Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೂಪೇಶ್​ ಶೆಟ್ಟಿ ನಟನೆಯ ‘ಅಧಿಪತ್ರ’ ಸಿನಿಮಾದ ಆಡಿಯೋ ಹಕ್ಕು ಪಡೆದ ಲಹರಿ ಸಂಸ್ಥೆ

‘ಅಧಿಪತ್ರ’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ತೆರೆಗೆ ಬರಲು ಸಜ್ಜಾಗುತ್ತಿರುವ ಈ ಸಿನಿಮಾದ ಝಲಕ್ ತೋರಿಸಲು ಚಿತ್ರತಂಡ ರೆಡಿ ಆಗಿದೆ. ಟೀಸರ್ ಬಿಡುಗಡೆಗೆ ತಯಾರಿ ನಡೆದಿದೆ. ಮೇ 10ರಂದು ‘ಲಹರಿ ಮ್ಯೂಸಿಕ್​’ ಮೂಲಕ ಟೀಸರ್​ ಅನಾವರಣ ಆಗಲಿದೆ. ಆ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಇನ್ನಷ್ಟು ಮಾಹಿತಿ ಸಿಗಲಿದೆ.

ರೂಪೇಶ್​ ಶೆಟ್ಟಿ ನಟನೆಯ ‘ಅಧಿಪತ್ರ’ ಸಿನಿಮಾದ ಆಡಿಯೋ ಹಕ್ಕು ಪಡೆದ ಲಹರಿ ಸಂಸ್ಥೆ
ರೂಪೇಶ್​ ಶೆಟ್ಟಿ
Follow us
ಮದನ್​ ಕುಮಾರ್​
|

Updated on: May 05, 2024 | 5:39 PM

ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಆದಂತಹ ‘ಬಿಗ್​ ಬಾಸ್​’ (Bigg Boss Kannada) ಕಾರ್ಯಕ್ರಮದಲ್ಲಿ ಸ್ಪರ್ಧಿಸಿದ ಬಳಿಕ ಎಲ್ಲರ ಜನಪ್ರಿಯತೆ ಹೆಚ್ಚುತ್ತದೆ. ನಟ ರೂಪೇಶ್​ ಶೆಟ್ಟಿ ವಿಚಾರದಲ್ಲಿ ಕೂಡ ಅದು ನಿಜವಾಗಿದೆ. ಈಗ ರೂಪೇಶ್​ ಶೆಟ್ಟಿ (Roopesh Shetty) ಅವರು ಹಲವು ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟಿಸಿರುವ ‘ಅಧಿಪತ್ರ’ ಸಿನಿಮಾ (Adhipatra Movie) ಬಿಡುಗಡೆಗೆ ಸಜ್ಜಾಗುತ್ತಿದೆ. ಈ ಸಿನಿಮಾದ ಆಡಿಯೋ ರಿಲೀಸ್​ ಬಗ್ಗೆ ಒಂದು ಸುದ್ದಿ ಸಿಕ್ಕಿದೆ. ಲಹರಿ ಸಂಸ್ಥೆಯು ‘ಅಧಿಪತ್ರ’ ಸಿನಿಮಾದ ಆಡಿಯೋ ಹಕ್ಕುಗಳನ್ನು ಖರೀದಿಸಿದೆ.

ರೂಪೇಶ್​ ಶೆಟ್ಟಿ ನಟನೆಯ ‘ಅಧಿಪತ್ರ’ ಸಿನಿಮಾವು ಸಸ್ಪೆನ್ಸ್-ಥ್ರಿಲ್ಲರ್ ಶೈಲಿಯಲ್ಲಿ ಮೂಡಿಬಂದಿದೆ. ‘ಕೆ.ಆರ್. ಸಿನಿ ಕಂಬೈನ್ಸ್’ ಬ್ಯಾನರ್‌ ಮೂಲಕ ದಿವ್ಯಾ ನಾರಾಯಣ್, ಕುಲದೀಪ್ ರಾಘವ್ ಲಕ್ಷ್ಮೇ ಗೌಡ ಅವರು ಈ ಚಿತ್ರಕ್ಕೆ ‌ಬಂಡವಾಳ ಹೂಡಿದ್ದಾರೆ. ಕಾರ್ತಿಕ್ ಶೆಟ್ಟಿ ಮತ್ತು ಸತೀಶ್ ಶೆಟ್ಟಿ ಕೂಡ ಸಹ-ನಿರ್ಮಾಪಕರಾಗಿದ್ದಾರೆ. ಆಡಿಯೋ ಹಕ್ಕುಗಳು ಪ್ರತಿಷ್ಠಿತ ಲಹರಿ ಸಂಸ್ಥೆಯ ಪಾಲಾಗಿರುವ ಸುದ್ದಿಯನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ.

ಬಿಗ್ ಬಾಸ್ ಶೋನಲ್ಲಿ ರೂಪೇಶ್ ಶೆಟ್ಟಿ ಅವರನ್ನು ನೋಡಿ ಖುಷಿಪಟ್ಟವರಿಗೆ ದೊಡ್ಡ ಪರದೆಯಲ್ಲೂ ‘ಅಧಿಪತ್ರ’ ಸಿನಿಮಾ ಮೂಲಕ ಮನರಂಜನೆ ನೀಡಲು ಅವರು ತಯಾರಾಗಿದ್ದಾರೆ. ಈಗಾಗಲೇ ಸಿನಿಮಾದ ಮೇಕಿಂಗ್ ಮತ್ತು ಕಂಟೆಂಟ್​ಗಳ ಮೂಲಕ ನಿರೀಕ್ಷೆಯನ್ನು ಹೆಚ್ಚಿಸಲಾಗಿದೆ. ಮೇ‌ 10ರಂದು ಈ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ.

ಈ ಸಿನಿಮಾಗೆ ಚಯನ್ ಶೆಟ್ಟಿ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ. ಇದು ಇವರ ಮೊದಲ ಸಿನಿಮಾ. ಜಾಹೀರಾತು ಕ್ಷೇತ್ರದಲ್ಲಿ ಕ್ರಿಯೇಟಿವ್ ಆ್ಯಡ್ಸ್ ಮೂಲಕ ಗಮನ ಸೆಳೆದಿರುವ ಅವರು ಈಗ ‘ಅಧಿಪತ್ರ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದಲ್ಲಿ ರೂಪೇಶ್ ಶೆಟ್ಟಿ ಅವರಿಗೆ ಜೋಡಿಯಾಗಿ ‘ಗಿಚ್ಚಿ ಗಿಲಿಗಿಲಿ’ ಖ್ಯಾತಿಯ ಜಾಹ್ನವಿ ಸಾಥ್ ನೀಡಿದ್ದಾರೆ. ‘ಕಾಂತಾರ’ ಸಿನಿಮಾದ ಖ್ಯಾತಿಯ ಪ್ರಕಾಶ್ ತುಮಿನಾಡು, ಎಂ.ಕೆ.‌ ಮಠ, ರಘು ಪಾಂಡೇಶ್ವರ್, ದೀಪಕ್ ರೈ, ಕಾರ್ತಿಕ್ ಭಟ್, ಅನಿಲ್ ಉಪ್ಪಾಲ್, ಪ್ರಶಾಂತ್ ಅವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ: 200 ಕೋಟಿ ರೂಪಾಯಿಗೆ ಮಾರಾಟ ಆಯ್ತು ‘ಪುಷ್ಪ 2’ ಸಿನಿಮಾದ ಹಿಂದಿ ವರ್ಷನ್​

‘ಅಧಿಪತ್ರ’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳು ಬಿರುಸಿನಿಂದ ಸಾಗುತ್ತಿವೆ. ಬಿಡುಗಡೆ ಸಜ್ಜಾಗುತ್ತಿರುವ ಈ ಸಿನಿಮಾದ ಝಲಕ್ ತೋರಿಸಲು ಚಿತ್ರತಂಡ ಈಗ ರೆಡಿಯಾಗಿದೆ. ಟೀಸರ್ ರಿಲೀಸ್​ಗೆ ತಯಾರಿ ನಡೆದಿದೆ. ಮೇ 10ಕ್ಕೆ ‘ಲಹರಿ ಮ್ಯೂಸಿಕ್​’ ಮೂಲಕ ಟೀಸರ್​ ರಿಲೀಸ್​ ಆಗಲಿದೆ. ಟೀಸರ್​ ನೋಡಿದರೆ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಮತ್ತುಷ್ಟು ಮಾಹಿತಿ ಸಿಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.