ಅರೆಬೆತ್ತಲೆ ಫೋಟೋ ವಿವಾದ; ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ ಸಮಂತಾ

ಸೋಶಿಯಲ್​ ಮೀಡಿಯಾದಲ್ಲಿ ಒಂದು ಫೋಟೋ ವೈರಲ್​ ಆಗಿದೆ. ಅದು ಸಮಂತಾ ರುತ್​ ಪ್ರಭು ಅವರ ಫೋಟೋ ಎಂದು ಕೆಲವರು ಪೋಸ್ಟ್​ ಮಾಡಿದ್ದಾರೆ. ಆದರೆ ಅದು ಮಾರ್ಫ್​ ಮಾಡಿದ ಫೋಟೋ ಎಂಬುದು ತಿಳಿದುಬಂದಿದೆ. ಈ ವೈರಲ್​ ಫೋಟೋದ ವಿಚಾರದ ಬಗ್ಗೆ ಸಮಂತಾ ಅವರು ಮಾರ್ಮಿಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಅರೆಬೆತ್ತಲೆ ಫೋಟೋ ವಿವಾದ; ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ ಸಮಂತಾ
ಸಮಂತಾ

Updated on: May 06, 2024 | 6:55 PM

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ವಿವಾದಗಳಿಂದ ಆದಷ್ಟು ದೂರ ಇರಲು ಪ್ರಯತ್ನಿಸುತ್ತಾರೆ. ಆದರೂ ಕೆಲವೊಮ್ಮೆ ಕಿರಿಕ್​ ಶುರುವಾಗುತ್ತದೆ. ಸಾರ್ವಜನಿಕ ವಲಯದಲ್ಲಿ ಇರುವ ವ್ಯಕ್ತಿ ಆದ್ದರಿಂದ ಅನಗತ್ಯ ಕಾಂಟ್ರವರ್ಸಿಗಳು ಕೂಡ ಆಗಾಗ ಸೃಷ್ಟಿ ಆಗುತ್ತವೆ. ಇತ್ತೀಚೆಗೆ ಅವರದ್ದು ಎನ್ನಲಾದ ಅರೆ ಬೆತ್ತಲೆ ಫೋಟೋವೊಂದು (Samantha Viral Photo) ವೈರಲ್​ ಆಗಿತ್ತು. ಆ ಘಟನೆಯ ಬಗ್ಗೆ ಸಮಂತಾ (Samantha) ಅವರು ಪರೋಕ್ಷವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇಂಥ ಘಟನೆಗಳಿಗೆ ತಮ್ಮ ಪ್ರತಿಕ್ರಿಯೆ ಏನು ಎಂಬುದನ್ನು ಅವರು ಮಾರ್ಮಿಕವಾಗಿ ತಿಳಿಸಿದ್ದಾರೆ.

ಸಮಂತಾ ಅವರು ಸೋಶಿಯಲ್​ ಮೀಡಿಯಾದಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ತಮ್ಮ ದಿನಚರಿಯ ಬಗ್ಗೆ ಅವರು ಆಗಾಗ ಮಾಹಿತಿ ಹಂಚಿಕೊಳ್ಳುತ್ತಾರೆ. ಅನಾರೋಗ್ಯಕ್ಕೆ ಅವರು ವಿವಿಧ ಬಗೆಯ ಚಿಕಿತ್ಸೆ ಪಡೆಯುತ್ತಿದ್ದಾರೆ. ಆ ಕುರಿತು ಅವರು ಕೆಲವು ಫೋಟೋಗಳನ್ನು ಇತ್ತೀಚೆಗೆ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಶೇರ್​ ಮಾಡಿಕೊಂಡಿದ್ದರು. ಆದರೆ ಅವರು ಅರೆ ಬೆತ್ತಲೆ ಫೋಟೋ ಅಪ್​ಲೋಡ್​ ಮಾಡಿ, ನಂತರ ಡಿಲೀಟ್​ ಮಾಡಿದ್ದಾರೆ ಎಂದು ಕೆಲವರು ಸುದ್ದಿ ಹಬ್ಬಿಸಿದರು.

ಮಾರ್ಫ್​ ಮಾಡಿದ ಅರೆ ಬೆತ್ತಲೆ ಫೋಟೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟು, ಅದು ಸಮಂತಾ ಅವರ ಫೋಟೋ ಎಂದು ಕಿಡಿಗೇಡಿಗಳು ಅಪಪ್ರಚಾರ ಮಾಡಿದ್ದರು. ಅದರ ಬೆನ್ನಲ್ಲೇ ಸಮಂತಾ ಅವರು ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ಒಂದು ಕೋಟ್​ ಹಂಚಿಕೊಂಡಿದ್ದಾರೆ. ‘ನಿಮ್ಮನ್ನು ನೀವು ಸಾಬೀತುಪಡಿಸುವ ಅಗತ್ಯ ಇಲ್ಲದೇ ಅಥವಾ ಸ್ಪಷ್ಟನೆ ನೀಡುವ ಅಗತ್ಯ ಇಲ್ಲದೇ ಬದುಕುವುದೇ ನಿಜವಾದ ಸಾಧನೆ’ ಎಂಬರ್ಥ ಬರುವಂತಹ ಕೋಟ್​ ಇದಾಗಿದೆ. ಆ ಮೂಲಕ, ತಾವು ಇಂಥದ್ದಕ್ಕೆಲ್ಲ ಪ್ರತಿಕ್ರಿಯೆ, ಸ್ಪಷ್ಟನೆ ನೀಡುವುದಿಲ್ಲ ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ನಾಗ ಚೈತನ್ಯ ಮಾಡಿದ ಪರಸ್ತ್ರೀ ಸಹವಾಸದಿಂದಲೇ ಸಮಂತಾ ವಿಚ್ಛೇದನ? ವೈರಲ್​ ವಿಡಿಯೋ ಸಾಕ್ಷಿ

ಹಲವು ಪ್ರಾಜೆಕ್ಟ್​ಗಳಲ್ಲಿ ಸಮಂತಾ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗಷ್ಟೇ ಅವರ ಜನ್ಮದಿನದ ಪ್ರಯುಕ್ತ ‘ಮಾ ಇಂಟಿ ಬಂಗಾರಂ’ ಸಿನಿಮಾ ಅನೌನ್ಸ್​ ಆಯಿತು. ಅಲ್ಲದೇ ಅದರ ಪೋಸ್ಟರ್​ ಕೂಡ ಅನಾವರಣ ಆಯಿತು. ಅನಾರೋಗ್ಯದ ನಡುವೆಯೂ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವರುಣ್​ ಧವನ್​ ಜೊತೆ ಸಮಂತಾ ನಟಿಸಿರುವ ‘ಹನಿ ಬನಿ’ ವೆಬ್​ ಸಿರೀಸ್​ ಬಿಡುಗಡೆಗಾಗಿ ಫ್ಯಾನ್ಸ್​ ಕಾದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us