
ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಬದುಕಿನಲ್ಲಿ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಅನಾರೋಗ್ಯದಿಂದ ಅವರಿಗೆ ಸಾಕಷ್ಟು ಸಮಸ್ಯೆ ಉಂಟಾಗಿತ್ತು. ಮೊದಲಿಗಿಂತ ಅವರು ತುಂಬ ಸ್ಲಿಮ್ ಆಗಿದ್ದರು. ಅದಕ್ಕಾಗಿ ಟ್ರೋಲ್ ಮಾಡಲಾಗಿತ್ತು. ಅನಾರೋಗ್ಯದ ನಡುವೆಯೂ ಸಮಂತಾ ಅವರು ಫಿಟ್ನೆಸ್ ಬಗ್ಗೆ ಗಮನ ಹರಿಸುವುದು ನಿಲ್ಲಿಸಲಿಲ್ಲ. ಈಗ ಅವರು ಟ್ರೋಲರ್ಗಳಿಗೆ ಖಡಕ್ ತಿರುಗೇಟು ನೀಡಿದ್ದಾರೆ. ಬೆನ್ನಿನ ಮಸಲ್ ತೋರಿಸುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದ್ದಾರೆ. ಕಟ್ಟುಮಸ್ತಾದ ಅವರ ಬಾಡಿ ನೋಡಿ ಅಭಿಮಾನಿಗಳು ವಾವ್ ಎಂದಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಸಮಂತಾ ರುತ್ ಪ್ರಭು ಅವರು ಹೊಸ ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಜಿಮ್ನಲ್ಲಿ ತೆಗೆದ ಈ ಫೋಟೋದಲ್ಲಿ ಸಮಂತಾ ಅವರು ಬ್ಯಾಕ್ ಪೋಸ್ ನೀಡಿದ್ದಾರೆ. ಬೆನ್ನಿನ ಮಸಲ್ ತೋರಿಸುವ ಮೂಲಕ ತಾನು ಎಷ್ಟು ಫಿಟ್ ಆಗಿದ್ದೇನೆ ಎಂಬುದನ್ನು ಅವರು ತಿಳಿಸಿದ್ದಾರೆ. ಈ ಫೋಟೋ ವೈರಲ್ ಆಗಿದೆ. ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಈ ರೀತಿ ಗಟ್ಟಿಮುಟ್ಟಾದ ಬೆನ್ನು ಹೊಂದಬೇಕು ಎಂಬುದು ಸಮಂತಾ ಅವರ ಆಸೆ ಆಗಿತ್ತು. ಆದರೆ ಅದು ತಮ್ಮಿಂದ ಸಾಧ್ಯವಿಲ್ಲ ಎಂದು ಅವರು ಕೈ ಚೆಲ್ಲಿದ್ದರು. ತಮ್ಮ ವಂಶವಾಹಿನಿಯಲ್ಲಿ ಅದು ಇಲ್ಲ ಎಂದು ಅವರು ಭಾವಿಸಿದ್ದರು. ಆದರೆ ಅದು ಅವರ ತಪ್ಪು ಕಲ್ಪನೆ ಆಗಿತ್ತು. ಸತತ ಪರಿಶ್ರಮದಿಂದ ಅವರೀಗ ಬೆನ್ನಿನ ಮಸಲ್ ಬೆಳೆಸಿಕೊಂಡಿದ್ದಾರೆ. ಆ ಬಗ್ಗೆ ಸಮಂತಾ ಅವರಿಗೆ ಸಖತ್ ಹೆಮ್ಮೆ ಇದೆ. ಹಾಗಾಗಿ ಈ ಫೋಟೋ ಮೂಲಕ ಖುಷಿ ವ್ಯಕ್ತಪಡಿಸಿದ್ದಾರೆ.
‘ಸ್ನಾಯುಗಳನ್ನು ಬೆಳೆಸಿಕೊಳ್ಳುವುದು ಬಹಳ ಮುಖ್ಯ. ನೀವು ಹೇಗೆ ಕಾಣುತ್ತೀರಿ ಎಂಬುದು ಮಾತ್ರವಲ್ಲ.. ಹೇಗೆ ಜೀವಿಸುತ್ತೀರಿ, ಹೇಗೆ ಸಾಗುತ್ತೀರಿ, ಹೇಗೆ ಮಾಗುತ್ತೀರಿ ಎಂಬುದು ಕೂಡ ಮುಖ್ಯ. ವಯಸ್ಸು ಆದಂತೆಲ್ಲ ಸ್ಟ್ರಂಥ್ ಟ್ರೇನಿಂಗ್ ನಿಮ್ಮ ಬೆಸ್ಟ್ ಫ್ರೆಂಡ್ ಆಗಬೇಕು. ಸ್ಟ್ರಂಥ್ ಟ್ರೇನಿಂಗ್ ನನಗೆ ಬಹಳಷ್ಟನ್ನು ನೀಡಿದೆ. ತಾಳ್ಮೆ ಮತ್ತು ಶಿಸ್ತನ್ನು ಕಲಿಸಿದೆ’ ಎಂದು ಹೇಳುವ ಮೂಲಕ ಸಮಂತಾ ಅವರು ತಮ್ಮ ಅಭಿಮಾನಿಗಳಿಗೂ ಸ್ಫೂರ್ತಿ ತುಂಬಿದ್ದಾರೆ.
ಇದನ್ನೂ ಓದಿ: ನಿರ್ದೇಶಕನ ಜೊತೆ ಸಮಂತಾ ಲವ್; ಇದಕ್ಕಿಂತ ಬೇರೆ ಸಾಕ್ಷಿ ಬೇಕಾ?
‘ಒಂದು ವೇಳೆ ನೀವು ಕೂಡ ಆಗಲ್ಲ ಎಂದು ಕೈಚೆಲ್ಲುವ ಹಂತದಲ್ಲಿ ಇದ್ದರೆ, ಹಾಗೆ ಮಾಡಬೇಡಿ. ಮುಂದುವರಿಯಿರಿ.. ಭವಿಷ್ಯ ಚೆನ್ನಾಗಿ ಇರಲಿದೆ’ ಎಂದು ಸಮಂತಾ ಅವರು ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ಮಾತ್ರವಲ್ಲದೆ ಬಾಲಿವುಡ್ನಲ್ಲಿ ಕೂಡ ಸಮಂತಾ ರುತ್ ಪ್ರಭು ಅವರಿಗೆ ಬೇಡಿಕೆ ಇದೆ. ಅವರು ವೆಬ್ ಸರಣಿಗಳ ಮೂಲಕ ಕೂಡ ಹೆಸರು ಮಾಡಿದ್ದಾರೆ. ನಿರ್ದೇಶಕ ರಾಜ್ ನಿಧಿಮೋರು ಜೊತೆಗಿನ ರಿಲೇಷನ್ಶಿಪ್ ಕಾರಣದಿಂದಲೂ ಅವರು ಇತ್ತೀಚೆಗೆ ಹೆಚ್ಚು ಸುದ್ದಿ ಆಗುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.