
ನಟಿ ಸಮಂತಾ (Samantha) ಅವರು ಸದ್ಯ ಒಂದು ವರ್ಷ ಬ್ರೇಕ್ ತೆಗೆದುಕೊಂಡಿದ್ದಾರೆ. Myositis ಕಾಯಿಲೆಯಿಂದ ಬಳಲುತ್ತಿರುವ ಅವರು ತೊಂದರೆ ಅನುಭವಿಸುತ್ತಿದ್ದಾರೆ. ಈ ಕಾಯಿಲೆಯಿಂದ ಸ್ವಲ್ಪ ಚೇತರಿಕೆ ಕಂಡ ಬಳಿಕ ಅವರು ಒಪ್ಪಿಕೊಂಡ ಸಿನಿಮಾ ಕೆಲಸಗಳನ್ನು ಮುಗಿಸಿಕೊಟ್ಟರು. ಹೀಗಿರುವಾಗಲೇ ಸಮಂತಾ ಒಂದು ವರ್ಷ ಬ್ರೇಕ್ ತೆಗೆದುಕೊಂಡಿದ್ದಾರೆ. ಅಚ್ಚರಿಯ ವಿಚಾರ ಎಂದರೆ ಸಮಂತಾಗೆ ಇದರಿಂದ ಒಂದಲ್ಲ, ಎರಡಲ್ಲ ಬರೋಬ್ಬರಿ 12 ಕೋಟಿ ರೂಪಾಯಿ ನಷ್ಟ ಆಗುತ್ತಿದೆ! ಸದ್ಯ ಹೀಗೊಂದು ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗುತ್ತಿದೆ. ಫ್ಯಾನ್ಸ್ ಇದಕ್ಕೆ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
2020ರಲ್ಲಿ ಕೊವಿಡ್ ಕಾಣಿಸಿಕೊಂಡಿತು. ಅದಕ್ಕೂ ಮೊದಲು ವರ್ಷಕ್ಕೆ ಸಮಂತಾ ನಟನೆಯ ಮೂರು ಸಿನಿಮಾಗಳು ರಿಲೀಸ್ ಆಗುತ್ತಿದ್ದವು. ಆದರೆ, ಕೊವಿಡ್ ಕಾಣಿಸಿಕೊಂಡ ಬಳಿಕ ಸಮಂತಾ ವೃತ್ತಿ ಜೀವನದ ವೇಗ ಕೊಂಚ ತಗ್ಗಿದೆ. ಎಲ್ಲವೂ ಸರಿ ಆಯಿತು ಎಂದುಕೊಳ್ಳುವಾಗಲೇ ಅವರಿಗೆ myositis ಕಾಯಿಲೆ ಕಾಣಿಸಿಕೊಂಡಿತು. ಈಗ ಸಮಂತಾಗೆ ಒಂದು ವರ್ಷ ಬ್ರೇಕ್ ಪಡೆಯೋದು ಅನಿವಾರ್ಯ ಆಗಿದೆ.
ಸಮಂತಾ ಅವರು ಪ್ರತಿ ಸಿನಿಮಾಗೆ 3.5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. ಇದರ ಜೊತೆಗೆ ಅನೇಕ ಜಾಹೀರಾತುಗಳಲ್ಲಿ ಅವರು ನಟಿಸುತ್ತಾರೆ. ಇದನ್ನು ಗಮನದಲ್ಲಿ ಇಟ್ಟುಕೊಂಡರೆ ವರ್ಷಕ್ಕೆ ಅವರು 12 ಕೋಟಿ ರೂಪಾಯಿ ಗಳಿಕೆ ಮಾಡುತ್ತಿದ್ದರು. ಈಗ ಒಂದು ವರ್ಷದ ಬ್ರೇಕ್ನಿಂದ ಅವರಿಗೆ 12 ಕೋಟಿ ರೂಪಾಯಿ ನಷ್ಟ ಆಗಿದೆ. ಈ ನಷ್ಟ ಭರಿಸಲು ಅವರು ಸಿದ್ಧರಿದ್ದಾರೆ.
ಇದನ್ನೂ ಓದಿ: ಸಮಂತಾ, ನಿಹಾರಿಕಾ ಬಳಿಕ ಮತ್ತೊಂದು ನಟಿಯ ವಿಚ್ಛೇದನ? ಮತ್ತದೇ ಪ್ಯಾಟರ್ನ್
ಇತ್ತೀಚೆಗೆ ಸಮಂತಾ ಅವರು ಬಾಲಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಫೋಟೋಗಳನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫ್ರೆಂಡ್ ಜೊತೆ ಸೇರಿ ಅವರು ಬಾಲಿ ಸುತ್ತುತ್ತಿದ್ದಾರೆ. ಸಿನಿಮಾ ವಿಚಾರಕ್ಕೆ ಬರೋದಾದರೆ ಅವರ ನಟನೆಯ ‘ಖುಷಿ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಈ ಚಿತ್ರಕ್ಕೆ ವಿಜಯ್ ದೇವರಕೊಂಡ ಹೀರೋ. ಇನ್ನು, ಇಂಗ್ಲಿಷ್ ಸೀರಿಸ್ ‘ಸಿಟಾಡೆಲ್’ನ ಇಂಡಿಯನ್ ವರ್ಷನ್ನಲ್ಲಿ ಅವರು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:37 am, Wed, 26 July 23