AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Samantha: ಏಕಾಏಕಿ ಆಸ್ಪತ್ರೆಗೆ ತೆರಳಿದ ಸಮಂತಾ; ಅಭಿಮಾನಿಗಳಲ್ಲಿ ಆತಂಕದ ಛಾಯೆ

ಸಮಂತಾ ಅವರಿಗೆ ವೈರಲ್​ ಇನ್​ಫೆಕ್ಷನ್​ ಆಗಿದ್ದು, ಇದಕ್ಕಾಗಿ ಅವರು ಆಸ್ಪತ್ರೆಗೆ ತೆರಳಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವಿಚಾರ ಕೇಳಿ ಅಭಿಮಾನಿಗಳು ತೀವ್ರವಾಗಿ ಆತಂಕಗೊಂಡಿದ್ದರು.

Samantha: ಏಕಾಏಕಿ ಆಸ್ಪತ್ರೆಗೆ ತೆರಳಿದ ಸಮಂತಾ; ಅಭಿಮಾನಿಗಳಲ್ಲಿ ಆತಂಕದ ಛಾಯೆ
ಸಮಂತಾ
TV9 Web
| Edited By: |

Updated on: Dec 13, 2021 | 8:40 PM

Share

ಸಮಂತಾ ಅವರು ಇತ್ತೀಚೆಗೆ ಸಾಕಷ್ಟು ಸುತ್ತಾಟ ನಡೆಸುತ್ತಿದ್ದಾರೆ. ಬಿಡುವಿಲ್ಲದೆ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದಕ್ಕಾಗಿ ಅವರು ನಗರದಿಂದ ನಗರಕ್ಕೆ ತಿರುಗಬೇಕಾಗಿದೆ. ಈ ಮಧ್ಯೆ ಸಮಂತಾ ಏಕಾಏಕಿ ಆಸ್ಪತ್ರೆಗೆ ಭೇಟಿ ನೀಡಿದ್ದು ಸಾಕಷ್ಟು ಆತಂಕ ಸೃಷ್ಟಿಸಿದೆ. ಭಾನುವಾರ (ಡಿಸೆಂಬರ್​ 12) ಸಮಂತಾ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ಅವರು ಆಸ್ಪತ್ರೆಗೆ ಭೇಟಿ ನೀಡಿದ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಮೂಡಿದೆ. ಇದಕ್ಕೆ ಸಮಂತಾ ತಂಡದವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ.

ಸಮಂತಾ ಅವರಿಗೆ ವೈರಲ್​ ಇನ್​ಫೆಕ್ಷನ್​ ಆಗಿದ್ದು, ಇದಕ್ಕಾಗಿ ಅವರು ಆಸ್ಪತ್ರೆಗೆ ತೆರಳಿದ್ದಾರೆ ಎನ್ನುವ ಸುದ್ದಿ ಹರಿದಾಡಿತ್ತು. ಈ ವಿಚಾರ ಕೇಳಿ ಅಭಿಮಾನಿಗಳು ತೀವ್ರವಾಗಿ ಆತಂಕಗೊಂಡಿದ್ದರು. ಇದರ ಜತೆಗೆ ಸಮಂತಾಗೆ ಕೆಮ್ಮು ಕಾಣಿಸಿಕೊಂಡಿದೆ ಎಂದೂ ಹೇಳಲಾಗಿತ್ತು. ಹೀಗಾಗಿ, ಸಮಂತಾಗೆ ಕೊವಿಡ್​ ಅಂಟಿದೆಯೇ ಎನ್ನುವ ಅನುಮಾನ ಅಭಿಮಾನಿಗಳಲ್ಲಿ ಮೂಡಿತ್ತು. ಕೊರೊನಾ ಆತಂಕ ಮತ್ತೆ ಹೆಚ್ಚಾಗಿದೆ. ರೂಪಾಂತರಿಗಳು ಪತ್ತೆ ಆಗುತ್ತಿವೆ. ಹೀಗಿರುವಾಗಲೇ ಸಮಂತಾಗೆ ಕೆಮ್ಮು ಕಾಣಿಸಿಕೊಂಡಿದ್ದು ಸಾಕಷ್ಟು ಆತಂಕ ಮೂಡಿಸಿತ್ತು.

ಈ ಬಗ್ಗೆ ಸಮಂತಾ ಕಡೆಯವರು ಸ್ಪಷ್ಟನೆ ನೀಡುವ ಕೆಲಸ ಮಾಡಿದ್ದಾರೆ. ‘ಸಮಂತಾ ಆರೋಗ್ಯವಾಗಿದ್ದಾರೆ. ನಿನ್ನೆ (ಡಿಸೆಂಬರ್ 12) ಸ್ವಲ್ಪ ಕೆಮ್ಮಿನಿಂದಾಗಿ ಎಐಜಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಗಾದರು. ನಂತರ ಅವರು ತಮ್ಮ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ. ಯಾವುದೇ ವದಂತಿಗಳು ಅಥವಾ ಸಾಮಾಜಿಕ ಜಾಲತಾಣದ ಗಾಸಿಪ್‌ಗಳನ್ನು ನಂಬಬೇಡಿ’ ಎಂದು ಸಮಂತಾ ಅವರ ಮ್ಯಾನೇಜರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಸಮಂತಾ ತಂಡದ ಈ ಸ್ಪಷ್ಟನೆ ಇದೀಗ ಫ್ಯಾನ್ಸ್​ಗಳು ನಿಟ್ಟುಸಿರು ಬಿಡುವಂತೆ ಮಾಡಿದೆ. ಅವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

ಪುಷ್ಪ’ ಸಿನಿಮಾದಲ್ಲಿ ಅವರು ಹೆಜ್ಜೆ ಹಾಕಿರುವ ‘ಊ ಅಂಟವಾ ಮಾವ.. ಊಊ ಅಂಟವಾ..’ ಹಾಡಿನ ಲಿರಿಕಲ್​ ವಿಡಿಯೋ ಸಖತ್​ ಹಿಟ್​ ಆಗಿದೆ. ಈ ಲಿರಿಕಲ್​ ಹಾಡನ್ನು ಬರೋಬ್ಬರಿ 2.1 ಕೋಟಿ ಜನರು ವೀಕ್ಷಣೆ ಮಾಡಿದ್ದಾರೆ. ರಿಲೀಸ್​ ಆಗಿ ಒಂದು ದಿನ ಕಳೆಯುವುದರೊಳಗೆ 10 ಮಿಲಿಯನ್​ (1 ಕೋಟಿಗೂ) ಅಧಿಕ ಬಾರಿ ವೀಕ್ಷಣೆ ಕಂಡಿರುವುದು ಈ ಗೀತೆಯ ಹೆಚ್ಚುಗಾರಿಕೆ. ಇದರಿಂದಾಗಿ ‘ಪುಷ್ಪ’ ಸಿನಿಮಾದ ಹವಾ ಹೆಚ್ಚಾಗಿದೆ. ಚಿತ್ರದ ಮೇಲಿದ್ದ ನಿರೀಕ್ಷೆ ದುಪ್ಪಟ್ಟಾಗಿದೆ. ಹೀಗಿರುವಾಗಲೇ ವಿಡಿಯೋ ಸಾಂಗ್​ನ ಪ್ರೋಮೋ ರಿಲೀಸ್​ ಮಾಡಲಾಗಿದೆ. ಇದರಲ್ಲಿ ಸಮಂತಾ ಬೋಲ್ಡ್​ ಆಗಿ ಹೆಜ್ಜೆ ಹಾಕಿದ್ದಾರೆ. ಹಾಡಿನಲ್ಲಿ ಕೇವಲ ಸಮಂತಾ ಫೋಟೋ ನೋಡಿದ್ದ ಅಭಿಮಾನಿಗಳು ಈಗ ಅವರ ಡ್ಯಾನ್ಸ್​ ಕಣ್ತುಂಬಿಕೊಂಡಿದ್ದಾರೆ.

ಇದನ್ನೂ ಓದಿ: ನನ್ನ ಪ್ರಕಾರ ಆ ಬಗ್ಗೆ ಮಾತನ್ನು ಮುಗಿಸಿದ್ದೇನೆ: ವಿಚ್ಛೇದನದ ಬಗ್ಗೆ ಸ್ಪಷ್ಟನೆ ನೀಡಿದ ನಟಿ ಸಮಂತಾ

ಪಡ್ಡೆ ಹುಡುಗರ ಹಾರ್ಟ್​ ಬೀಟ್​ ಹೆಚ್ಚಿಸಿದ ಸಮಂತಾ ಹೊಸ ವಿಡಿಯೋ; ಅಭಿಮಾನಿಗಳು ಫಿದಾ

Follow Us
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
'ಬ್ರಿಕ್ಸ್ ಶೃಂಗಸಭೆಗೆ ಭಾರತ ಸಿದ್ಧ'; ವಿಡಿಯೋ ಹಂಚಿಕೊಂಡ ಪ್ರಧಾನಿ ಮೋದಿ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಹೈಕಮಾಂಡ್ ಬುಲಾವ್: ದೆಹಲಿಗೆ ಹೊರಟ ಮಾಜಿ ಸಿಎಂ ಸಿದ್ದರಾಮಯ್ಯ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ಡಿಕೆಶಿ 100 ದಿನಗಳ ಸಂಭ್ರಮಕ್ಕೆ ನೊಣವಿನಕೆರೆ ಶ್ರೀಗಳ ಆಶೀರ್ವಚನ ಹೀಗಿದೆ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ರಂಗನತಿಟ್ಟು ವಿದೇಶಿ ಪ್ರಯೋಗ: ಪಕ್ಷಿಗಳ ರಕ್ಷಣೆಗೆ ಗೇಬಿಯನ್ ತಂತ್ರಜ್ಞಾನ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಬಿಗ್​​ಬಾಸ್​​ನಲ್ಲಿ ಓಪನ್ ಆಗ್ತಿದೆ ಹಳೆ ಲವ್ ಸ್ಟೋರಿಗಳು: ವಿಡಿಯೋ ನೋಡಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಮಹಾಸಂಕಲ್ಪ ಮತ್ತು ನವಸಂಕಲ್ಪ: 2037ರ ಭವ್ಯ ಕನಸು ಬಿಚ್ಚಿಟ್ಟ ಡಿಕೆಶಿ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಬೆಂಗಳೂರು ದಕ್ಷಿಣದಲ್ಲಿ ಮಾದಕ ವಸ್ತುಗಳ ವಿರುದ್ಧ ಪೊಲೀಸರ ಸಮರ
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಸಚಿವ ಸತೀಶ್ ಜಾರಕಿಹೊಳಿಗೆ ಎದುರಾಯ್ತು ಇಡಿ ಸಂಕಷ್ಟ!
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್
ಹನುಮ ಹುಟ್ಟಿದ ನಾಡು ಅಂಜನಾದ್ರಿಗೆ ಭೇಟಿ ನೀಡಿದ ಸಂಸದ ಯದುವೀರ್