Samantha: ಸಮಂತಾ ಅನಾರೋಗ್ಯದ ಬಗ್ಗೆ ಮತ್ತೆ ಹಬ್ಬಿದೆ ಸುದ್ದಿ; 6 ತಿಂಗಳು ಅಮೆರಿಕದಲ್ಲಿ ಚಿಕಿತ್ಸೆ?

|

Updated on: Jul 06, 2023 | 3:36 PM

ಸಮಂತಾ ಅವರು ಆ್ಯಕ್ಷನ್​ ದೃಶ್ಯಗಳಲ್ಲಿ ನಟಿಸಲು ಸಖತ್ ಆಸಕ್ತಿ ತೋರಿಸುತ್ತಾರೆ. ಅದೇ ಅವರಿಗೆ ಮುಳುವಾಗಬಹುದು ಎಂದು ಕೆಲವರು ಊಹಿಸಿದ್ದರು.

Samantha: ಸಮಂತಾ ಅನಾರೋಗ್ಯದ ಬಗ್ಗೆ ಮತ್ತೆ ಹಬ್ಬಿದೆ ಸುದ್ದಿ; 6 ತಿಂಗಳು ಅಮೆರಿಕದಲ್ಲಿ ಚಿಕಿತ್ಸೆ?
ಸಮಂತಾ
Follow us on

ನಟಿ ಸಮಂತಾ ರುತ್​ ಪ್ರಭು (Samantha Ruth Prabhu) ಅವರು ಅನಾರೋಗ್ಯದ ಕಾರಣಕ್ಕೆ ಸುದ್ದಿ ಆಗಿದ್ದೇ ಹೆಚ್ಚು. Myositis ಕಾಯಿಲೆಯಿಂದ ಅವರು ಬಳಲಿದ್ದರು. ಅದರಿಂದಾಗಿ ಹಲವು ಸಿನಿಮಾದ ಕೆಲಸಗಳು ವಿಳಂಬ ಆಗಿದ್ದವು. ಹಲವು ತಿಂಗಳ ಕಾಲ ಚಿಕಿತ್ಸೆ ಪಡೆದ ಬಳಿಕ ಅವರು ಚೇತರಿಸಿಕೊಂಡರು. ನಂತರ ಮತ್ತೆ ನಟನೆಗೆ ಮರಳಿದರು. ಇನ್ನೇನು ಸಮಂತಾ (Samantha) ಬದುಕಿನಲ್ಲಿ ಎಲ್ಲವೂ ಸರಿಯಾಯಿತು ಎಂದು ಅಭಿಮಾನಿಗಳು ಖುಷಿಪಡುತ್ತಿರುವಾಗಲೇ ಮತ್ತೆ ಬ್ಯಾಡ್​ ನ್ಯೂಸ್​ ಕೇಳಿಬಂದಿದೆ. ಸಮಂತಾ ರುತ್​ ಪ್ರಭು ಅವರಿಗೆ Myositis ಸಮಸ್ಯೆ ಮರುಕಳಿಸಿದೆ ಎಂದು ಹೇಳಲಾಗುತ್ತಿದೆ. ಅದಕ್ಕಾಗಿ ಅವರು ವಿದೇಶದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ. ಆ ಬಗ್ಗೆ ಸ್ವತಃ ಸಮಂತಾ ಅವರು ಪ್ರತಿಕ್ರಿಯೆ ನೀಡಬೇಕಿದೆ. ಆ ಬಳಿಕವವೇ ಸ್ಪಷ್ಟ ಚಿತ್ರಣ ಸಿಗಲಿದೆ.

ವಿಜಯ್​ ದೇವರಕೊಂಡ ಜೊತೆ ‘ಖುಷಿ’ ಸಿನಿಮಾದಲ್ಲಿ ಸಮಂತಾ ನಟಿಸುತ್ತಿದ್ದಾರೆ. ವರುಣ್ ಧವನ್​ ಜೊತೆ ಸಿಟಾಡೆಲ್​ ವೆಬ್​ ಸರಣಿಯ ಇಂಡಿಯನ್​ ವರ್ಷನ್​ನಲ್ಲಿ ಅಭಿನಯಿಸುತ್ತಿದ್ದಾರೆ. ಇದಲ್ಲದೇ ಒಂದು ಇಂಗ್ಲಿಷ್​ ಸಿನಿಮಾದಲ್ಲೂ ಅವರು ಮುಖ್ಯ ಭೂಮಿಕೆ ನಿಭಾಯಿಸುತ್ತಿದ್ದಾರೆ. ಈಗ ಅವರು 6 ತಿಂಗಳು ಬ್ರೇಕ್​ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂದು ಗಾಸಿಪ್​ ಹಬ್ಬಿದೆ. ಅದಕ್ಕೆ ಕಾರಣ ಏನು ಎಂಬ ಬಗ್ಗೆಯೂ ಗುಸುಗುಸು ಕೇಳಿಬರುತ್ತಿದೆ. ಅಮೆರಿಕದಲ್ಲಿ Myositis ಕಾಯಿಲೆಗೆ ಚಿಕಿತ್ಸೆ ಪಡೆಯುವ ಸಲುವಾಗಿಯೇ ಸಮಂತಾ ಅವರು ಬ್ರೇಕ್​ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ವಿತೌಟ್‌ ಮೇಕಪ್​​​ನಲ್ಲಿ ​​ ನಟಿ ಸಮಂತಾ ಹೇಗಿದ್ದಾರೆ ನೋಡಿ

ಸಮಂತಾ ಅವರು ಆ್ಯಕ್ಷನ್​ ದೃಶ್ಯಗಳಲ್ಲಿ ನಟಿಸಲು ಸಖತ್ ಆಸಕ್ತಿ ತೋರಿಸುತ್ತಾರೆ. ಅದೇ ಅವರಿಗೆ ಮುಳುವಾಗಬಹುದು ಎಂದು ಕೆಲವರು ಊಹಿಸಿದ್ದರು. ಅನಾರೋಗ್ಯದಿಂದ ಕೊಂಚ ಚೇತರಿಸಿಕೊಂಡ ಬಂದ ಬಳಿಕ ಅವರು ಕಿಂಚಿತ್ತೂ ವಿಶ್ರಾಂತಿ ಇಲ್ಲದೇ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದರು. ಅದೂ ಸಾಲದೆಂಬಂತೆ ಹಲವು ದೇಶಗಳನ್ನು ಸುತ್ತಿದರು. ಇದರಿಂದ ಅವರಿಗೆ ಮತ್ತೆ ಆರೋಗ್ಯ ಕೈ ಕೊಟ್ಟಿರಬಹುದು ಎನ್ನಲಾಗುತ್ತಿದೆ.

ಇದನ್ನೂ ಓದಿ: ನಟಿ ಸಮಂತಾ ಹಂಚಿಕೊಂಡಿರುವ ಮಯೋಸೈಟಿಸ್ ಕಾಯಿಲೆ ಲಕ್ಷಣಗಳು ಇಲ್ಲಿವೆ

ನಾಗ ಚೈತನ್ಯ ಜೊತೆಗಿನ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಬಳಿಕ ಸಮಂತಾ ರುತ್​ ಪ್ರಭು ಅವರು ಸಿನಿಮಾಗಳಲ್ಲಿ ಹೆಚ್ಚು ಆ್ಯಕ್ಟೀವ್​ ಆಗಿದ್ದಾರೆ. ಪಾತ್ರಗಳ ಆಯ್ಕೆಯಲ್ಲಿ ಅವರ ನಿಲುವು ಬದಲಾಯಿತು. ಎಷ್ಟೇ ಬೋಲ್ಡ್​ ಆದಂತಹ ಪಾತ್ರ ಮಾಡಲೂ ಅವರು ಹಿಂದೇಟು ಹಾಕುತ್ತಿಲ್ಲ. ‘ಖುಷಿ’ ಸಿನಿಮಾ ಮತ್ತು ‘ಸಿಟಾಡೆಲ್​’ ವೆಬ್​ ಸರಣಿ ಬಗ್ಗೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.