Samantha: ಅಚಾನಕ್ಕಾಗಿ ಅರೆಬೆತ್ತಲೆ ಫೋಟೋ ಅಪ್​ಲೋಡ್ ಮಾಡಿದ್ರಾ ಸಮಂತಾ?

ಸಮಂತಾ ಹಲವು ಸಿನಿಮಾಗಳಲ್ಲಿ ಬೋಲ್ಡ್ ಪಾತ್ರ ಮಾಡಿದ್ದಾರೆ ನಿಜ. ಅದು ತೆರೆಮೇಲಿನ ವಿಚಾರ ಅಷ್ಟೇ. ಆದರೆ, ಕೆಲವು ಕಿಡಿಗೇಡಿಗಳು ಅವರ ಹೆಸರನ್ನು ಕೆಡಿಸೋ ಪ್ರಯತ್ನದಲ್ಲಿದ್ದಾರೆ. ಅವರು ಅರೆಬೆತ್ತಲೆ ಫೋಟೋ ಹಂಚಿಕೊಂಡಿದ್ದಾರೆ ಎನ್ನುವ ಆರೋಪ ಮಾಡುತ್ತಿದ್ದಾರೆ. ಆದರೆ ಅಸಲಿ ವಿಚಾರ ಏನು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ

Samantha: ಅಚಾನಕ್ಕಾಗಿ ಅರೆಬೆತ್ತಲೆ ಫೋಟೋ ಅಪ್​ಲೋಡ್ ಮಾಡಿದ್ರಾ ಸಮಂತಾ?
ಸಮಂತಾ

Updated on: May 06, 2024 | 6:58 AM

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ‘ಖುಷಿ’ ಬಳಿಕ ಯಾವುದೇ ಹೊಸ ಸಿನಿಮಾ ಒಪ್ಪಿಕೊಂಡಿಲ್ಲ. ಇದಕ್ಕೆ ಕಾರಣ ಅವರಿಗೆ ಅನಾರೋಗ್ಯ ಉಂಟಾಗಿರುವುದು. ಇದು ಅವರ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಅವರು ಆದಷ್ಟು ಬೇಗ ಹೊಸ ಚಿತ್ರಕ್ಕೆ ಸಹಿ ಹಾಕಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ಮಧ್ಯೆ ಅವರ ಅತೆಬೆತ್ತಲೆ ಫೋಟೋ ಒಂದು ವೈರಲ್ ಆಗಿದೆ. ಸಮಂತಾ ಇನ್​ಸ್ಟಾಗ್ರಾಮ್ ಸ್ಟೇಟಸ್​ಗೆ ಹಾಕಿ ನಂತರ ಡಿಲೀಟ್ ಮಾಡಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಅಸಲಿಗೆ ಇದು ತಿರುಚಿದ ಫೋಟೋ ಅನ್ನೋದು ಗೊತ್ತಾಗಿದೆ.

ಸಮಂತಾ ಅವರು ದೊಡ್ಡ ಮಟ್ಟದ ಖ್ಯಾತಿ ಪಡೆದಿದ್ದಾರೆ. ಅವರು ವಿಚ್ಛೇದನ ಕಾರಣಕ್ಕೆ ಸಾಕಷ್ಟು ಸುದ್ದಿ ಆಗಿದ್ದರು. ಈಗ ಸಮಂತಾ ಎಲ್ಲವನ್ನೂ ಮರೆತು ಮುಂದಕ್ಕೆ ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಈ ಮಧ್ಯೆ ಕೆಲವು ಕಿಡಿಕೇಡಿಗಳು ಅವರ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸೋ ಪ್ರಯತ್ನ ಮಾಡುತ್ತಿದ್ದಾರೆ. ಇದನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಖಂಡಿಸಿದ್ದಾರೆ.

ಇದನ್ನೂ ಓದಿ: ನಾಗ ಚೈತನ್ಯ ಮಾಡಿದ ಪರಸ್ತ್ರೀ ಸಹವಾಸದಿಂದಲೇ ಸಮಂತಾ ವಿಚ್ಛೇದನ? ವೈರಲ್​ ವಿಡಿಯೋ ಸಾಕ್ಷಿ

ಸಮಂತಾ ಅವರು ಚೇರ್ ಮೇಲೆ ಕುಳಿತಿರೋ ಫೋಟೋ, ಬಾತ್​ ಟಬ್​ನಲ್ಲಿ ಅರೆಬೆತ್ತಲಾಗಿ ಕುಳಿತಿರೋ ಫೋಟೋನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ. ಇದು ಸಮಂತಾ ಫೋಟೋ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಇವರು ಅಸಲಿಗೆ ಸಮಂತಾ ಅಲ್ಲವೇ ಅಲ್ಲ. ಇದು ಫೇಕ್ ಫೋಟೋ ಅನ್ನೋದು ಫ್ಯಾನ್ಸ್​ಗೆ ಗೊತ್ತಾಗಿದೆ. ಈ ರೀತಿ ಕಿಡಿಗೇಡಿತನ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ.

ಸಮಂತಾ ಅವರು ‘ಖುಷಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರ ಕಳೆದ ವರ್ಷ ರಿಲೀಸ್ ಆಗಿ ಸಾಧಾರಣ ಗೆಲುವು ಕಂಡಿತು. ಆ ಬಳಿಕ ಸಮಂತಾ ಅವರು ಯಾವುದೇ ಹೊಸ ಸಿನಿಮಾ ಘೋಷಣೆ ಮಾಡಿಲ್ಲ. ಅವರು ಸಂಪೂರ್ಣವಾಗಿ ಚೇತರಿಕೆ ಕಂಡಿಲ್ಲ ಎನ್ನಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.