Sign In

By signing in or creating an account, you agree with Associated Broadcasting Company's Terms & Conditions and Privacy Policy.

Jailer Song: ದಿನದಿನವೂ ಹೆಚ್ಚುತ್ತಿದೆ ತಮನ್ನಾ ಭಾಟಿಯಾ ಮಾದಕತೆ; ‘ಜೈಲರ್’ ಸಿನಿಮಾದಲ್ಲಿ ಹಾಟ್​ ಅವತಾರ

Tamannaah Bhatia: ಪಾತ್ರವರ್ಗದ ಕಾರಣದಿಂದ ‘ಜೈಲರ್​’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ಈ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಅವರು ಗ್ಲಾಮರಸ್​ ಆಗಿ ಕಾಣಿಸಿಕೊಳ್ಳಲಿದ್ದಾರೆ.

Jailer Song: ದಿನದಿನವೂ ಹೆಚ್ಚುತ್ತಿದೆ ತಮನ್ನಾ ಭಾಟಿಯಾ ಮಾದಕತೆ; ‘ಜೈಲರ್’ ಸಿನಿಮಾದಲ್ಲಿ ಹಾಟ್​ ಅವತಾರ
ತಮನ್ನಾ ಭಾಟಿಯಾ
Follow us
ಮದನ್​ ಕುಮಾರ್​
|

Updated on: Jul 06, 2023 | 2:36 PM

ನಟಿ ತಮನ್ನಾ ಭಾಟಿಯಾ (Tamanna Bhatia) ಅವರು ಹಲವು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಅವರು ಸಿನಿಮಾ ಆಯ್ಕೆಯಲ್ಲಿ ತಮ್ಮ ನಿಲುವು ಬದಲಾಯಿಸಿಕೊಂಡಿದ್ದಾರೆ. 18 ವರ್ಷಗಳ ಕಾಲ ಕಿಸ್ಸಿಂಗ್ ದೃಶ್ಯಗಳಿಗೆ ನೋ ಎಂದಿದ್ದ ಅವರು ಈಗ ವಿಜಯ್​ ವರ್ಮಾ ಜೊತೆ ‘ಲಸ್ಟ್​​ ಸ್ಟೋರೀಸ್​ 2’ ಸಿನಿಮಾದಲ್ಲಿ ಲಿಪ್​ ಲಾಕ್​ ಮಾಡಿ ಸುದ್ದಿ ಆಗಿದ್ದಾರೆ. ಅಷ್ಟೇ ಅಲ್ಲದೇ ‘ಜೈಲರ್​’ (Jailer) ಸಿನಿಮಾದಲ್ಲೂ ಅವರು ಹಾಟ್​ ಅವತಾರ ತಾಳಿದ್ದಾರೆ. ರಜನಿಕಾಂತ್​ (Rajinikanth) ನಟನೆಯ ‘ಜೈಲರ್​’ ಚಿತ್ರದಲ್ಲಿ ತಮನ್ನಾ ಭಾಟಿಯಾ ನಟಿಸಿದ್ದು, ಹೊಸ ಪೋಸ್ಟರ್​ ಮೂಲಕ ಕೌತುಕ ಮೂಡಿಸಲಾಗಿದೆ. ಇಂದು (ಜುಲೈ 6) ಈ ಸಿನಿಮಾದ ಮೊದಲ ಸಾಂಗ್​ ಬಿಡುಗಡೆ ಆಗಲಿದೆ. ಅದರಲ್ಲಿ ತಮನ್ನಾ ಭಾಟಿಯಾ ಅವರು ಅಭಿಮಾನಿಗಳ ಕಣ್ಮನ ಸೆಳೆಯುವ ರೀತಿಯಲ್ಲಿ ಡ್ಯಾನ್ಸ್​ ಮಾಡಿದ್ದಾರೆ ಎಂಬುದಕ್ಕೆ ಈ ಪೋಸ್ಟರ್​ನಲ್ಲಿ ಸುಳಿವು ಸಿಕ್ಕಿದೆ.

ತಮನ್ನಾ ಭಾಟಿಯಾ ಅವರು ಐಟಂ ಸಾಂಗ್​ಗಳಲ್ಲಿ ನಟಿಸಿದ್ದು ಇದೇ ಮೊದಲೇನಲ್ಲ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ‘ಜೋಕೆ ನಾನು ಬಳ್ಳಿಯ ಮಿಂಚು..’ ಹಾಡಿನಲ್ಲಿ ತಮನ್ನಾ ಸ್ಟೆಪ್​ ಹಾಕಿದ ಪರಿಗೆ ಪಡ್ಡೆ ಹುಡುಗರು ಫಿದಾ ಆಗಿದ್ದರು. ತೆಲುಗು, ತಮಿಳಿನ ಸಿನಿಮಾಗಳಲ್ಲೂ ಅವರು ಐಟಂ ಡ್ಯಾನ್ಸ್​ ಮಾಡಿ ಸೈ ಎನಿಸಿಕೊಂಡಿದ್ದಾರೆ. ಈಗ ಅವರು ‘ಜೈಲರ್​’ ಚಿತ್ರದಲ್ಲಿ ಯಾವ ರೀತಿ ಕುಣಿದಿದ್ದಾರೆ ಎಂಬುದನ್ನು ತಿಳಿಯುವ ಸಮಯ ಬಂದಿದೆ. ಜುಲೈ 6ರ ಸಂಜೆ 6 ಗಂಟೆಗೆ ‘ಕಾವಾಲಾ..’ ಸಾಂಗ್​ ರಿಲೀಸ್​ ಆಗಲಿದೆ.

ಪಾತ್ರವರ್ಗದ ಕಾರಣದಿಂದ ‘ಜೈಲರ್​’ ಸಿನಿಮಾ ಹೈಪ್​ ಸೃಷ್ಟಿ ಮಾಡಿದೆ. ರಜನಿಕಾಂತ್​ ಜೊತೆ ರಮ್ಯಾ ಕೃಷ್ಣನ್​, ಯೋಗಿ ಬಾಬು, ವಿನಾಯಕನ್​, ವಸಂತ್​ ರವಿ, ಶಿವರಾಜ್​ಕುಮಾರ್​, ಮೋಹನ್​ಲಾಲ್​, ತಮನ್ನಾ ಭಾಟಿಯಾ, ಜಾಕಿ ಶ್ರಾಫ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನಿರುದ್ಧ್ ರವಿಚಂದರ್​ ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

Vijay Varma: ‘ನಾನು ಖುಷಿಯಾಗಿದ್ದೇನೆ’: ತಮನ್ನಾ ಭಾಟಿಯಾ ಪ್ರೀತಿ ಒಪ್ಪಿಕೊಂಡ ಬಳಿಕ ವಿಜಯ್​ ವರ್ಮಾ ಪ್ರತಿಕ್ರಿಯೆ

ಪ್ರತಿಷ್ಠಿತ ‘ಸನ್​ ಪಿಕ್ಚರ್ಸ್​’ ಮೂಲಕ ‘ಜೈಲರ್​’ ಸಿನಿಮಾ ನಿರ್ಮಾಣ ಆಗುತ್ತಿದೆ. ಸದ್ಯ ಈ ಚಿತ್ರಕ್ಕೆ ಕೊನೇ ಹಂತದ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಆಗಸ್ಟ್​ 11ರಂದು ಈ ಚಿತ್ರ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಶಿವರಾಜ್​ಕುಮಾರ್​ ನಟಿಸಿರುವುದರಿಂದ ಕನ್ನಡಿಗರು ಸಹ ‘ಜೈಲರ್​’ ಮೇಲೆ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಚಿರಂಜೀವಿ ನಟನೆಯ ‘ಭೋಲಾ ಶಂಕರ್​’ ಕೂಡ ಆಗಸ್ಟ್​ 11ರಂದು ರಿಲೀಸ್​ ಆಗಲಿರುವುದರಿಂದ ಬಾಕ್ಸ್​ ಆಫೀಸ್​ನಲ್ಲಿ ಕ್ಲ್ಯಾಶ್​ ಏರ್ಪಡಲಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಚಾಮುಂಡಿ ಬೆಟ್ಟದ ಬೆಂಕಿ ಹತೋಟಿಗೆ ಸಿಗುತ್ತಿಲ್ಲ..ಅಗ್ನಿ ನರ್ತನ ಹೇಗಿದೆ ನೋಡಿ
ಚಾಮುಂಡಿ ಬೆಟ್ಟದ ಬೆಂಕಿ ಹತೋಟಿಗೆ ಸಿಗುತ್ತಿಲ್ಲ..ಅಗ್ನಿ ನರ್ತನ ಹೇಗಿದೆ ನೋಡಿ
ಸರ್ಕಾರ ಜಾತ್ಯಾತೀತ ಧೋರಣೆ ಹೇಗೆ ನಿಭಾಯಿಸುತ್ತದೆ ನೋಡೋಣ: ಸಿಟಿ ರವಿ
ಸರ್ಕಾರ ಜಾತ್ಯಾತೀತ ಧೋರಣೆ ಹೇಗೆ ನಿಭಾಯಿಸುತ್ತದೆ ನೋಡೋಣ: ಸಿಟಿ ರವಿ
ಶರದ್ ಪವಾರ್​​ಗೆ ಕುರ್ಚಿ ಹಾಕಿ, ನೀರು ನೀಡಿದ ಪ್ರಧಾನಿ ಮೋದಿ; ವಿಡಿಯೋ ವೈರಲ್
ಶರದ್ ಪವಾರ್​​ಗೆ ಕುರ್ಚಿ ಹಾಕಿ, ನೀರು ನೀಡಿದ ಪ್ರಧಾನಿ ಮೋದಿ; ವಿಡಿಯೋ ವೈರಲ್
ದರೋಡೆಗೆ ಹೋದಾಗ ಮಾಲೀಕ ಎದ್ದಿದ್ದನ್ನು ನೋಡಿ ಟೆರೇಸ್​ನಿಂದ ಬಿದ್ದ ಕಳ್ಳ
ದರೋಡೆಗೆ ಹೋದಾಗ ಮಾಲೀಕ ಎದ್ದಿದ್ದನ್ನು ನೋಡಿ ಟೆರೇಸ್​ನಿಂದ ಬಿದ್ದ ಕಳ್ಳ
ಸಜ್ಜನರಾಗಿ ಬದುಕುವಂತೆ ರೌಡಿಗಳಿಗೆ ಪೊಲೀಸ್ ಅಧಿಕಾರಿ ಎಚ್ಚರಿಕೆ
ಸಜ್ಜನರಾಗಿ ಬದುಕುವಂತೆ ರೌಡಿಗಳಿಗೆ ಪೊಲೀಸ್ ಅಧಿಕಾರಿ ಎಚ್ಚರಿಕೆ
ಟೋಲ್ ಪಾವತಿಸಲು ನಿಂತಿದ್ದ ಕಾರಿಗೆ ಹಿಂದಿನಿಂದ ಬಂದ ಲಾರಿ ಢಿಕ್ಕಿ
ಟೋಲ್ ಪಾವತಿಸಲು ನಿಂತಿದ್ದ ಕಾರಿಗೆ ಹಿಂದಿನಿಂದ ಬಂದ ಲಾರಿ ಢಿಕ್ಕಿ
ಮರಾಠಿಯಲ್ಲಿ ಟಿಕೆಟ್ ಕೇಳುತ್ತಿದ್ದ ಮಹಿಳೆಗೆ ಕನ್ನಡದಲ್ಲಿ ಅಂದಿದ್ದಕ್ಕೆ ಏಟು!
ಮರಾಠಿಯಲ್ಲಿ ಟಿಕೆಟ್ ಕೇಳುತ್ತಿದ್ದ ಮಹಿಳೆಗೆ ಕನ್ನಡದಲ್ಲಿ ಅಂದಿದ್ದಕ್ಕೆ ಏಟು!
ಗಂಗೆ ನೀರು ಕಲುಷಿತವೇ? ವಿಜ್ಞಾನಿ ಡಾ. ಅಜಯ್ ಸೋಂಕರ್ ಹೇಳಿದ್ದೇನು?
ಗಂಗೆ ನೀರು ಕಲುಷಿತವೇ? ವಿಜ್ಞಾನಿ ಡಾ. ಅಜಯ್ ಸೋಂಕರ್ ಹೇಳಿದ್ದೇನು?
ಸರ್ಕಾರದ ಧೋರಣೆಯಿಂದ ಬ್ರ್ಯಾಂಡ್ ಬೆಂಗಳೂರು ಇಮೇಜಿಗೆ ಧಕ್ಕೆ: ವಿಜಯೇಂದ್ರ
ಸರ್ಕಾರದ ಧೋರಣೆಯಿಂದ ಬ್ರ್ಯಾಂಡ್ ಬೆಂಗಳೂರು ಇಮೇಜಿಗೆ ಧಕ್ಕೆ: ವಿಜಯೇಂದ್ರ
ಬಿಡುಗಡೆ ಆಗಲಿಲ್ಲ ‘ಎದ್ದೇಳು ಮಂಜುನಾಥ 2’, ಚಿತ್ರಮಂದಿರಗಳಿಗೆ ಎಷ್ಟು ನಷ್ಟ?
ಬಿಡುಗಡೆ ಆಗಲಿಲ್ಲ ‘ಎದ್ದೇಳು ಮಂಜುನಾಥ 2’, ಚಿತ್ರಮಂದಿರಗಳಿಗೆ ಎಷ್ಟು ನಷ್ಟ?