‘ಈ ವರ್ಷದ ಫೇವರಿಟ್ ಸಿನಿಮಾ’; ಒಟಿಟಿಯಲ್ಲಿ ‘ಮಂಜುಮ್ಮೇಲ್ ಬಾಯ್ಸ್’ ನೋಡಿ ಹೊಗಳಿದ ಸ್ಟಾರ್ ನಟ
‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ 73 ದಿನಗಳ ಬಳಿಕ ಒಟಿಟಿಗೆ ಕಾಲಿಟ್ಟಿದೆ. ಈ ಚಿತ್ರ ಫೆಬ್ರವರಿ 22ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿತ್ತು. ಮೇ 5ರಂದು ಸಿನಿಮಾ ಒಟಿಟಿಗೆ ಬಂದಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 240 ಕೋಟಿ ರೂಪಾಯಿ ಬಾಚಿಕೊಂಡಿದೆ. ಈ ವಿತ್ರ ವಿಕ್ರಾಂತ್ ಮಾಸ್ಸಿಗೆ ಇಷ್ಟ ಆಗಿದೆ.
ಥಿಯೇಟರ್ನಲ್ಲಿ ದೊಡ್ಡ ಯಶಸ್ಸು ಕಂಡ ಮಲಯಾಳಂನ ಸಿನಿಮಾ ‘ಮಂಜುಮ್ಮೇಲ್ ಬಾಯ್ಸ್’ (Manjummel Boys) ಈಗ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಬಾಕ್ಸ್ ಆಫೀಸ್ನಲ್ಲಿ 230 ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿರೋ ಈ ಚಿತ್ರ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ಮಲಯಾಳಂ ಜೊತೆ ಕನ್ನಡ ಸೇರಿ ಐದು ಭಾಷೆಗಳಲ್ಲಿ ಪ್ರಸಾರ ಕಾಣುತ್ತಿದೆ. ಈ ಸಿನಿಮಾನ ಈಗ ಸೆಲೆಬ್ರಿಟಿಗಳು ಕೂಡ ವೀಕ್ಷಿಸುತ್ತಿದ್ದಾರೆ. ‘12th ಫೇಲ್’ ಮೂಲಕ ದೊಡ್ಡ ಗೆಲುವು ಕಂಡ ವಿಕ್ರಾಂತ್ ಮಾಸ್ಸಿ ಅವರು ಈ ಚಿತ್ರವನ್ನು ಮೆಚ್ಚಿಕೊಂಡಿದ್ದಾರೆ. ‘ಇದು ಈ ವರ್ಷದ ಫೇವರಿಟ್ ಸಿನಿಮಾ’ ಎಂದು ಅವರು ಹೇಳಿದ್ದಾರೆ.
‘ಸರ್ವೈವಲ್ ಥ್ರಿಲ್ಲರ್ ಚಿತ್ರಕ್ಕಿಂತ ರೋಮಾಂಚನಕಾರಿ ಸಂಗತಿ ಯಾವುದು ಗೊತ್ತಾ? ನೈಜ ಕಥೆಯನ್ನು ಆಧರಿಸಿದ ಸರ್ವೈವಲ್ ಥ್ರಿಲ್ಲರ್ ಕಥೆ. ಎಲ್ಲರಂತೆ ನಾನು ಕೂಡ ಮಂಜುಮ್ಮೇಲ್ ಬಾಯ್ಸ್ ನೋಡಿದೆ. ಯಾವಾಗಲೂ ಬಿಟ್ಟುಕೊಡಬಾರದು ಎನ್ನುವ ಭಾವನೆಯನ್ನು ಮತ್ತೊಮ್ಮೆ ಹುಟ್ಟುಹಾಕಿತು’ ಎಂದಿದ್ದಾರೆ ಅವರು.
‘ಈ ಕಥೆ ಸ್ನೇಹದ ಬಗ್ಗೆ ಇದೆ. ಇಚ್ಛಾಶಕ್ತಿ ಹೇಗಿರಬೇಕು ಎಂಬುದಕ್ಕೆ ಉದಾಹರಣೆಯಾಗಿದೆ. ಬೆರಗುಗೊಳಿಸುವ ದೃಶ್ಯಗಳಿಂದ, ಮನಸ್ಸಿಗೆ ಮುದ ನೀಡುವ ನಟನೆಯಿಂದ ಈ ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಯಿತು. ಇದು ನೋಡಲೇಬೇಕಾದ ಸಿನಿಮಾ. ನನಗೆ ಈ ವರ್ಷದ ನನ್ನ ನೆಚ್ಚಿನ ಸಿನಿಮಾ ಇದು’ ಎಂದಿದ್ದಾರೆ ಅವರು.
ಸಾಮಾನ್ಯವಾಗಿ ಸಿನಿಮಾಗಳು ರಿಲೀಸ್ ಆಗಿ ಒಂದು ತಿಂಗಳಿಂದ ಒಂದೂವರೆ ತಿಂಗಳಿಗೆ ಒಟಿಟಿಗೆ ಬರುತ್ತದೆ. ಆದರೆ, ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ 73 ದಿನಗಳ ಬಳಿಕ ಒಟಿಟಿಗೆ ಕಾಲಿಟ್ಟಿದೆ. ಈ ಚಿತ್ರ ಫೆಬ್ರವರಿ 22ರಂದು ಥಿಯೇಟರ್ನಲ್ಲಿ ರಿಲೀಸ್ ಆಗಿತ್ತು. ಮೇ 5ರಂದು ಸಿನಿಮಾ ಒಟಿಟಿಗೆ ಬಂದಿದೆ. ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ 240 ಕೋಟಿ ರೂಪಾಯಿ ಬಾಚಿಕೊಂಡಿದೆ. ಕೆಲವು ಕಡೆಗಳಲ್ಲಿ ಈ ಸಿನಿಮಾ ಇನ್ನೂ ಪ್ರದರ್ಶನ ಕಾಣುತ್ತಿದೆ. ಮಲಯಾಳಂ ಇತಿಹಾಸದಲ್ಲೇ ಅತಿ ಹೆಚ್ಚು ಗಳಿಕೆ ಮಾಡಿದ ಸಿನಿಮಾ ಇದಾಗಿದೆ.
ವಿಕ್ರಾಂತ್ ಮಾಸ್ಸಿ ಟ್ವೀಟ್..
The film that everyone is talking about!
Watch #ManjummelBoys now streaming in Hindi. Don’t miss this one!#ManjummelBoysOnHotstar pic.twitter.com/C06R2tEulk
— Disney+ Hotstar (@DisneyPlusHS) May 5, 2024
2006ರಲ್ಲಿ ನಡೆದ ನೈಜ ಘಟನೆ ಆಧರಿಸಿ ಈ ಸಿನಿಮಾ ಸಿದ್ಧವಾಗಿದೆ. ಕೊಡೆಕೆನಲ್ನಲ್ಲಿರುವ ಗುಣ ಕೇವ್ಗೆ ಒಂದು ಹುಡುಗರ ಗ್ಯಾಂಗ್ ಟ್ರಿಪ್ ತೆರಳುತ್ತದೆ. ಈ ಗ್ಯಾಂಗ್ನಲ್ಲಿರೋ ಸುಭಾಷ್ ಎನ್ನುವ ವ್ಯಕ್ತಿ ಆಳದ ಕಂದಕಕ್ಕೆ ಬೀಳುತ್ತಾನೆ. ‘ಡೆವಿಲ್ ಕಿಚನ್ಸ್’ ಎಂದು ಕರೆಯುವ ಈ ಜಾಗದಲ್ಲಿ ಬಿದ್ದವರು ಎದ್ದು ಬಂದ ದಾಖಲೆಯೇ ಇಲ್ಲ. ಹಾಗಿದ್ದರೂ ಈತನನ್ನು ಹೊರತೆಗೆಯಲಾಗುತ್ತದೆ. ಆ ರೀತಿಯಲ್ಲಿ ಸಿನಿಮಾ ಮೂಡಿ ಬಂದಿದೆ.
ಇದನ್ನೂ ಓದಿ: ‘ಮಂಜುಮ್ಮೇಲ್ ಬಾಯ್ಸ್’ ಒಟಿಟಿ: ಯಾರೂ ಊಹಿಸದ ಡೇಟ್ ಅನೌನ್ಸ್ ಮಾಡಿದ ಡಿಸ್ನಿ
‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ 20 ಕೋಟಿ ರೂಪಾಯಿ ಬಜೆಟ್ನಲ್ಲಿ ಸಿದ್ಧವಾಗಿದೆ ಎನ್ನಲಾಗಿದೆ. ಚಿದಂಬರಂ ಅವರು ಈ ಚಿತ್ರ ನಿರ್ದೇಶನ ಮಾಡಿದ್ದಾರೆ. ಸೌಬಿನ್ ಶಾಹಿರ್ ಈ ಚಿತ್ರದಲ್ಲಿ ಮುಖ್ಯ ಪಾತ್ರದ ಜೊತೆಗೆ ಸಿನಿಮಾ ನಿರ್ಮಾಣ ಕೂಡ ಮಾಡಿದ್ದಾರೆ. ಬಾಲು ವರ್ಗೀಶ್, ಶ್ರೀನಾಥ್ ಬಾಶಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.