2019ರಲ್ಲಿ ಸಿನಿಮಾಗಳು ಎಷ್ಟು ಸದ್ದು ಮಾಡಿದ್ವೋ. ವಿವಾದಗಳು ಕೂಡ ಅಷ್ಟೇ ಗದ್ದಲ ಎಬ್ಬಿಸಿದ್ವು. ತೆಲುಗು, ತಮಿಳು, ಹಿಂದಿ ಅಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲೂ ಕಾಂಟ್ರವರ್ಸಿಗಳದ್ದೇ ಕಾರುಬಾರು ಜೋರಾಗಿತ್ತು. ಹಿಂದಿ ಚಿತ್ರರಂಗದಲ್ಲಿ ಯಾಱರು ಯಾವ್ಯಾವ ಕಾರಣಕ್ಕೆ ಕಿತ್ತಾಡ್ಕೊಂಡ್ರು..? ಬಾಲಿವುಡ್ನಲ್ಲಾದ ಐದು ಪ್ರಮುಖ ವಿವಾದಗಳು ಇಲ್ಲಿವೆ. ಕಂಗನಾ ಪ್ರೀತಿಯ ಪೀಡೆ.. ಹೃತಿಕ್ ಹೇಳಿದ್ದೇನು? ಕಳೆದ ಮೂರು-ನಾಲ್ಕು ವರ್ಷಗಳಿಂದ ಬಾಲಿವುಡ್ ಅನ್ನ ಮುಜುಗರಕ್ಕೆ ಒಳಪಡಿಸಿದ ಸಂಗತಿ ಇದು. ಬಾಲಿವುಡ್ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಹಾಗೂ ಬೋಲ್ಡ್ ಗರ್ಲ್ ಕಂಗನಾ ರಣಾವತ್ […]
Follow us on
2019ರಲ್ಲಿ ಸಿನಿಮಾಗಳು ಎಷ್ಟು ಸದ್ದು ಮಾಡಿದ್ವೋ. ವಿವಾದಗಳು ಕೂಡ ಅಷ್ಟೇ ಗದ್ದಲ ಎಬ್ಬಿಸಿದ್ವು. ತೆಲುಗು, ತಮಿಳು, ಹಿಂದಿ ಅಷ್ಟೇ ಅಲ್ಲ ಕನ್ನಡ ಚಿತ್ರರಂಗದಲ್ಲೂ ಕಾಂಟ್ರವರ್ಸಿಗಳದ್ದೇ ಕಾರುಬಾರು ಜೋರಾಗಿತ್ತು. ಹಿಂದಿ ಚಿತ್ರರಂಗದಲ್ಲಿ ಯಾಱರು ಯಾವ್ಯಾವ ಕಾರಣಕ್ಕೆ ಕಿತ್ತಾಡ್ಕೊಂಡ್ರು..? ಬಾಲಿವುಡ್ನಲ್ಲಾದ ಐದು ಪ್ರಮುಖ ವಿವಾದಗಳು ಇಲ್ಲಿವೆ.
ಕಂಗನಾ ಪ್ರೀತಿಯ ಪೀಡೆ.. ಹೃತಿಕ್ ಹೇಳಿದ್ದೇನು? ಕಳೆದ ಮೂರು-ನಾಲ್ಕು ವರ್ಷಗಳಿಂದ ಬಾಲಿವುಡ್ ಅನ್ನ ಮುಜುಗರಕ್ಕೆ ಒಳಪಡಿಸಿದ ಸಂಗತಿ ಇದು. ಬಾಲಿವುಡ್ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಹಾಗೂ ಬೋಲ್ಡ್ ಗರ್ಲ್ ಕಂಗನಾ ರಣಾವತ್ ನಡುವಿನ ಲವ್ವಿ-ಡವ್ವಿ ಬೀದಿಗೆ ಬಂದಿತ್ತು. ಇಲ್ಲಿಂದ ಶುರುವಾದ ಹೃತಿಕ್ ಹಾಗೂ ಕಂಗನಾ ನಡುವಿನ ಕಿತ್ತಾಟ ಇನ್ನೂ ನಿಂತಿಲ್ಲ. ಆಗಾಗ ಇಬ್ಬರ ನಡುವಿನ ವಿವಾದ ಜ್ವಾಲಾಮುಖಿಯಂತೆ ಸಿಡಿಯುತ್ತಲೇ ಇದೆ. ಈ ವರ್ಷ ಕೃತಿಕ್ ನಟಿಸಿದ ಸೂಪರ್ 30 ಹಾಗೂ ಕಂಗನಾ ನಟನೆಯ ಜಡ್ಜ್ಮೆಂಟಲ್ ಹೇ ಕ್ಯಾ ಎರಡೂ ಸಿನಿಮಾಗಳು ಮುಖಾಮುಖಿಯಾಗಿತ್ತು. ಆಗ ಮತ್ತೆ ಹೃತಿಕ್ ಹಾಗೂ ಕಂಗನಾ ನಡುವೆ ಭಿನ್ನಾಭಿಪ್ರಾಯಗಳು ಎದ್ದಿತ್ತು.
ಹೃತಿಕ್ ನಟನೆಯ ಸೂಪರ್ 30 ಹಾಗೂ ಕಂಗನಾ ಜಡ್ಜ್ಮೆಂಟಲ್ ಹೇ ಕ್ಯಾ ಸಿನಿಮಾಗಳು ಒಟ್ಟಿಗೆ ಬಿಡುಗಡೆ ಸಿದ್ದವಾಗಿದ್ದಾಗ ಕಂಗನಾ ಸಹೋದರಿ ರಂಗೋಲಿ ಅಖಾಡಕ್ಕಿಳಿದ್ರು. ಹೃತಿಕ್ ಸೇಡು ತೀರಿಸಿಕೊಳ್ಳಲೆಂದೇ ಸೂಪರ್ 30 ಸಿನಿಮಾ ಬಿಡಗಡೆ ಮಾಡುತ್ತಿದ್ದಾರೆ ಅಂತ ಆರೋಪಿಸಿದ್ರು. ಆಗ ಹೃತಿಕ್ ಸಂದರ್ಶನವೊಂದ್ರಲ್ಲಿ ಕಂಗನಾ ಒಬ್ಬ ಪೀಡಕವಿದ್ದಂತೆ. ಇಂತಹವ್ರೊಂದಿಗೆ ಹೇಗಿರಬೇಕೆಂದು ನನಗೆ ಗೊತ್ತಿದೆ ಎಂದು ಹೇಳಿಕೆ ನೀಡಿದ್ದರು. ಕೊನೆಗೆ ಇಬ್ಬರೂ ತಮ್ಮ ಸಿನಿಮಾಗಳ ಬಿಡುಗಡೆಯನ್ನ ಮುಂದೂಡಿದ್ರು.
ಕರಣ್ ಮನೆಯಲ್ಲಿ ಬಾಲಿವುಡ್ ತಾರೆಯರ ಡ್ರಗ್ಸ್ ಪಾರ್ಟಿ: ಬಾಲಿವುಡ್ ನಿರ್ಮಾಪಕ ಕರಣ್ ಜೋಹಾರ್ ಕೆಲ ತಿಂಗಳ ಹಿಂದೆ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಾಲಿವುಡ್ ತಾರೆಯರು ಭಾಗವಹಿಸಿದ್ದರು. ದೀಪಿಕಾ ಪಡುಕೋಣೆ, ರಣ್ಬೀರ್ ಕಪೂರ್, ವರುಣ್ ಧವನ್, ಮಲೈಕಾ ಅರೋರಾ, ಅರ್ಜುನ್ ಕಪೂರ್, ಶಾಹಿದ್ ಕಪೂರ್ ಸೇರಿದಂತೆ ಕೆಲ ಗಣ್ಯರು ಭಾಗವಹಿಸಿದ್ದರು. ಆ ವೀಡಿಯೋವನ್ನ ಕರಣ್ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ರು. ಆ ವಿಡಿಯೋ ವಿವಾದಕ್ಕೆ ಸಿಲುಕಿತ್ತು. ಶಿರೋಮಣಿ ಅಕಾಲಿದಳದ ಶಾಸಕ ಮಜಿಂದರ್ ಸಿರ್ಸಾ ಇದನ್ನ ಡ್ರಗ್ಸ್ ಪಾರ್ಟಿ ಅಂತ ಆರೋಪಿಸಿದ್ರು. ಇದು ಮತ್ತಷ್ಟು ವಿವಾದಕ್ಕೆ ಎಡೆ ಮಾಡಿಕೊಟ್ಟಿತ್ತು.
ಇದೇ ವಿಡಿಯೋವನ್ನ ಮಜಿಂದರ್ ಸಿರ್ಸಾ ಕೂಡ ಶೇರ್ ಕೂಡ ಮಾಡಿದ್ರು. ಇದು ಕಲ್ಪನೆಯೋ. ಇಲ್ಲ ವಾಸ್ತವಿಕವೋ.. ನೋಡಿ ಬಾಲಿವುಡ್ ಸೆಲೆಬ್ರಿಟಿಗಳು ಹೇಗೆ ನಶೆಯಲ್ಲಿ ತೇಲಾಡ್ತಿದ್ದಾರೆ ಅಂತ ಕಿಡಿಕಾರಿದ್ದರು. ಇದು ಒಂದಿಷ್ಟು ದಿನ ಬಾಲಿವುಡ್ನಲ್ಲಿ ಭಾರೀ ಚರ್ಚೆಯಾಗಿತ್ತು. ವಿವಾದ ತಾರಕ್ಕೇರುತ್ತಿದ್ದಂತೆ ಕರಣ್ ಜೋಹಾರ್ ಡಗ್ಸ್ ಪಾರ್ಟಿ ಆರೋಪವನ್ನ ತಳ್ಳಿಹಾಕಿದ್ರು. ಸುಖಾಸುಮ್ಮನೆ ನಮ್ಮ ಟಾರ್ಗೆಟ್ ಮಾಡಲು ಅಧಿಕಾರ ಕೊಟ್ಟಿದ್ಯಾರು ಅಂತ ಗುಡುಗಿದ್ರು.
ಪೌರತ್ವ ವಿಚಾರದಲ್ಲಿ ಬಾಲಿವುಡ್ ಮೌನವಹಿಸಿತಾ? ಕೇಂದ್ರ ಸರ್ಕಾರ ಪೌರತ್ವ ಕಾಯ್ದೆ ಹಾಗೂ ರಾಷ್ಟ್ರೀಯ ಜನಸಂಖ್ಯೆ ನೊಂದಣಿಯನ್ನ ಜಾರಿಗೆ ತಂದಿತ್ತು. ಇದು ದೇಶದೆಲ್ಲೆಡೆ ದೊಡ್ಡ ಮಟ್ಟದ ಚರ್ಚೆಗೆ ಎಡೆ ಮಾಡಿಕೊಟ್ಟಿತ್ತು. ಪೌರತ್ವ ಕಾಯ್ದೆಯ ಅಡಿ ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಉಗ್ರ ಹೋರಾಟಕ್ಕೆ ಮುಂದಾಗಿದ್ರು. ಹೀಗಿದ್ರೂ ಬಾಲಿವುಡ್ ಸೂಪರ್ಸ್ಟಾರ್ ಪ್ರತಿಕ್ರಿಯೆ ನೀಡಿರಲಿಲ್ಲ. ಪ್ರತಿಭಟನೆ ಶುರುವಾದ ನಾಲ್ಕೈದು ದಿನಗಳ ಬಳಿಕ ಬಾಲಿವುಡ್ ಪ್ರತಿಕ್ರಿಯೆ ನೀಡಿತ್ತು. ಸೈಫ್ ಅಲಿಖಾನ್ ದೇಶದೆಲ್ಲೆಡೆ ನಡೆಯುತ್ತಿದ್ದ ಪ್ರತಿಭಟನೆಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ರು. ದೇಶ ಪ್ರಸ್ತುತ ರಾಜಕೀಯ ಬೆಳವಣಿಗೆ ಹೇಗೆ ಅಂತ್ಯಗೊಳ್ಳುತ್ತವೆ ಎಂದು ಎದುರು ನೋಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದ್ರು. ಬಳಿಕ ಫರ್ಹಾನ್ ಅಖ್ತರ್, ಪರಿಣಿತಿ ಛೋಪ್ರಾ, ಹೃತಿಕ್ ರೋಷನ್, ಶಬಾನಾ ಆಜ್ಮಿ ಸೇರಿದಂತೆ ಬಾಲಿವುಡ್ ಗಣ್ಯರು ಕಳವಳ ವ್ಯಕ್ತಪಡಿಸಿದ್ರು.
ಪ್ರಿಯಾಂಕಾ ಧಮ್ ಮಾರೋ ಧಮ್: ಪ್ರಿಯಾಂಕಾ ಚೋಪ್ರಾ 2019ರ ಜುಲೈ 18ರಂದು 37ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ರು. ಪತಿ ನಿಕ್ ಜೋನಾಸ್ ಹಾಗೂ ತಾಯಿ ಮಧು ಚೋಪ್ರಾ ಜೊತೆ ಮಿಯಾಮಿಯಲ್ಲಿ ಬರ್ತ್ಡೇ ಎಂಜಾಯ್ ಮಾಡಿದ್ರು. ಈ ವೇಳೆ ಸಿಗರೇಟ್ ಸೇದಿದ ಫೋಟೋ ಬೇಜಾನ್ ಸದ್ದು ಮಾಡಿತ್ತು. ಈ ಫೋಟೋ ಹೊರಬೀಳುತ್ತಿದ್ದಂತೆ ಪ್ರಿಯಾಂಕಾ ಆಸ್ತಮಾದ ಬಗ್ಗೆ ಬೇಜಾನ್ ಚರ್ಚೆ ಆಯ್ತು.
ದೀಪಾವಳಿ ಹಬ್ಬದ ವೇಳೆ ಪಟಾಕಿ ಸಿಡಿಸೋದನ್ನ ಪ್ರಿಯಾಂಕಾ ಖಂಡಿಸಿದ್ರು. ಅಲ್ಲದೆ ಅಸ್ತಮಾದಿಂದ ಬಳಲುತ್ತಿರುವ ನನ್ನಂತವ್ರಿಗೆ ಇದು ಮಾರಕ ಅಂತ ಹೇಳಿದ್ರು. ಪ್ರಿಯಾಂಕಾ ಸಿಗರೇಟ್ ಸೇದುವ ಪೋಟೋ ಸಿಗುತ್ತಿದ್ದಂತೆ ಅಸ್ತಮಾ ಕೇವಲ ದೀಪಾವಳಿಯಂದು ಮಾತ್ರ ಬರುತ್ತಾ ಅಂತ ಕಾಲೆಳೆದಿದ್ರು.
ಬಾಲಿವುಡ್ ಕಬೀರ್ ಸಿಂಗ್ ವಿವಾದ: ತೆಲುಗಿನ ಅರ್ಜುನ್ ರೆಡ್ಡಿಯ ಬಾಲಿವುಡ್ ರಿಮೇಕ್ ಕಬೀರ್ ಸಿಂಗ್. ಈ ಸಿನಿಮಾ ಬಾಕ್ಸಾಫೀಸ್ನಲ್ಲಿ ಬೇಜಾನ್ ಸದ್ದು ಮಾಡಿತ್ತು. ಆದ್ರೆ ಕಬೀರ್ ಸಿಂಗ್ ಬಿಡುಗಡೆಯಾಗುತ್ತಿದ್ದಂತೆ ವಿವಾದಗಳ ಸುಳಿಗೆ ಸಿಲುಕಿತ್ತು. ಈ ಸಿನಿಮಾದಲ್ಲಿ ನಟ ಶಾಹೀದ್ ಕಪೂರ್ ಸರ್ಜನ್ ಪಾತ್ರ ನಿಭಾಯಿಸಿದ್ದಾರೆ. ಯಾವಾಗಲೂ ಕುಡಿದ ಮತ್ತಿನಲ್ಲೇ ಇರುವ ವೈದ್ಯನ ಪಾತ್ರ ಇದಾಗಿದ್ದು, ಡ್ರಗ್ಸ್ ಚಟಕ್ಕೂ ಬಲಿಯಾಗುತ್ತಾರೆ. ಇದು ವೈದ್ಯರ ಬಗ್ಗೆ ಅಗೌರವ ತೋರುವಂತಿದೆ. ವೈದ್ಯ ವೃತ್ತಿ ಬಗ್ಗೆ ಅವಹೇಳನ ಮಾಡುವಂತಿದೆ. ಕಬೀರ್ ಸಿಂಗ್ ಚಿತ್ರದಲ್ಲಿ ವೈದ್ಯ ವೃತ್ತಿಯನ್ನು ಅವಮಾನಿಸುವ ರೀತಿ ತೋರಿಸಲಾಗಿದೆ ಎಂದು ಮುಂಬೈ ಮೂಲದ ವೈದ್ಯರೊಬ್ಬರು ಆರೋಪಿಸಿದ್ರು.
ಇದಿಷ್ಟೇ ಅಲ್ಲ, ತಾನು ಪ್ರೀತಿಸಿದ ಹುಡುಗಿ ಸಿಗದಿದ್ದಾಗ ದೇವಸಾನಂತಾಗುವುದು ಕೂಡ ಒಂದು ಸಿಂಪಥಿ ಎಂಬುದು ಹಲವು ಮಹಿಳೆಯರ ವಾದ. ಅಲ್ಲದೆ ಇಡೀ ಚಿತ್ರದಲ್ಲಿ ಹೇರಳವಾದ ಮುತ್ತಿನ ದೃಶ್ಯಗಳಿವೆ. ನಾಯಕ ಅವಾಚ್ಯ ಶಬ್ದಗಳಿಂದ ನಿಂದಿಸುವ ಸಾಕಷ್ಟು ಸನ್ನಿವೇಶಗಳಿವೆ. ತನ್ನ ಪ್ರೇಯಸಿಗೆ ನೋವು ಮಾಡಿದವನ ತಾಯಿ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಾನೆ. ತನ್ನ ಅಮ್ಮ, ಅಕ್ಕ, ತಂಗಿ, ಪ್ರೇಯಸಿಯನ್ನ ಅವಮಾನಿಸಿದ್ರೆ ಕೋಪ ಬರುತ್ತೆ ಅಂತಾ ಹೇಳುವ ಕಬೀರ್ ಸಿಂಗ್ ನಂತರ ಬೈಯುವುದು ಕೂಡ ಒಂದು ತಾಯಿಯನ್ನೇ ಅಂತ ಮಹಿಳೆಯರು ಕಿಡಿಕಾರಿದ್ದರು.
ಇಷ್ಟೆಲ್ಲಾ ವಿವಾದ ಸೃಷ್ಟಿಸಿದ ಕಭೀರ್ ಸಿಂಗ್ ಸಿನಿಮಾದ ಪ್ರದರ್ಶನವನ್ನ ರದ್ದು ಮಾಡ್ಬೇಕು ಅನ್ನೋ ಕೂಗು ಕೇಳಿಬಂದಿತ್ತು. ವಿಚಿತ್ರ ಅಂದ್ರೆ ಇಷ್ಟೆಲ್ಲ ವಿವಾದಕ್ಕೆ ಸಿಲುಕಿದ ಸಿನಿಮಾವೇ ಈ ವರ್ಷದ ದೊಡ್ಡ ಹಿಟ್ ಚಿತ್ರಗಳ ಪಟ್ಟಿಯಲ್ಲಿದೆ.