ರಾಮ್ ಚರಣ್ ಬಳಿ ಇದೆ ಕೆಲಸಕ್ಕೆ ಬಾರದ ಒಂದು ಟ್ಯಾಲೆಂಟ್; ಯಾವುದೆಂದು ಊಹಿಸಿ

ರಾಮ್ ಚರಣ್ ಬೇಡಿಕೆಯ ಹೀರೋ. ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. ಅವರು ‘ಗೇಮ್ ಚೇಂಜರ್’ ಸಿನಿಮಾಗಳಲ್ಲಿ ತೊಡೆಗಿಕೊಂಡಿದ್ದಾರೆ. ಅವರ ಬಳಿ ಒಂದು ಬಳಕೆ ಆಗದ ಟ್ಯಾಲೆಂಟ್ ಇದೆ. ಈ ಬಗ್ಗೆ ಅವರು ಈ ಮೊದಲು ಹೇಳಿಕೊಂಡಿದ್ದರು.

ರಾಮ್ ಚರಣ್ ಬಳಿ ಇದೆ ಕೆಲಸಕ್ಕೆ ಬಾರದ ಒಂದು ಟ್ಯಾಲೆಂಟ್; ಯಾವುದೆಂದು ಊಹಿಸಿ
ರಾಮ್ ಚರಣ್
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Aug 24, 2024 | 7:41 AM

ರಾಮ್ ಚರಣ್ ಅವರು ‘ಆರ್​ಆರ್​ಆರ್’ ಚಿತ್ರದಿಂದ ದೊಡ್ಡ ಮಟ್ಟದ ಯಶಸ್ಸು ಕಂಡಿದ್ದಾರೆ. ಈ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಗೆಲುವು ಕಂಡಿರೋದು ಗೊತ್ತೇ ಇದೆ. ಈ ಸಿನಿಮಾದ ಬಳಿಕ ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾದಲ್ಲಿ ತೊಡಗಿಕೊಂಡಿದ್ದಾರೆ. ಅವರ ಬಳಿ ಕೆಲಸಕ್ಕೆ ಬಾರದ ಒಂದು ಟ್ಯಾಲೆಂಟ್ ಇದೆಯಂತೆ. ಈ ಬಗ್ಗೆ ಅವರು ‘ಆರ್​ಆರ್​ಆರ್’ ಸಿನಿಮಾದ ಪ್ರಮೋಷನ್​ನಲ್ಲಿ ಹೇಳಿಕೊಂಡಿದ್ದರು.

ಎಷ್ಟೇ ದೊಡ್ಡ ಸ್ಟಾರ್ ಆದರೂ ಅವರು ಕೂಡ ಜನಸಾಮಾನ್ಯರೇ. ಜನರಿಗೆ ಇರೋ ತೊಂದರೆಗಳು ಅವರಿಗೂ ಎದುರಾಗುತ್ತವೆ. ರಾಮ್ ಚರಣ್ ಅವರಿಗೂ ಕೆಲವು ಸಮಸ್ಯೆಗಳು ಇವೆ. ಅದರಲ್ಲಿ ಮರೆವು ಕೂಡ ಒಂದು. ಮರೆಯೋದನ್ನು ಅವರು ಕೆಲಸಕ್ಕೆ ಬಾರದ ಟ್ಯಾಲೆಂಟ್ ಎಂದು ಕರೆದುಕೊಂಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.

‘ಆರ್​ಆರ್​ಆರ್’ ಸಿನಿಮಾನ ರಾಜಮೌಳಿ ಅವರು ನಿರ್ದೇಶನ ಮಾಡಿದ್ದಾರೆ. ರಾಮ್ ಚರಣ್ ಜೊತೆ, ಜೂನಿಯರ್ ಎನ್​ಟಿಆರ್ ಕೂಡ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಪ್ರಚಾರದ ವೇಳೆ ಸಂದರ್ಶಕಿ ಅವರು ‘ನಿಮ್ಮ ಬಳಿ ಇರುವ ಕೆಲಸಕ್ಕೆ ಬಾರದ ಟ್ಯಾಲೆಂಟ್ ಏನು’ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ರಾಮ್ ಚರಣ್, ‘ಮರೆಯೋದು’ ಎಂದರು.

‘ನನ್ನ ಹೆಸರು ಗೊತ್ತೇ’ ಎಂದು ಸಂದರ್ಶಕಿ ಕೇಳಿದರು. ಇದಕ್ಕೆ ರಾಮ್ ಚರಣ್ ಅವರಿಗೆ ಏನು ಹೇಳಬೇಕು ಅನ್ನೋದು ಗೊತ್ತಾಗಲೇ ಇಲ್ಲ. ನಿಜಕ್ಕೂ ಸಂದರ್ಶಕಿ ಹೆಸರು ಅವರಿಗೆ ಗೊತ್ತಿರಲಿಲ್ಲ. ಈ ಕಾರಣಲ್ಲೆ ರಾಮ್ ಚರಣ್ ಹಾಗೂ ರಾಜಮೌಳಿ ಜೋರಾಗಿ ನಕ್ಕರು. ಈಗ ವೈರಲ್ ಆಗಿರೋ ವಿಡಿಯೋಗೆ ಫ್ಯಾಮಿಲಿ ಹ್ಯಾಬಿಟ್ ಎಂದು ಪವನ್ ಕಲ್ಯಾಣ್ ಹಾಗೂ ಚಿರಂಜೀವಿ ಸಿನಿಮಾಗಳ ಕ್ಲಿಪ್ ಕೂಡ ಸೇರಿಸಲಾಗಿದೆ.

ಚಿರಂಜೀವಿ ಹಾಗೂ ಪವನ್ ಕಲ್ಯಾಣ್ ಅವರು ಸಿನಿಮಾಗಳಲ್ಲಿ ಹೆಸರನ್ನು ನೆನಪಿಸಿಕೊಳ್ಳುವ ದೃಶ್ಯಗಳನ್ನು ಈ ವಿಡಿಯೋಗೆ ಸೇರಿಸಲಾಗಿದೆ. ಈ ವಿಡಿಯೋ ಮೇಲೆ ಸಖತ್ ಫನ್ ಮಾಡಲಾಗುತ್ತಿದೆ. ಈ ವಿಡಿಯೋ ಗಮನ ಸೆಳೆಯುತ್ತಿದೆ.

ಇದನ್ನೂ ಓದಿ: ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪವನ್ ಕಲ್ಯಾಣ್, ರಾಮ್ ಚರಣ್, ಚಿರಂಜೀವಿ

ರಾಮ್ ಚರಣ್ ಅವರು ‘ಗೇಮ್ ಚೇಂಜರ್’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದೆ. ಕಿಯಾರಾ ಅಡ್ವಾಣಿ ಈ ಚಿತ್ರಕ್ಕೆ ನಾಯಕಿ. ಈ ಸಿನಿಮಾಗೆ ಶಂಕರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ವರ್ಷಾಂತ್ಯಕ್ಕೆ ಸಿನಿಮಾ ರಿಲೀಸ್ ಆಗುವ ನಿರೀಕ್ಷೆ ಇದೆ. ರಾಮ್ ಚರಣ್ ಅವರು ಈ ಸಿನಿಮಾದಲ್ಲಿ ಚುನಾವಣಾ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಸಾಂಗ್ ಹಾಗೂ ಪೋಸ್ಟರ್​ಗಳ ಮೂಲಕ ಸಿನಿಮಾ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.