ಸಲ್ಮಾನ್-ಸುದೀಪ್ ಜೋಡಿಯ ದಬಾಂಗ್ 3 ಕಲೆಕ್ಷನ್ ಎಷ್ಟು ಗೊತ್ತಾ?
ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಹಾಗು ಸ್ಯಾಂಡಲ್ವುಡ್ ಪೈಲ್ವಾನ್ ಪೈಟ್ ದಬಾಂಗ್ -3 ಸಿನಿಮಾದಲ್ಲಿ ಹೇಗಿರುತ್ತೆ ಅಂತ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡ್ ಕಾದು ಕುಳಿತಿದ್ದವರಿಗೆ ದಬಾಂಗ್-3 ದರ್ಶನವಾಗಿದೆ. ಈಗಾಗಲೇ ದೇಶಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲೂ ಜೋರಾಗಿದೆ. ದಬಾಂಗ್-3 ಸಿನಿಮಾ ರಿಲೀಸ್ ಆಗಿ 11 ದಿನಕ್ಕೆ ಬರೊಬ್ಬರಿ 140 ಕೋಟಿ ರೂ. ಬಾಚಿಕೊಂಡಿದೆ. ಕರ್ನಾಟಕದಲ್ಲಿ ದಬಾಂಗ್-3 ದರ್ಬಾರ್! ಹೌದು ಸದ್ಯ ಎಲ್ಲಿ ನೋಡಿದ್ರಲ್ಲಿ ದಬಾಂಗ್ ದಬಾಂಗ್ ಅಂತ ಕೂಗೋ ಸೌಂಡು ಸಿನಿಮಾಸಕ್ತರ ಕಿವಿಗೆ ಅಪ್ಪಳಿಸಿದೆ. ಅಂದ […]
ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಹಾಗು ಸ್ಯಾಂಡಲ್ವುಡ್ ಪೈಲ್ವಾನ್ ಪೈಟ್ ದಬಾಂಗ್ -3 ಸಿನಿಮಾದಲ್ಲಿ ಹೇಗಿರುತ್ತೆ ಅಂತ ಕಣ್ಣಲ್ಲಿ ಎಣ್ಣೆ ಬಿಟ್ಕೊಂಡ್ ಕಾದು ಕುಳಿತಿದ್ದವರಿಗೆ ದಬಾಂಗ್-3 ದರ್ಶನವಾಗಿದೆ. ಈಗಾಗಲೇ ದೇಶಾದ್ಯಂತ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕಲೆಕ್ಷನ್ನಲ್ಲೂ ಜೋರಾಗಿದೆ. ದಬಾಂಗ್-3 ಸಿನಿಮಾ ರಿಲೀಸ್ ಆಗಿ 11 ದಿನಕ್ಕೆ ಬರೊಬ್ಬರಿ 140 ಕೋಟಿ ರೂ. ಬಾಚಿಕೊಂಡಿದೆ.
ಕರ್ನಾಟಕದಲ್ಲಿ ದಬಾಂಗ್-3 ದರ್ಬಾರ್! ಹೌದು ಸದ್ಯ ಎಲ್ಲಿ ನೋಡಿದ್ರಲ್ಲಿ ದಬಾಂಗ್ ದಬಾಂಗ್ ಅಂತ ಕೂಗೋ ಸೌಂಡು ಸಿನಿಮಾಸಕ್ತರ ಕಿವಿಗೆ ಅಪ್ಪಳಿಸಿದೆ. ಅಂದ ಹಾಗೆ ಮೊದಲ ಬಾರಿಗೆ ಬಾಲಿವುಡ್ನ ಬಹು ನಿರೀಕ್ಷಿತ ಸಿನಿಮಾ ದಬಾಂಗ್-3 ನಲ್ಲಿ ಸ್ಯಾಂಡಲ್ವುಡ್ ನ ಪೈಲ್ವಾನ್ ಪೈಟ್ ಮಾಡಿರೋದು ಸಿನಿಮಾದ ಬಗ್ಗೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟು ಹಾಕಿತ್ತು. ಮೊದಲ ಬಾರಿಗೆ ಡಬ್ಬಿಂಗ್ ಸಿನಿಮಾವೊಂದು ಕರ್ನಾಟಕದಲ್ಲಿ ಹೆಚ್ಚಿನ ಮಟ್ಟಿಗೆ ಸೌಂಡ್ ಮಾಡಿದೆ. ಪ್ರಭುದೇವ್ ಆಕ್ಷನ್ ಕಟ್ ಹೇಳಿರೋ ಸಿನಿಮಾದಲ್ಲಿ ಸೋನಾಕ್ಷಿ ಹಾಗು ಸಾಯಿ ಮಾಂಜ್ರೇಕರ್ ಕೂಡ ಸಕತ್ತಾಗಿಯೇ ಅಭಿನಯಿಸಿದ್ದಾರೆ.
ಕರ್ನಾಟಕದಲ್ಲಿ ಕನ್ನಡದ ಡಬ್ಬಿಂಗ್ ಅವತರಣಿಕೆ ದಬಾಂಗ್-3 ಸಿನಿಮಾ ಸಿಂಗಲ್ ಸ್ಕ್ರೀನ್ ಹಾಗು ಮಲ್ಟಿಪ್ಲೆಕ್ಸ್ನಲ್ಲಿ ಬರೋಬ್ಬರಿ 200ಕ್ಕೂ ಹೆಚ್ಚು ಥೀಯೇಟರ್ಗಳಲ್ಲಿ ರಿಲೀಸ್ ಆಗಿದೆ. ಇನ್ನು ಹಿಂದಿ ಸಿನಿಮಾ ಕೂಡ ಬರೋಬ್ಬರಿ 250ಕ್ಕೂ ಹೆಚ್ಚು ಸ್ಕ್ರೀನ್ಗಳಲ್ಲಿ ದರ್ಬಾರ್ ಶುರು ಮಾಡಿದೆ. ಬಾಲಿವುಡ್ ಬಾಯ್ ಜಾನ್ ಸಲ್ಮಾನ್ ಖಾನ್ ಚುಲ್ ಬುಲ್ ಪಾಂಡೇ ಆಗಿ ಹಾಗು ಸ್ಯಾಂಡಲ್ವುಡ್ ಪೈಲ್ವಾನ್ ಬಲ್ಲಿ ಸಿಂಗ್ ಆಗಿ ತೆರೆಯ ಮೇಲೆ ಅಬ್ಬರಿಸಿದ್ದಾರೆ.
Published On - 2:38 pm, Tue, 31 December 19