ಸದ್ಗುರು ಸಂಘ ಸೇರಿದ ಸಮಂತಾ: ಎಲ್ಲರೊಳಗೊಂದಾಗಿ ನೆಮ್ಮದಿಯ ಹುಡುಕುತ್ತಾ
Samantha: ಚಿತ್ರೀಕರಣದಿಂದ ಒಂದು ವರ್ಷ ಬಿಡುವು ಪಡೆದಿರುವ ನಟಿ ಸಮಂತಾ, ಇಶಾ ಫೌಂಡೇಶನ್ ಸೇರಿದ್ದು ಸದ್ಗುರು ಮಾರ್ಗದರ್ಶನದಲ್ಲಿ ಯೋಗ, ಧ್ಯಾನಗಳಲ್ಲಿ ತೊಡಗಿದ್ದಾರೆ.
ಮಾನಸಿಕ ಹಾಗೂ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಈಡಾಗಿದ್ದ ನಟಿ ಸಮಂತಾ (Samantha), ಅನಾರೋಗ್ಯದ ನಡುವೆಯೂ ಸತತವಾಗಿ ಚಿತ್ರೀಕರಣಗಳಲ್ಲಿ ಭಾಗಿಯಾಗಿದ್ದರು. ಅವರೇ ಹೇಳಿಕೊಂಡಿರುವಂತೆ, ಕಳೆದ ಆರು ತಿಂಗಳು ಅವರ ವೃತ್ತಿ ಜೀವನದ ಅತ್ಯಂತ ಬ್ಯುಸಿ ಹಾಗೂ ಶ್ರಮದಾಯಕ ಸಮಯವಾಗಿತ್ತಂತೆ. ಒಪ್ಪಿಕೊಂಡ ಸಿನಿಮಾ, ವೆಬ್ ಸರಣಿಗಳ ಚಿತ್ರೀಕರಣ ಮುಗಿಸಿಕೊಟ್ಟಿರುವ ಸಮಂತಾ, ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ ಬದಲಿಗೆ ಬರೋಬ್ಬರಿ ಒಂದು ವರ್ಷಗಳ ಕಾಲ ಸಿನಿಮಾಗಳಿಂದ ವಿರಾಮ ಪಡೆದಿದ್ದು, ಬಿಡುವಿನ ಮೊದಲ ಹಂತವನ್ನು ಆದಿಯೋಗಿಯ ಸನ್ನಿಧಿಯಲ್ಲಿ ಕಳೆಯಲು ನಿಶ್ಚಯಿಸಿ ಇಶಾ ಫೌಂಡೇಶನ್ (Isha Foundation) ಸೇರಿಕೊಂಡಿದ್ದಾರೆ.
ಸದ್ಗುರುವಿನ ಅನುಯಾಯಿ ಆಗಿರುವ ಸಮಂತಾ, ಕೊಯಮತ್ತೂರಿನಲ್ಲಿ ಸದ್ಗುರು ಸ್ಥಾಪಿಸಿರುವ ಇಶಾ ಸೆಂಟರ್ ಸೇರಿಕೊಂಡಿದ್ದು ಅಲ್ಲಿ, ಸದ್ಗುರುವಿನ ಮಾರ್ಗದರ್ಶನದಲ್ಲಿ ಧ್ಯಾನ, ಪೂಜೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ಸುಂದರವಾದ ಪ್ರಕೃತಿಯನ್ನು ಎಂಜಾಯ್ ಮಾಡುತ್ತಿದ್ದಾರೆ. ಇಶಾ ಯೋಗದಲ್ಲಿ ಕಳೆಯುತ್ತಿರುವ ಗುಣಮಟ್ಟದ ಸಮಯದ ಕೆಲವು ಚಿತ್ರಗಳನ್ನು ಸಮಂತಾ ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ಇತರ ಭಕ್ತಾಧಿಗಳ ಜೊತೆಗೆ ನೆಲಹಾಸಿನ ಮೇಲೆ ಕುಳಿತು ಧ್ಯಾನ ಮಾಡುತ್ತಿರುವ ತಮ್ಮ ಚಿತ್ರವನ್ನು ಸಮಂತಾ ಹಂಚಿಕೊಂಡಿದ್ದಾರೆ. ಕೆಲವು ಹೊತ್ತಿಗೆ ಮುಂಚೆ ಏನಾದರೂ ತಿರುವುತ್ತಾ, ಮುರಿಯುತ್ತಾ, ಮೈಯಿ ಕೆರೆಯುತ್ತಾ, ಯೋಚನೆಗಳ ಪ್ರವಾಹಗಳಲ್ಲಿ ಇರುತ್ತಿದ್ದೆ. ಇವುಗಳನ್ನು ಮಾಡದೆ ಸುಮ್ಮನೆ ಕೂರುವುದು ಅಸಾಧ್ಯ ಎಂಬ ಪರಿಸ್ಥಿತಿಯಲ್ಲಿದ್ದೆ. ಆದರೆ ಇಂದು ಸತತವಾಗಿ ಧ್ಯಾನಮಗ್ನಳಾಗಿದ್ದೆ. ಧ್ಯಾನ ನನ್ನ ಶಕ್ತಿ ಎಂದು ಅರಿತುಕೊಂಡೆ. ಧ್ಯಾನ ನನ್ನ ಸಂವಹನ, ನನಗೆ ಸ್ಪಷ್ಟನೆಯನ್ನು ನೀಡುತ್ತದೆ ಎಂದು ಅರಿತುಕೊಂಡೆ. ಇಷ್ಟು ಸರಳವಾದ ಕಾರ್ಯವೊಂದರಲ್ಲಿ ಇಷ್ಟು ಶಕ್ತಿ ಅಡಗಿರುತ್ತದೆ ಎಂದು ತಿಳಿದಿರಲಿಲ್ಲ” ಎಂದು ಸಮಂತಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:Samantha: ಆರೋಗ್ಯ ಹದಗೆಟ್ಟ ಬಳಿಕ ಮತ್ತೆ ದೇವರ ಮೊರೆಹೋದ ನಟಿ ಸಮಂತಾ ರುತ್ ಪ್ರಭು
ತಾವು ಧ್ಯಾನ ಮಾಡುತ್ತಿರುವ ಚಿತ್ರಗಳ ಜೊತೆಗೆ ಇಶಾ ಸೆಂಟರ್ನಿಂದ ಕಾಣುವ ಸುಂದರ ಪ್ರಕೃತಿಯ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ನವಿಲೊಂದು ತನ್ನ ರೆಕ್ಕೆ ಬಿಚ್ಚಿ ಕುಣಿಯುತ್ತಿರುವ ವಿಡಿಯೋವನ್ನು ಸಹ ಸಮಂತಾ ಹಂಚಿಕೊಂಡಿದ್ದಾರೆ.
ಸಮಂತಾ, ಅಧ್ಯಾತ್ಮದ ಬಗ್ಗೆ ಆಸಕ್ತಿಯುಳ್ಳವರು. ಇಶಾ ಫೌಂಡೇಶನ್ನಿಂದ ಪ್ರೇರಿತರಾಗಿ ಲಿಂಗ ಭೈರವಿ ದೇವಿಯನ್ನು ಆರಾಧಿಸುತ್ತಾರೆ. ಲಿಂಗ ಭೈರವಿ ದೇವಿ ಸಾಂಪ್ರದಾಯಿಕ ದೇವರುಗಳಂತಲ್ಲ. ದೈವಿಕ ಸ್ತೀತ್ವವನ್ನು ಲಿಂಗದ ರೂಪದಲ್ಲಿ ಪೂಜಿಸುವುದೇ ಲಿಂಗ ಭೈರವಿಯ ಆರಾಧನೆಯ ಉದ್ದೇಶ. ಭೈರವಿ ದೇವಿಯ ಲಿಂಗದ ರೂಪವೆಂದೂ ಹೇಳಬಹುದು. ಲಿಂಗದ ರೂಪದಲ್ಲಿನ ಏಕೈಕ ದೇವಿ ಎಂದೂ ಹೇಳಬಹುದು. ಲಿಂಗ ಭೈರವಿ ದೇವಿಯ ರೂಪ ಅನೂಹ್ಯವಾದುದು. ಲಿಂಗಕ್ಕೆ ಎರಡು ದೊಡ್ಡ ಕಣ್ಣಿನ ಜೊತೆಗೆ ಹತ್ತು ಪುಟ್ಟ ಕೈಗಳಿವೆ. ವಿಶೇಷವೆಂದರೆ ಪರಮೇಶ್ವರನಂತೆ ಈಕೆಯ ಹಣೆಯ ಮೇಲೂ ಮೂರನೇ ಕಣ್ಣೋಂದಿದೆ. ಒಂದು ಮೂಗುತಿಯೂ ಇದೆ. ಇಶಾ ಫೌಂಡೇಶನ್ನಲ್ಲಿ ಈ ದೇವಿನ ದೇವಸ್ಥಾನವಿದೆ.
ಸಮಂತಾ ಪಾತ್ರವೇ ಅಲ್ಲದೆ ಹಲವು ನಟ-ನಟಿಯರು ಇಶಾ ಫೌಂಡೇಶನ್ನ ಅನುಯಾಯಿಗಳಾಗಿದ್ದಾರೆ. ಕೆಲವು ತಿಂಗಳ ಹಿಂದೆ ನಟಿ ತಮನ್ನಾ ಭಾಟಿಯಾ ಸಹ ಇಶಾ ಫೌಂಡೇಶನ್ಗೆ ಭೇಟಿ ನೀಡಿ ಲಿಂಗ ಭೈರವಿ ದೇವಿಯ ಆರಾಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ರಾಮ್ ಚರಣ್ ಪತ್ನಿ ಉಪಾಸನಾ ಸಹ ಸದ್ಗುರು ಅವರ ಅನುಯಾಯಿ.