ಸಮಂತಾ (Samantha) ವಿಚ್ಛೇದನ ಪಡೆದ ನಂತರ ಒಂದು ತಿಂಗಳು ಮಂಕಾಗಿದ್ದರು. ಸಿನಿಮಾ ಕೆಲಸಗಳಿಗೆ ಬ್ರೇಕ್ ಕೊಟ್ಟಿದ್ದರು. ಕ್ಯಾಮರಾ ಎದುರಿಸೋಕೆ ಸಾಧ್ಯವೇ ಇಲ್ಲ ಎಂಬುದು ಅವರಿಗೆ ಖಚಿತವಾಗಿತ್ತು. ಈ ಕಾರಣಕ್ಕೆ ಅವರು ಒಂದು ಗ್ಯಾಪ್ ತೆಗೆದುಕೊಂಡಿದ್ದರು. ಈ ಮಧ್ಯೆ ಅವರು ರಿಷಿಕೇಷ ಹಾಗೂ ದುಬೈಗೆ ಪ್ರವಾಸಕ್ಕೆ ತೆರಳಿದ್ದರು. ಇದರಿಂದ ಅವರ ಮನಸ್ಸು ಸ್ವಲ್ಪ ಸಮಸ್ಥಿತಿಗೆ ಬಂದಿದೆ. ವಿಚ್ಛೇದನ ಪಡೆದರೂ ಬಣ್ಣ ಹಚ್ಚುವುದನ್ನು ಮುಂದುವರಿಸಲೇಬೇಕು. ಈ ಕಾರಣಕ್ಕೆ ಅವರು ನಟನೆಗೆ ಮರಳಿದ್ದಾರೆ. ಸಾಲುಸಾಲು ಸಿನಿಮಾಗಳನ್ನು ಅವರು ಒಪ್ಪಿಕೊಳ್ಳುತ್ತಿದ್ದಾರೆ. ಖ್ಯಾತ ನಿರ್ದೇಶಕ ಸುಕುಮಾರ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ‘ಪುಷ್ಪ’ ಸಿನಿಮಾದಲ್ಲಿ ವಿಶೇಷ ಹಾಡಿಗೆ ಅವರು ಹೆಜ್ಜೆ ಹಾಕುತ್ತಿದ್ದಾರೆ. ಈ ಮಧ್ಯೆ ಸಮಂತಾ ಇನ್ಸ್ಟಾಗ್ರಾಮ್ನಲ್ಲಿ ಹೊಸ ಸ್ಟೇಟಸ್ ಒಂದನ್ನು ಹಂಚಿಕೊಂಡಿದ್ದಾರೆ. ಅವರು ಮದುವೆ ಹೆಣ್ಣಿಗೆ ಮೇಕಪ್ ಮಾಡುತ್ತಾರೆ! ಈ ವಿಚಾರವನ್ನು ಅವರು ಬಹಿರಂಗ ಮಾಡಿದ್ದಾರೆ.
ಸಮಂತಾ ಮತ್ತೆ ಶೂಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ. ಶೂಟಿಂಗ್ ಬಿಡುವಿನ ಸಂದರ್ಭದಲ್ಲಿ ಅವರು ಕೀಟಲೆ ಒಂದನ್ನು ಮಾಡಿದ್ದಾರೆ. ಮಹಿಳೆ ಒಬ್ಬರಿಗೆ ಸಮಂತಾ ಮೇಕಪ್ ಮಾಡಿದ್ದಾರೆ. ಅವರು ಮಾಡಿದ ಮೇಕಪ್ ತುಂಬಾನೇ ಕೆಟ್ಟದಾಗಿತ್ತು. ಇದರ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಅಲ್ಲದೆ, ಮದುವೆ ಆಗುವ ಹೆಣ್ಣುಮಕ್ಕಳಿಗೆ ಮೇಕಪ್ ಮಾಡಲು ಬುಕಿಂಗ್ ತೆರೆದಿದೆ ಎನ್ನುವ ಕ್ಯಾಪ್ಶನ್ ನೀಡಿದ್ದಾರೆ.
ಇದನ್ನು ಸಮಂತಾ ಅಭಿಮಾನಿಗಳು ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ, ಅವರು ಮತ್ತೆ ಮೊದಲಿನ ಸ್ಥಿತಿಗೆ ಬಂದಿದ್ದು ಎಲ್ಲರಿಗೂ ಖುಷಿ ನೀಡಿದೆ. ಸಮಂತಾ ಅವರು ಹೀಗೆ ಖುಷಿಯಿಂದ ನಗುತ್ತಲೇ ಇರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇನ್ನೂ ಕೆಲವರು ನನಗೂ ಮೇಕಪ್ ಮಾಡಿ ಎಂದು ಕೋರಿದ್ದಾರೆ.
#samantha bridal bookings ?? pic.twitter.com/eJ7qkiKcIB
— Cinema Updates (@mastervijay2020) November 18, 2021
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪ’ ಚಿತ್ರಕ್ಕೆ ಖ್ಯಾತ ನಿರ್ದೇಶಕ ಸುಕುಮಾರ್ ಅವರು ನಿರ್ದೇಶನ ಮಾಡಿದ್ದಾರೆ. ಅವರ ಬಹುತೇಕ ಸಿನಿಮಾಗಳಲ್ಲಿ ಒಂದು ಐಟಂ ಸಾಂಗ್ ಇರುತ್ತದೆ. ಅದೇ ರೀತಿ ‘ಪುಷ್ಪ’ ಸಿನಿಮಾದಲ್ಲೂ ಒಂದು ಭರ್ಜರಿ ಐಟಂ ಸಾಂಗ್ ಇಟ್ಟಿದ್ದಾರಂತೆ. ಈ ಹಾಡಿನಲ್ಲಿ ನರ್ತಿಸಲು ಈ ಮೊದಲು ಪೂಜಾ ಹೆಗ್ಡೆ ಮತ್ತು ಸನ್ನಿ ಲಿಯೋನ್ ಅವರಿಗೆ ಆಫರ್ ನೀಡಲಾಗಿತ್ತು. ಆದರೆ ಆ ನಟಿಯರು ಒಪ್ಪಿಕೊಂಡಿಲ್ಲ. ಅಂತಿಮವಾಗಿ ಸಮಂತಾ ಅವರು ಒಪ್ಪಿಕೊಂಡಿದ್ದಾರೆ. ಈ ಹಾಡಿಗಾಗಿ ಅವರು ಒಂದೂವರೆ ಕೋಟಿ ರೂ. ಸಂಭಾವನೆ ಕೇಳುತ್ತಿದ್ದಾರೆ ಎಂಬ ಮಾಹಿತಿ ಹಬ್ಬಿದೆ.
ಇದನ್ನೂ ಓದಿ: Samantha: ‘ಪುಷ್ಪ’ ಚಿತ್ರದ ಐಟಂ ಸಾಂಗ್ನಲ್ಲಿ ಡ್ಯಾನ್ಸ್ ಮಾಡಲು ಸಮಂತಾ ಕೇಳಿದ ಸಂಬಳ ಎಷ್ಟು ಕೋಟಿ?
Published On - 6:03 pm, Thu, 18 November 21