindasbhidu @DishPatani @RandeepHooda @PDdancing @TheGautamGulati @arjun_kanungo @sangaytsheltrim
— Salman Khan Films (@SKFilmsOfficial) May 3, 2021
ರಾಧೆ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹೀರೋ ಆಗಿ ಕಾಣಿಸಿಕೊಂಡಿದ್ದಾರೆ. ಪ್ರಭುದೇವ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಜಾಕಿ ಶ್ರಾಫ್, ರಣದೀಪ್ ಹೂಡಾ ಮತ್ತು ದಿಶಾ ಪಠಾಣಿ ಸಿನಿಮಾದಲ್ಲಿ ಮುಖ್ಯಭೂಮಿಕೆ ನಿರ್ವಹಿಸಿದ್ದಾರೆ.
ಇದನ್ನೂ ಓದಿ: Salman Khan: ಟೈಗರ್ ಶ್ರಾಫ್ ಪ್ರೇಯಸಿ ದಿಶಾಗೆ ಸಲ್ಮಾನ್ ಕಿಸ್ ಮಾಡಿದ್ದು ನಿಜ; ಆದರೆ ಇಲ್ಲಿದೆ ಟ್ವಿಸ್ಟ್