ನಾಗ ಚೈತನ್ಯ ಮದುವೆಯಿಂದ ಸಮಂತಾಗೆ ದುಃಖ; ಗುರತೇ ಸಿಗದಷ್ಟು ಬದಲಾದ ನಟಿ

ಸಮಂತಾ ಸಿಂಪಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಿದ್ದೆ ಇಲ್ಲದೆ ಮುಖವೆಲ್ಲ ಸೊರಗಿದಂತೆ ಕಾಣಿಸಿದೆ. ಅವರ ಮಾಜಿ ಪತಿ ನಾಗ ಚೈತನ್ಯ ಅವರು ನಟಿ ಶೋಭಿತಾ ದುಲಿಪಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಸಮಂತಾಗೆ ದುಃಖ ತರಿಸಿತೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ.

ನಾಗ ಚೈತನ್ಯ ಮದುವೆಯಿಂದ ಸಮಂತಾಗೆ ದುಃಖ; ಗುರತೇ ಸಿಗದಷ್ಟು ಬದಲಾದ ನಟಿ
ಸಮಂತಾ

Updated on: Aug 24, 2024 | 6:59 AM

ನಟಿ ಸಮಂತಾ ರುಥ್ ಪ್ರಭು ಅವರು ಇತ್ತೀಚೆಗೆ ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಸಮಂತಾ ಗ್ಲಾಮರಸ್ ಆಗಿ ಮಿಂಚುತ್ತಿದ್ದರು. ಸದಾ ನಗುತ್ತಿದ್ದರು. ಆದರೆ, ಈಗ ಸಮಂತಾ ಬದಲಾಗಿದ್ದಾರೆ. ಸಮಂತಾ ಅವರ ಮುಖದಲ್ಲಿ ಮೊದಲಿದ್ದ ಚಾರ್ಮ್​ ಈಗ ಇಲ್ಲ. ಅಷ್ಟೇ ಅಲ್ಲ ಅವರು ಮತ್ತಷ್ಟು ತೆಳ್ಳಗೆ ಆಗಿದ್ದಾರೆ. ಇದು ಫ್ಯಾನ್ಸ್ ಆತಂಕಕ್ಕೆ ಕಾರಣ ಆಗಿದೆ. ‘ದಯವಿಟ್ಟು ಏನಾದರೂ ತಿನ್ನಿ’ ಎಂದು ಅನೇಕರು ಕೋರಿಕೊಂಡಿದ್ದಾರೆ. ಸಮಂತಾ ಅವರು ಯಾವುದನ್ನೋ ಮನಸ್ಸಿಗೆ ಅತಿಯಾಗಿ ಹಚ್ಚಿಕೊಂಡು, ಕೊರಗಿದಂತಿದೆ ಎಂದು ಕೂಡ ಫ್ಯಾನ್ಸ್ ಊಹಿಸಿದ್ದಾರೆ.

ಸಮಂತಾ ಅವರು ಸಿಂಪಲ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ನಿದ್ದೆ ಇಲ್ಲದೆ ಮುಖವೆಲ್ಲ ಸೊರಗಿದಂತೆ ಕಾಣಿಸಿದೆ. ಅವರ ಮಾಜಿ ಪತಿ ನಾಗ ಚೈತನ್ಯ ಅವರು ನಟಿ ಶೋಭಿತಾ ದುಲಿಪಾಲ್ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಇದು ಸಮಂತಾಗೆ ದುಃಖ ತರಿಸಿತೇ ಎನ್ನುವ ಪ್ರಶ್ನೆಯನ್ನು ಹುಟ್ಟು ಹಾಕಿದೆ. ‘ಸಮಂತಾ ಸಾಕಷ್ಟು ಬದಲಾಗಿದ್ದಾರೆ. ಮೊದಲಿಗಿಂತ ತೆಳ್ಳಗೆ ಆಗಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಇನ್ನೂ ಕೆಲವರಿಗೆ ಸಮಂತಾ ಅವರ ಗುರುತೇ ಸಿಗದಂತೆ ಆಗಿದೆ.

‘ಸಮಂತಾ ಅವರು ನಿರಂತರವಾಗಿ ಸರ್ಜರಿಗೆ ಒಳಗಾಗಿದ್ದಾರೆ. ಇದರಿಂದ ಅವರ ನಿಜವಾದ ಅಂದ ಹೋಗಿದೆ’ ಎಂದು ಕೆಲವರು ಹೇಳಿದ್ದಾರೆ. ‘ಸಮಂತಾ ಖುಷಿಯಾಗಿಲ್ಲ. ಅವರ ನಗು ಮಾಯ ಆಗಿದೆ’ ಎಂದು ಕೆಲ ಮಂದಿ ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಸಮಂತಾ ಅವರ ಹೊಸ ವಿಡಿಯೋ ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದಂತೂ ನಿಜ.

ಇದನ್ನೂ ಓದಿ: ಹೆಸರು ಹಾಳು ಮಾಡಲು ಪ್ರಯತ್ನಿಸಿದವರಿಗೆ ತಿರುಗೇಟು ಕೊಟ್ಟ ಸಮಂತಾ

ಸಮಂತಾ ನಟನೆಯ ‘ಸಿಟಾಡೆಲ್: ಹನಿ ಬನಿ’ ರಿಲೀಸ್ ಆಗಬೇಕಿದೆ. ಇದನ್ನು ಹೊರತುಪಡಿಸಿ ಸಮಂತಾ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಇದು ಕೂಡ ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ಸಮಂತಾ ಅವರು ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ ಎಂಬುದಕ್ಕೆ ಇದು ಉದಾಹರಣೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 6:56 am, Sat, 24 August 24