AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಡೆತಡೆ ಮೀರಿ 100 ಕೋಟಿ ಕ್ಲಬ್ ಸೇರಿದ ಸಮಂತಾ ನಟನೆಯ ‘ಮಾ ಇಂಟಿ ಬಂಗಾರಂ’

ನಟಿ ಸಮಂತಾ ರುತ್ ಪ್ರಭು ಅವರ 'ಮಾ ಇಂಟಿ ಬಂಗಾರಂ' ಸಿನಿಮಾ ವಿಶ್ವಾದ್ಯಂತ 100 ಕೋಟಿ ಗಳಿಸಿ ಭರ್ಜರಿ ಯಶಸ್ಸು ಕಂಡಿದೆ. ತಮ್ಮ ಪ್ರೆಗ್ನೆನ್ಸಿ ಸಂಭ್ರಮದ ನಡುವೆಯೇ ಸಮಂತಾ ಈ ಬಿಗ್ ಅಚೀವ್‌ಮೆಂಟ್ ಆಚರಿಸಿದ್ದಾರೆ. ಮಹಿಳಾ ಪ್ರಧಾನ ಸಿನಿಮಾಗಳ ಬಗ್ಗೆ ಚಿತ್ರರಂಗದಲ್ಲಿದ್ದ ನೆಗೆಟಿವ್ ಅಭಿಪ್ರಾಯವನ್ನು ಈ ಚಿತ್ರ ಸುಳ್ಳು ಮಾಡಿದೆ. ಇದು ಇಂಡಿಯನ್ ಸಿನಿಮಾದಲ್ಲಿ ಹೊಸ ಬದಲಾವಣೆಯ ಆರಂಭ ಎಂದು ಸಮಂತಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಡೆತಡೆ ಮೀರಿ 100 ಕೋಟಿ ಕ್ಲಬ್ ಸೇರಿದ ಸಮಂತಾ ನಟನೆಯ 'ಮಾ ಇಂಟಿ ಬಂಗಾರಂ'
ಸಮಂತಾ
ರಾಜೇಶ್ ದುಗ್ಗುಮನೆ
|

Updated on: Jul 13, 2026 | 7:36 AM

Share

ಮುಖ್ಯಾಂಶಗಳು

  • ‘ಮಾ ಇಂಟಿ ಬಂಗಾರಂ' 100 ಕೋಟಿ ಬಾಕ್ಸ್ ಆಫೀಸ್ ಧಮಾಕಾ
  • ಮಹಿಳಾ ಪ್ರಧಾನ ಸಿನಿಮಾಗಳ ಬಗ್ಗೆ ಚಿತ್ರಮಂದಿರಗಳ ಮಾಲೀಕರಿಗೆ ಆತಂಕ
  • ಬಾಕ್ಸ್ ಆಫೀಸ್ ಇತಿಹಾಸ ಬರೆದ ಸಮಂತಾ

ನಟಿ ಸಮಂತಾ ರುತ್ ಪ್ರಭು (Samantha) ಈಗ ಖುಷಿಯಲ್ಲಿದ್ದಾರೆ. ಅವರ ಮುಖ್ಯ ಭೂಮಿಕೆಯ ‘ಮಾ ಇಂಟಿ ಬಂಗಾರಂ’ ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಸಿದೆ. ಈ ಭರ್ಜರಿ ಯಶಸ್ಸನ್ನು ಸಮಂತಾ ತಮ್ಮ ಮನೆಯಲ್ಲೇ ಆಚರಿಸಿದ್ದಾರೆ. ಇತ್ತೀಚೆಗೆ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದ ಅವರು ಈ ಚಿತ್ರದ ಮೂಲಕ ದೊಡ್ಡ ಕಂಬ್ಯಾಕ್ ಮಾಡಿದಂತೆ ಆಗಿದೆ. ಪ್ರೆಗ್ನೆನ್ಸಿ ಸಮಯದಲ್ಲೇ ಅವರಿಗೆ ಈ ಖುಷಿ ಸಿಕ್ಕಿದೆ.

ಖುಷಿ ಹಂಚಿಕೊಂಡ ನಟಿ

ಸಮಂತಾ ಇನ್‌ಸ್ಟಾಗ್ರಾಮ್‌ನಲ್ಲಿ ಈ ಕುರಿತು ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಸಮಂತಾ ಬಿಳಿ ಪೈಜಾಮ ಧರಿಸಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ವೇಳೆ ರಾಜ್ ನಿಡಿಮೋರು ಅವರು ಸಮಂತಾಗೆ ಟ್ಯಾಬ್ಲೆಟ್ ತೋರಿಸಿ ಸುದ್ದಿಯನ್ನು ತಿಳಿಸುತ್ತಾರೆ. ಸಿನಿಮಾ 100 ಕೋಟಿ ಗಳಿಸಿದ್ದನ್ನು ಕಂಡು ಸಮಂತಾ ಅಚ್ಚರಿ ಪಡುತ್ತಾರೆ. ನಂತರ ಮುಗುಳ್ನಕ್ಕು ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಪ್ರೇಕ್ಷಕರು ನೀಡಿದ ಪ್ರೀತಿ ಮತ್ತು ಬೆಂಬಲಕ್ಕೆ ಅವರು ಧನ್ಯವಾದ ತಿಳಿಸಿದ್ದಾರೆ.

ಸಮಂತಾಗೆ ಇತ್ತು ಆತಂಕ

ಸಿನಿಮಾ ಬಿಡುಗಡೆಗೂ ಮುನ್ನ ಇದ್ದ ಆತಂಕವನ್ನು ಸಮಂತಾ ನೆನಪಿಸಿಕೊಂಡಿದ್ದಾರೆ. ‘ಮಹಿಳಾ ಪ್ರಧಾನ ಸಿನಿಮಾವನ್ನು ನೋಡಲು ಜನರು ಬರುತ್ತಾರಾ ಎಂಬ ಸಂದೇಹ ಹಲವರಿಗಿತ್ತು. ಸಮಂತಾ ಅವರ ಸ್ನೇಹಿತರೊಬ್ಬರು ಚಿತ್ರಮಂದಿರದ ಮಾಲೀಕರಿಗೆ ಫೋನ್ ಮಾಡಿದ್ದರು. ಆಗ ಆ ಮಾಲೀಕರು ಮಹಿಳಾ ಪ್ರಧಾನ ಸಿನಿಮಾಗಳನ್ನು ಯಾರು ನೋಡುತ್ತಾರೆ ಎಂದು ಕೀಳಾಗಿ ಮಾತನಾಡಿದ್ದರು. ಕಮರ್ಷಿಯಲ್ ಸಿನಿಮಾಗಳಲ್ಲಿ ಗ್ಲಾಮರ್‌ಗೆ ಮಾತ್ರ ನಟಿಯರನ್ನು ಇಷ್ಟಪಡುತ್ತಾರೆ ಎಂದು ಹೇಳಿದ್ದರು’ ಎಂದಿದ್ದಾರೆ.

ಬದಲಾಗುತ್ತಿದೆ ಸಿನಿಮಾ ಟ್ರೆಂಡ್

ಈ ಯಶಸ್ಸು ಚಿತ್ರರಂಗದಲ್ಲಿ ದೊಡ್ಡ ಬದಲಾವಣೆಯ ಆರಂಭ ಎಂದು ಸಮಂತಾ ನಂಬಿದ್ದಾರೆ. ರಿಸ್ಕ್ ತಗೊಂಡಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಅವರು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳಾ ಪ್ರಧಾನ ಸಿನಿಮಾಗಳಿಗೆ ಇಂತಹ ಒಳ್ಳೆಯ ಪ್ರತಿಕ್ರಿಯೆ ಸಿಗಲಿ ಎಂದು ಅವರು ಆಶಿಸಿದ್ದಾರೆ.

ಇದನ್ನೂ ಓದಿ: ಸಮಂತಾ 100 ಕೋಟಿ ಕ್ಲಬ್ ಕನಸಿಗೆ ಮಾಜಿ ಭಾವ ಅಖಿಲ್ ಅಕ್ಕಿನೇನಿ ಅಡ್ಡಿ? ಬಾಕ್ಸ್ ಆಫೀಸ್‌ನಲ್ಲಿ ಜಿದ್ದಾಜಿದ್ದಿ

ಸಿನಿಮಾ ಕುರಿತು ಮಾಹಿತಿ

‘ಮಾ ಇಂಟಿ ಬಂಗಾರಂ’ ತೆಲುಗು ಆ್ಯಕ್ಷನ್ ಕಾಮಿಡಿ ಸಿನಿಮಾ ಆಗಿದೆ. ಇದನ್ನು ಬಿ. ವಿ. ನಂದಿನಿ ರೆಡ್ಡಿ ನಿರ್ದೇಶಿಸಿದ್ದಾರೆ. ಸಮಂತಾ, ರಾಜ್ ನಿಡಿಮೋರು ಮತ್ತು ಹಿಮಾಂಕ್ ರೆಡ್ಡಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಚಿತ್ರದಲ್ಲಿ ಸಮಂತಾ ಜೊತೆಗೆ ಗುಲ್ಶನ್ ದೇವಯ್ಯ ಮತ್ತು ದಿಗಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ತೆಲುಗಿನ ಅತ್ಯಂತ ಹೆಚ್ಚು ಗಳಿಕೆ ಮಾಡಿದ ಮಹಿಳಾ ಪ್ರಧಾನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us