ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪವನ್ ಕಲ್ಯಾಣ್, ರಾಮ್ ಚರಣ್, ಚಿರಂಜೀವಿ

ಹರೀಶ್ ಶಂಕರ್ ಅವರು ‘ಮಿಸ್ಟರ್ ಬಚ್ಚನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ರವಿತೇಜ ಅವರು ಈ ಚಿತ್ರಕ್ಕೆ ಹೀರೋ. ಇದು ಹಿಂದಿಯ ‘ರೈಡ್’ ಚಿತ್ರದಿಂದ ಸ್ಫೂರ್ತಿ ಪಡೆದು ಮಾಡಿದ ಸಿನಿಮಾ. ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಅವರು ಸುದ್ದಿಗೋಷ್ಠಿಯಲ್ಲಿ ಮುಂದಿನ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಪವನ್ ಕಲ್ಯಾಣ್, ರಾಮ್ ಚರಣ್, ಚಿರಂಜೀವಿ
ಚಿರಂಜೀವಿ, ಪವನ್, ರಾಮ್ ಚರಣ್
Follow us
ರಾಜೇಶ್ ದುಗ್ಗುಮನೆ
|

Updated on: Jul 31, 2024 | 7:06 AM

ಸ್ಟಾರ್​ ಹೀರೋಗಳನ್ನು ಒಟ್ಟಿಗೆ ತೆರೆಮೇಲೆ ತರೋದು ಎಂದರೆ ನಿಜಕ್ಕೂ ಅದು ದೊಡ್ಡ ಚಾಲೆಂಜ್. ಈಗ ತೆಲುಗಿನ ನಿರ್ದೇಶಕ ಹರೀಶ್ ಶಂಕರ್ ಅವರು ಇಂಥ ಸಹಾಸಕ್ಕೆ ಮುಂದಾಗಿದ್ದಾರೆ. ರಾಮ್ ಚರಣ್, ಪವನ್ ಕಲ್ಯಾಣ್, ಚಿರಂಜೀವಿ ಅವರನ್ನು ಒಟ್ಟಾಗಿ ತೆರೆಮೇಲೆ ತರುವ ಪ್ರಯತ್ನದಲ್ಲಿ ಅವರಿದ್ದಾರೆ. ಈ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.

ಹರೀಶ್ ಶಂಕರ್ ಅವರು ‘ಮಿಸ್ಟರ್ ಬಚ್ಚನ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ರವಿತೇಜ ಅವರು ಈ ಚಿತ್ರಕ್ಕೆ ಹೀರೋ. ಇದು ಹಿಂದಿಯ ‘ರೈಡ್’ ಚಿತ್ರದಿಂದ ಸ್ಫೂರ್ತಿ ಪಡೆದು ಮಾಡಿದ ಸಿನಿಮಾ. ಈ ಚಿತ್ರ ಆಗಸ್ಟ್ 15ರಂದು ಬಿಡುಗಡೆ ಆಗಲಿದೆ. ಅವರು ಸುದ್ದಿಗೋಷ್ಠಿಯಲ್ಲಿ ಮುಂದಿನ ಸಿನಿಮಾ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.

‘ಸಿನಿಮಾಗಳನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಒತ್ತಾಯ ಪೂರ್ವಕವಾಗಿ ಮಾಡಬಾರದು. ಅದಾಗಿ ಅದೇ ಆಗಬೇಕು. ನಾನು ಇಂಡಿಯಾ-ಪಾಕಿಸ್ತಾನ ಬಾರ್ಡರ್​​ನಲ್ಲಿ ನಡೆವ ಕಥೆ ಬರೆದಿದ್ದೇನೆ. ಅದು ಪಕ್ಕಾ ಲವ್​ ಸ್ಟೋರಿ. ಅದನ್ನು ಸಿನಿಮಾ ಮಾಡಿದರೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡಬಹುದು’  ಎಂದಿದ್ದಾರೆ ಅವರು.

‘ನಾನು ಸದ್ಯ ಪವನ್ ಕಲ್ಯಾಣ್, ರಾಮ್ ಚರಣ್ ಹಾಗೂ ಚಿರಂಜೀವಿ ಅವರ ಸಿನಿಮಾದ ಕೆಲಸದಲ್ಲಿ ಬ್ಯುಸಿ ಇದ್ದೇನೆ’ ಎಂದು ಹೇಳಿಕೊಂಡಿದ್ದಾರೆ. ಈ ಸಿನಿಮಾ ಸೆಟ್ಟೇರಲಿದೆ ಎನ್ನುವ ಕಾನ್ಫಿಡೆನ್ಸ್ ಅವರಿಗೆ ಇದೆ.  ಪವನ್ ಕಲ್ಯಾಣ್ ಅವರು ಸದ್ಯ ರಾಜಕೀಯದಲ್ಲಿ ಬ್ಯುಸಿ ಇದ್ದಾರೆ. ಅವರು ಆಂಧ್ರ ಪ್ರದೇಶದ ಉಪ ಮುಖ್ಯಮಂತ್ರಿ ಆಗಿದ್ದಾರೆ. ಈ ಮೊದಲು ಒಪ್ಪಿಕೊಂಡ ಸಿನಿಮಾಗಳಿಗೆ ಡೇಟ್ಸ್ ಕೊಡೋಕೆ ಅವರಿಗೆ ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ಅವರು ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಾರಾ ಎನ್ನುವ ಪ್ರಶ್ನೆ ಅನೇಕರನ್ನು ಕಾಡಿದೆ.

ಇದನ್ನೂ ಓದಿ: ಒಲಂಪಿಕ್ಸ್​ಗಾಗಿ ಪ್ಯಾರಿಸ್​ನಲ್ಲಿ ಮೆಗಾ ಫ್ಯಾಮಿಲಿ; ಚಿರಂಜೀವಿ ಕುಟುಂಬದ ಜೊತೆ ಪೋಸ್ ಕೊಟ್ಟ ಪಿವಿ ಸಿಂಧು

ಇನ್ನು, ಚಿರಂಜೀವಿ ಹಾಗೂ ರಾಮ್ ಚರಣ್ ಅವರು ಈ ಮೊದಲು ‘ಆಚಾರ್ಯ’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾ ಫ್ಲಾಪ್ ಎನಿಸಿತ್ತು. ಈಗ ಇಬ್ಬರೂ ಮತ್ತೊಮ್ಮೆ ಒಂದಾಗುತ್ತಿರುವ ವಿಚಾರ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಎನ್ಕೌಂಟರ್ ಮಾಡಿಸುವ ಪ್ರಯತ್ನ ಅಂತ ರವಿ ಭಾವಿಸಿದ್ದರೆ ತನಿಖೆಯಾಗಲಿ: ಸಚಿವ
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಅಪಘಾತದಲ್ಲಿ ಮೃತಪಟ್ಟ ಬಾಸ್​ ಬಗ್ಗೆ ಸಿಬ್ಬಂದಿಗಳ ನೋವಿನ ಮಾತು
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಜಿಮ್‌ಗೆ ನುಗ್ಗಿದ ಕೋತಿ: ಎದ್ನೋ ಬಿದ್ನೋ ಓಡಿದ ಬಾಡಿ ಬಿಲ್ಡರ್ಸ್!
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಪ್ರಕರಣ ಈಗ ಹಕ್ಕು ಭಾಧ್ಯತಾ ಸಮಿತಿ ಮುಂದಿದೆ: ಸತೀಶ್ ಜಾರಕಿಹೊಳಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಅಶ್ಲೀಲ ಪದಬಳಕೆ ಕಂಡುಬಂದರೆ ಅದನ್ನು ಎಥಿಕ್ಸ್ ಕಮಿಟಿಗೆ ರವಾನೆ: ಹೊರಟ್ಟಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ಪ್ರಧಾನಿ ಮೋದಿಯನ್ನ ಭೇಟಿಯಾದ 101 ವರ್ಷದ ಐಎಫ್‌ಎಸ್ ಅಧಿಕಾರಿ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ವಕ್ಫ್ ಬೋರ್ಡ್ ಭೂಕಬಳಿಕೆ ಸಮರ್ಥವಾಗಿ ಸದನದಲ್ಲಿ ಮಂಡಿಸಿದ್ದೇವೆ: ಅಶೋಕ
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ಡಿವೈಡರ್​ಗೆ ಗುದ್ದಿ ಕಾರಿನ ಮೇಲೆ ಕಂಟೇನರ್​ ಬೀಳುತ್ತಿರುವ ಭಯಾನಕ ದೃಶ್ಯ!
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ರಾಮಾಯಣ ಮತ್ತು ಮಹಾಭಾರತಕ್ಕೆ ಮೋದಿ ಸಹಿ
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್
ಕಾನೂನು ಕೈಗೆತ್ತಿಕೊಳ್ಳಬಾರದು ಅಂತ ಸಹಿಸಿಕೊಂಡೆ: ಮೃಣಾಲ್ ಹೆಬ್ಬಾಳ್ಕರ್