AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಆತ ಗಂಡಸೇ ಅಲ್ಲ’: ತೆಲುಗು ಹೀರೋ ವಿರುದ್ಧ ಸಂಯುಕ್ತ ಗುಡುಗು

ತೆಲುಗಿನ ಜನಪ್ರಿಯ ನಟ ರಾಜ್ ತರುಣ್ ವಿರುದ್ಧ ಈಗಾಗಲೇ ಅವರ ಮಾಜಿ ಪ್ರೇಯಸಿ ಲಾವಣ್ಯ, ಅತ್ಯಾಚಾರ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಇದೀಗ ಸಂಯುಕ್ತ ಹೆಸರಿನ ಯುವತಿ ರಾಜ್ ತರುಣ್ ವಿರುದ್ಧ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.

‘ಆತ ಗಂಡಸೇ ಅಲ್ಲ’: ತೆಲುಗು ಹೀರೋ ವಿರುದ್ಧ ಸಂಯುಕ್ತ ಗುಡುಗು
ಮಂಜುನಾಥ ಸಿ.
|

Updated on: Aug 20, 2024 | 8:59 AM

Share

ತೆಲುಗು ನಟ ರಾಜ್ ತರುಣ್ ವಿರುದ್ಧ ಆತನ ಮಾಜಿ ಪ್ರೇಯಸಿ ಪುಂಖಾನುಪುಂಖವಾಗಿ ಆರೋಪಗಳನ್ನು ಮಾಡುತ್ತಿದ್ದಾರೆ. ರಾಜ್ ತರುಣ್ ನಂಬಿಸಿ ಮೋಸ ಮಾಡಿದ್ದಾನೆಂದು, ತನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆಂದು ಆರೋಪಗಳನ್ನು ಮಾಡಿದ್ದಾರೆ. ಪೊಲೀಸರೆದುರು, ಟಿವಿ ಮಾಧ್ಯಮಗಲ ಎದುರು ರಾಜ್ ತರುಣ್ ಪ್ರೇಯಸಿ ಲಾವಣ್ಯ ಹಲವು ಆರೋಪಗಳನ್ನು ಮಾಡಿದ್ದಾರೆ. ಇದೀಗ ಸಂಯುಕ್ತ ಹೆಸರಿನ ಯುವತಿ ರಾಜ್ ತರುಣ್ ಗಂಡಸೇ ಅಲ್ಲ ಎಂದಿದ್ದು, ವಿಡಿಯೋ ಒಂದನ್ನು ಹರಿಬಿಟ್ಟಿದ್ದಾರೆ.

ವಿಡಿಯೋ ಒಂದರಲ್ಲಿ ಯುವತಿಯೊಬ್ಬಾಕೆ ತನ್ನ ಮುಖ ಮುಚ್ಚುವಂತೆ ಬಟ್ಟೆ ಕಟ್ಟಿಕೊಂಡು ಮಾತನಾಡಿದ್ದು, ತನ್ನ ಹೆಸರು ಸಂಯುಕ್ತ ಎಂದೂ, ತನಗೆ ರಾಜ್ ತರುಣ್ ತನ್ನ ಗೆಳತಿಯಿಂದಾಗಿ ಪರಿಚಯ ಎಂದೂ ಹೇಳಿಕೊಂಡಿದ್ದಾರೆ. ಅಲ್ಲದೆ ರಾಜ್ ತರುಣ್​ಗೆ ಗಂಡಸೇ ಅಲ್ಲ ಎಂದು ಸಹ ಹೇಳಿದ್ದಾರೆ. ‘ರಾಜ್ ತರುಣ್ ಹಾಗೆ ಮಾಡಿದ, ಹೀಗೆ ಮಾಡಿದ ಎಂದೆಲ್ಲ ಆರೋಪಗಳು ಕೇಳಿ ಬರುತ್ತಿವೆ. ಇದನ್ನೆಲ್ಲ ಕೇಳಿದರೆ ನನಗೆ ನಗು ಬರುತ್ತದೆ. ಅಸಲಿಗೆ ಆತ ಗಂಡಸೇ ಅಲ್ಲ’ ಎಂದಿದ್ದಾರೆ.

‘ನನ್ನ ಗೆಳತಿಯೊಂದಿಗೆ ರಾಜ್ ತರುಣ್​ಗೆ ಸಂಬಂಧವಿತ್ತು. ಇಬ್ಬರೂ ಸಹ ಒಂದೇ ಮನೆಯಲ್ಲಿ ವಾಸವಿದ್ದರು. ಇಬ್ಬರೂ ಒಟ್ಟಿಗೆ ಹಗಲು-ರಾತ್ರಿ ಕಳೆಯುತ್ತಿದ್ದರು. ಆದರೆ ಒಮ್ಮೆ ಸಹ ರಾಜ್ ತರುಣ್ ನನ್ನ ಗೆಳತಿಯನ್ನು ಮುಟ್ಟಲಿಲ್ಲವಂತೆ. ನನ್ನ ಗೆಳತಿ ಪ್ರತಿದಿನ ನನಗೆ ಕರೆ ಮಾಡಿ ಈ ಬಗ್ಗೆ ಹೇಳಿಕೊಂಡು ಅಳುತ್ತಿದ್ದಳು’ ಎಂದಿದ್ದಾರೆ. ರಾಜ್ ತರುಣ್​ ಅದ್ದು ಎನ್ನಲಾದ ಆಡಿಯೋ ವೈರಲ್ ಆಗಿರುವ ಬಗ್ಗೆಯೂ ಮಾತನಾಡಿ, ಆ ಆಡಿಯೋನಲ್ಲಿಯೇ ನಾನು ಹೇಳಿದ್ದಕ್ಕೆ ಸಾಕ್ಷಿ ಇದೆ’ ಎಂದಿದ್ದಾರೆ ಸಂಯುಕ್ತ.

ಇದನ್ನೂ ಓದಿ:ಆ ನಟಿಯನ್ನು ಗರ್ಭಿಣಿ ಮಾಡಿದ್ದ ನಟ ರಾಜ್ ತರುಣ್: ಮಾಜಿ ಗೆಳತಿ ಆರೋಪ

‘27ರ ವಯಸ್ಸಿನಲ್ಲಿಯೇ ಮದುವೆ ಆಗುತ್ತೀನಿ ಎಂದು ಹೇಳಿದ್ದ ರಾಜ್ ತರುಣ್, ಈಗ ಆತನಿಗೆ 34 ವರ್ಷ ವಯಸ್ಸು. ಇನ್ನೂ ಮದುವೆ ಆಗಿಲ್ಲ. ಇನ್ನು ಮುಂದೆಯೂ ಆತ ಮದುವೆ ಆಗಲ್ಲ, ಏಕೆಂದರೆ ಮದುವೆ ಆಗಲು ಆತ ಯೋಗ್ಯನಲ್ಲ. ಸಿನಿಮಾಗಳಲ್ಲಿ ದೊಡ್ಡ ಹೀರೋ ರೀತಿ ಕಾಣಿಸಿಕೊಳ್ಳುತ್ತಾನೆ. ಆದರೆ ಆತ ನಿಜವಾಗಿಯೂ ಹೀರೋ ಅಲ್ಲ. ಆತನ ಬಗ್ಗೆ ಇನ್ನೂ ಹಲವು ವಿಷಯಗಳು ನನಗೆ ಗೊತ್ತಿವೆ. ಕೆಲವೇ ದಿನಗಳಲ್ಲಿ ಸಾಕ್ಷ್ಯಗಳೊಂದಿಗೆ ಆತನ ಬಗ್ಗೆ ಹಲವು ವಿಷಯಗಳನ್ನು ಬಹಿರಂಗಪಡಿಸಲಿದ್ದೇನೆ’ ಎಂದಿದ್ದಾರೆ ಆ ಯುವತಿ.

ವಿಡಿಯೋನಲ್ಲಿರುವ ಯುವತಿ ಯಾರು, ಆಕೆ ಸಿನಿಮಾ ರಂಗಕ್ಕೆ ಸಂಬಂಧಿಸಿದವರೇ ಅಲ್ಲವೆ ಎಂಬ ಬಗ್ಗೆ ಮಾಹಿತಿ ಇಲ್ಲ. ವಿಡಿಯೋನಲ್ಲಿ ಮಾತನಾಡಿರುವ ಯುವತಿ ಮುಖಕ್ಕೆ ಬಟ್ಟೆ ಕಂಡಿಕೊಂಡು ಮಾತನಾಡಿದ್ದಾರೆ. ತನ್ನ ಹೆಸರು ಸಂಯುಕ್ತ ಎಂದು ಹೇಳಿಕೊಂಡಿರುವುದರ ಹೊರತಾಗಿ ಇನ್ಯಾವುದೇ ವಿಷಯವನ್ನು ಬಿಟ್ಟುಕೊಟ್ಟಿಲ್ಲ. ಈಗಾಗಲೇ ರಾಜ್ ತರುಣ್ ವಿರುದ್ಧ ಆತನ ಮಾಜಿ ಪ್ರೇಯಸಿ ಲಾವಣ್ಯ ಹಲವು ಆರೋಪಗಳನ್ನು ಮಾಡಿದ್ದಾರೆ. ಅತ್ಯಾಚಾರ ಹಾಗೂ ಬೆದರಿಕೆ ದೂರನ್ನು ಸಹ ರಾಜ್ ತರುಣ್ ವಿರುದ್ಧ ಲಾವಣ್ಯ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ