‘ಸ್ಪಿರಿಟ್’ ಚಿತ್ರಕ್ಕಾಗಿ ಶರ್ಟ್ಲೆಸ್ ಆದ ಪ್ರಭಾಸ್; ಸಖತ್ ರಾ ಆಗಿದೆ ಪೋಸ್ಟರ್
ಪ್ರಭಾಸ್ 'ರಾಜಾ ಸಾಬ್' ಹಾರರ್ ಕಾಮಿಡಿ ಚಿತ್ರಕ್ಕೆ ಸಿದ್ಧವಾಗಿದ್ದು, ಮಾರುತಿ ನಿರ್ದೇಶನದ ಈ ಚಿತ್ರ ಸಂಕ್ರಾಂತಿಗೆ ತೆರೆಗೆ ಬರಲಿದೆ. ಇದೇ ವೇಳೆ, ಸಂದೀಪ್ ರೆಡ್ಡಿ ವಂಗ ನಿರ್ದೇಶನದ 'ಸ್ಪಿರೀಟ್' ಚಿತ್ರದ ಹೊಸ ಪೋಸ್ಟರ್ ವೈರಲ್ ಆಗಿದೆ. ಈ ಪೋಸ್ಟರ್‌ನಲ್ಲಿ ಪ್ರಭಾಸ್‌ನ ಪೊಲೀಸ್ ಲುಕ್, ತೃಪ್ತಿ ಡಿಮ್ರಿ ಜೊತೆಗಿನ ಕಾಂಬಿನೇಷನ್ ಗಮನ ಸೆಳೆದಿದೆ.

ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಾಯಕನಾಗಿ ನಟಿಸಿರುವ ‘ರಾಜಾ ಸಾಬ್’ ಟ್ರೇಲರ್ ಮೂಲಕ ಗಮನ ಸೆಳೆದಿದೆ. ಮಾರುತಿ ನಿರ್ದೇಶನದ ಈ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ಚಿತ್ರ ಹಾರರ್ ಕಾಮಿಡಿ ಹಿನ್ನೆಲೆಯಲ್ಲಿ ಸಿದ್ಧವಾಗಿದೆ. ಈ ಚಿತ್ರ ಸಂಕ್ರಾತಿ ಸಂದರ್ಭದಲ್ಲಿ ತೆರೆಗೆ ಬರುತ್ತಿದೆ. ಈ ವೇಳೆ ಪ್ರಭಾಸ್ ನಟನೆಯ ಮುಂದಿನ ಸಿನಿಮಾ ‘ಸ್ಪಿರಿಟ್’ (Spirit Movie) ಲುಕ್ ವೈರಲ್ ಆಗಿದೆ. ಈ ಪೋಸ್ಟರ್ ಸಂಚಲನ ಸೃಷ್ಟಿಸಿದೆ.
ರಾ ಸಿನಿಮಾಗಳನ್ನು ಮಾಡೋ ಕಲೆ ಸಂದೀಪ್ ರೆಡ್ಡಿ ವಂಗಗೆ ಒಲಿದಿದೆ. ‘ಅರ್ಜುನ್ ರೆಡ್ಡಿ’, ‘ಅನಿಮಲ್’ ಸಿನಿಮಾಗಳಲ್ಲಿ ಇದೇ ಹೈಲೈಟ್ ಆಗಿತ್ತು. ಅವರು ಪ್ರಭಾಸ್ ಜೊತೆ ಸಿನಿಮಾ ಮಾಡುತ್ತಿದ್ದಾರೆ ಎಂದಾಗ ಸಹಜವಾಗಿಯೇ ಕುತೂಹಲ ಹೆಚ್ಚಿತ್ತು. ಈ ಚಿತ್ರದಲ್ಲಿ ಪ್ರಭಾಸ್ ಅವರದ್ದು ಪೊಲೀಸ್ ಪಾತ್ರ. ಹೊಸ ವರ್ಷದ ಪ್ರಯುಕ್ತ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ.
ಈ ಪೋಸ್ಟರ್‌ನಲ್ಲಿ ಪ್ರಭಾಸ್ ಶರ್ಟ್ಲೆಸ್ ಆಗಿ ಕಾಣಿಸಿದ್ದಾರೆ. ಅವರ ಬೆನ್ನು, ಕೈ ಹಾಗೂ ಭುಜಕ್ಕೆ ಬ್ಯಾಂಡೇಜ್ ಹಾಕಲಾಗಿದೆ. ಪ್ರಭಾಸ್ ಬಾಯಲ್ಲಿರೋ ಸಿಗರೇಟ್ಗೆ ನಟಿ ತೃಪ್ತಿ ದಿಮ್ರಿ ಬೆಂಕಿ ಅಂಟಿಸುತ್ತಿದ್ದಾರೆ. ಪ್ರಭಾಸ್ ಉದ್ದನೆಯ ಕೂದಲು ಗಮನ ಸೆಳೆಯುತ್ತಿದೆ. ಈ ಸಿನಿಮಾ ತೆಲುಗು ಜೊತೆಗೆ ಕನ್ನಡ, ತಮಿಳು, ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ರಿಲೀಸ್ ಆಗುತ್ತಿದೆ. ನಿರ್ದೇಶಕ ಸಂದೀಪ್ ರೆಡ್ಡಿ ವಂಗ ನಿರ್ದೇಶನ ಮಾಡಿದ್ದು ಕೆಲವೇ ಸಿನಿಮಾ ಆದರೂ ಸ್ಟಾರ್ ನಿರ್ದೇಶಕ ಎನಿಸಿಕೊಂಡಿದ್ದಾರೆ. ಅವರು ಈ ಚಿತ್ರದ ಮೂಲಕ ಮತ್ತಷ್ಟು ಜನಪ್ರಿಯತೆ ಪಡೆಯುವ ಭರವಸೆಯಲ್ಲಿದ್ದಾರೆ.
You loved what existed before. Now fall in love with what you never knew existed….#SPIRIT FIRST POSTER 🔥#OneBadHabit #Prabhas@imvangasandeep @tripti_dimri23 pic.twitter.com/J1Svt3E8uY
— Spirit (@InSpiritMode) December 31, 2025
ರಣಬೀರ್ ಕಪೂರ್ ಜೊತೆಗಿನ ‘ಅನಿಮಲ್’ ಚಿತ್ರಕ್ಕೆ ತೃಪ್ತಿ ಕೂಡ ನಾಯಕಿ ಆಗಿದ್ದರು. ಅವರು ಆ ಸಿನಿಮಾದಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಈಗ ಅವರು ‘ಸ್ಪಿರಿಟ್’ ಚಿತ್ರಕ್ಕಾಗಿ ಸಂದೀಪ್ ಜೊತೆ ಮತ್ತೊಮ್ಮೆ ಕೈ ಜೋಡಿಸಿದ್ದಾರೆ. ಈ ಪೋಸ್ಟರ್ ಈಗ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದೆ.
ಇದನ್ನೂ ಓದಿ: ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾದಲ್ಲಿ ರಣಬೀರ್ ಕಪೂರ್ ಅತಿಥಿ ಪಾತ್ರ?
ಸಂದೀಪ್ ಅವರು ಸಿನಿಮಾ ಮೇಕಿಂಗ್ನಲ್ಲಿ ತರಾತುರಿ ಮಾಡೋದಿಲ್ಲ. ಅವರು ನಿಧಾನಕ್ಕೆ ಸಿನಿಮಾ ಕೆಲಸ ಮಾಡುತ್ತಾರೆ. ಈಗ ‘ಸ್ಪಿರಿಟ್’ ಚಿತ್ರಕ್ಕೆ ಅವರು ಹೆಚ್ಚು ಸಮಯ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




