ಮತ್ತೊಂದು ಸ್ಟಾರ್​ ನಟನಿಗೆ ಜತೆಯಾದ ಸಮಂತಾ; ಇವರನ್ನು ತಡೆಯೋರೆ ಇಲ್ಲ ಎಂದ ಅಭಿಮಾನಿಗಳು

| Updated By: ರಾಜೇಶ್ ದುಗ್ಗುಮನೆ

Updated on: Dec 26, 2021 | 7:41 PM

ಜ್ಯೂ.ಎನ್​ಟಿಆರ್​ಗೆ ಜತೆಯಾಗಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಸದ್ಯ, ಜ್ಯೂ.ಎನ್​ಟಿಆರ್​ ‘ಆರ್​ಆರ್​ಆರ್​’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಜನವರಿ 7ರಂದು ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ.

ಮತ್ತೊಂದು ಸ್ಟಾರ್​ ನಟನಿಗೆ ಜತೆಯಾದ ಸಮಂತಾ; ಇವರನ್ನು ತಡೆಯೋರೆ ಇಲ್ಲ ಎಂದ ಅಭಿಮಾನಿಗಳು
ಸಮಂತಾ
Follow us on

ವಿಚ್ಛೇದನ ಪಡೆದ ನಂತರದಲ್ಲಿ ಸಮಂತಾ ತಲೆಮೇಲೆ ಕೈ ಹೊತ್ತು ಕುಳಿತಿಲ್ಲ. ಬದಲಿಗೆ ಸಾಲುಸಾಲು ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಿಶೇಷ ಹಾಡಿಗೆ ಹೆಜ್ಜೆ ಹಾಕುತ್ತಿದ್ದಾರೆ. ವೃತ್ತಿ ಜೀವನವನ್ನು ಗಟ್ಟಿಗೊಳಿಸಿಕೊಳ್ಳಲು ಏನೆಲ್ಲ ಬೇಕೋ ಅದನ್ನು ಮಾಡುತ್ತಿದ್ದಾರೆ. ‘ಪುಷ್ಪ’ ಸಿನಿಮಾದಲ್ಲಿ ಅವರು ಹೆಜ್ಜೆ ಹಾಕಿದ, ‘ಹೂ ಅಂತೀಯಾ ಮಾವ, ಊಹೂ ಅಂತೀಯಾ ಮಾವ..’ ಹಾಡು ಸೂಪರ್-ಡೂಪರ್​ ಹಿಟ್​ ಆಗಿದೆ. ಈ ಬೆನ್ನಲ್ಲೇ ಸಮಂತಾ ಕಡೆಯಿಂದ ಒಂದು ದೊಡ್ಡ ಅಪ್​ಡೇಟ್​ ಸಿಕ್ಕಿದೆ. ಈ ವಿಚಾರ ಕೇಳಿ ಫ್ಯಾನ್ಸ್​ ಸಖತ್​ ಖುಷಿಪಟ್ಟಿದ್ದಾರೆ.

ಜ್ಯೂ.ಎನ್​ಟಿಆರ್​ಗೆ ಜತೆಯಾಗಿ ಸಮಂತಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಹರಿದಾಡಿದೆ. ಸದ್ಯ, ಜ್ಯೂ.ಎನ್​ಟಿಆರ್​ ‘ಆರ್​ಆರ್​ಆರ್​’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಜನವರಿ 7ರಂದು ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾ ತೆರೆ ಕಂಡ ನಂತರದಲ್ಲಿ ಅವರು ಕೊರಟಾಲ ಶಿವ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ಸಮಂತಾ ಅವರನ್ನು ನಾಯಕಿ ಮಾಡಿಕೊಳ್ಳಬೇಕು ಎನ್ನುವ ಆಲೋಚನೆ ನಿರ್ಮಾಪಕರು ಇಟ್ಟುಕೊಂಡಿದ್ದಾರೆ.

ಜ್ಯೂ.ಎನ್​ಟಿಆರ್​ ಹಾಗೂ ಕೊರಟಾಲ ಶಿವ ಮಾಡುತ್ತಿರುವ ಸಿನಿಮಾ ದೊಡ್ಡ ಬಜೆಟ್​ನಲ್ಲಿ ಸಿದ್ಧವಾಗಲಿದೆ. ಈಗಾಗಲೇ ಕಥೆ ಕೇಳಿರುವ ತಾರಕ್​ ಸ್ಕ್ರಿಪ್ಟ್​ ಕೆಲಸಕ್ಕೆ ಅನುಮತಿ ಕೊಟ್ಟಿದ್ದಾರೆ. ಜ್ಯೂ.ಎನ್​ಟಿಆರ್​ ‘ಆರ್​ಆರ್​ಆರ್​’ ಪ್ರಚಾರ ಕಾರ್ಯದಲ್ಲಿ ಬ್ಯುಸಿ ಆದರೆ, ಇತ್ತ ಕೊರಟಾಲ ಶಿವ ಹೊಸ ಸಿನಿಮಾದ ಸ್ಕ್ರಿಪ್ಟ್​ ಸಿದ್ಧಪಡಿಸುತ್ತಿದ್ದಾರೆ. ಈ ಸಿನಿಮಾದ ಕಥೆಯನ್ನು ನಿರ್ದೇಶಕರು ಸಮಂತಾಗೆ ಹೇಳಿದ್ದಾರೆ ಎನ್ನಲಾಗುತ್ತಿದೆ.

ಜ್ಯೂ.ಎನ್​ಟಿಆರ್​ ಜತೆ ನಟಿಸಬೇಕು ಎಂಬುದು ಹಲವು ನಟಿಯರ ಕನಸು. ಸಮಂತಾಗೆ ನಿತ್ಯ ಬೇಡಿಕೆ ಹೆಚ್ಚುತ್ತಲೇ ಇದೆ. ಇಂತಹ ಸಂದರ್ಭದಲ್ಲಿ ಅವರಿಗೆ ಈ ಆಫರ್ ಬಂದಿದ್ದು ಅದನ್ನು ಬಿಟ್ಟು ಕೊಡದಿರಲು ಅವರು ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ, ಈ ಚಿತ್ರದಲ್ಲಿ ನಟಿಸೋದಕ್ಕೆ ಅವರು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಸಮಂತಾ ಅವರನ್ನು ತಡೆಯೋರು ಯಾರೂ ಇಲ್ಲ ಎಂದು ಅಭಿಮಾನಿಗಳು ಹೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ನಟನೆಯ ಅಮೆರಿಕದ ಸ್ಪೈ ಸರಣಿ ‘ಸಿಟಾಡೆಲ್​’ಅನ್ನು ಸ್ಫೂರ್ತಿಯಾಗಿ ಇಟ್ಟುಕೊಂಡು ರಾಜ್​ ಮತ್ತು ಡಿಕೆ ಹೊಸ ವೆಬ್​ ಸೀರಿಸ್​ ಮಾಡುತ್ತಿದ್ದಾರೆ. ಈ ಸರಣಿಯಲ್ಲಿ ವರುಣ್​ ಧವನ್​ ಮುಖ್ಯಭೂಮಿಕೆ ನಿರ್ವಹಿಸಿದರೆ, ಸಮಂತಾ ವರುಣ್​ಗೆ ಜತೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ ಇದೇ ಮೊದಲ ಬಾರಿಗೆ ಅವರು ವರುಣ್​ಗೆ ಜತೆಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:ವಿಚ್ಛೇದನದಿಂದ ಸಮಂತಾ 50 ಕೋಟಿ ರೂ. ದರೋಡೆ ಮಾಡಿದ್ದಾರೆ ಎಂದ ನೆಟ್ಟಿಗ: ನಟಿಯ ಖಡಕ್​ ಉತ್ತರವೇನು? 

‘ಫ್ಯಾಮಿಲಿ ಮ್ಯಾನ್​’ ನಿರ್ದೇಶಕರ ಜತೆ ಸಮಂತಾ ಮತ್ತೊಂದು ವೆಬ್​ ಸೀರಿಸ್​; ಆ್ಯಕ್ಷನ್​ನಲ್ಲಿ ಮಿಂಚಲಿದ್ದಾರೆ ಸ್ಯಾಮ್

 

Published On - 7:33 pm, Sun, 26 December 21