ಪುನೀತ್ ರಾಜ್ಕುಮಾರ್ (Puneeth Rajkumar) ಹೀರೋ ಆಗಿ ನಟಿಸಿದ ಮೊದಲ ಸಿನಿಮಾ ‘ಅಪ್ಪು’. ಈ ಸಿನಿಮಾ ಸೂಪರ್ ಹಿಟ್ ಆಯಿತು. ಈ ಚಿತ್ರ ರಿಲೀಸ್ ಆಗಿ ಇಂದಿಗೆ (ಏಪ್ರಿಲ್ 26) 22 ವರ್ಷ. ‘ಅಪ್ಪು’ ಸಿನಿಮಾ ಗೆಲ್ಲುವಲ್ಲಿ ಸಿನಿಮಾದ ಮ್ಯೂಸಿಕ್ ಪಾತ್ರವೂ ದೊಡ್ಡದಿತ್ತು. ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದು ಗುರುಕಿರಣ್ ಅವರು. ತಮಗೆ ಈ ಆಫರ್ ಸಿಗಲಿದೆ ಎಂದು ಅವರು ಭಾವಿಸಿರಲಿಲ್ಲ. ದೊಡ್ಮನೆ ಮಕ್ಕಳನ್ನು ಪರಿಚಯಿಸಲು ಎಆರ್ ರೆಹಮಾನ್ ಅವರಂಥ ಸ್ಟಾರ್ ಮ್ಯೂಸಿಕ್ ಡೈರೆಕ್ಟರ್ನ ಕರೆಸಬಹುದು ಎಂಬುದು ಗುರುಕಿರಣ್ ಆಲೋಚನೆ ಆಗಿತ್ತು. ಆದರೆ, ಅಲ್ಲಾಗಿದ್ದೇ ಬೇರೆ.
‘ಅಪ್ಪು’ ಸಿನಿಮಾದ ‘ತಾಲಿಬಾನ್ ಅಲ್ಲಾ ಅಲ್ಲಾ..’, ‘ಎಲ್ಲಿಂದ ಆರಂಭವೋ..’ ಸೇರಿ ಎಲ್ಲಾ ಹಾಡುಗಳು ಹಿಟ್ ಆದವು. ಈ ಸಿನಿಮಾಗೆ ಅವಕಾಶ ಸಿಕ್ಕ ಬಗ್ಗೆ ಗುರುಕಿರಣ್ ‘ಟಿವಿ9 ಕನ್ನಡ ಡಿಜಿಟಲ್’ ಜೊತೆ ಮಾತನಾಡಿದ್ದಾರೆ. ‘ನಾನು ಆಗ ಹೊಸಬರ ಜೊತೆ ಸಿನಿಮಾ ಮಾಡುತ್ತಿದ್ದೆ. ಅಪ್ಪು ಸಿನಿಮಾ ಆಫರ್ ಬಂದಾಗ ಥ್ರಿಲ್ ಆದೆ. ದೊಡ್ಡವರ ಮಕ್ಕಳ ಲಾಂಚ್ ಎಂದಾಗ ಎಆರ್ ರೆಹಮಾನ್ ಅವರಂಥ ಮ್ಯೂಸಿಕ್ ಡೈರೆಕ್ಟರ್ಗಳನ್ನು ಕರೆಸಬಹುದು ಎಂದು ನಾನು ಅಂದುಕೊಂಡಿದ್ದೆ. ಆದರೆ, ನನಗೆ ಅಪ್ರೋಚ್ ಮಾಡಿದರು’ ಎಂದು ಹಳೆಯ ಘಟನೆ ಬಗ್ಗೆ ಹೇಳಿಕೊಂಡಿದ್ದಾರೆ ಗುರುಕಿರಣ್.
‘ಹೈ ಪ್ರಾಫೈಲ್ ಕಂಪನಿ. ನಾನು ಕೊಟ್ಟ ಮ್ಯೂಸಿಕ್ನ ಅವರು ಹೇಗೆ ಸ್ವೀಕರಿಸುತ್ತಾರೆ ಎನ್ನುವ ಭಯ ಇತ್ತು. ಅಪ್ಪು ನನಗೆ ತುಂಬಾ ಸಪೋರ್ಟಿವ್ ಆಗಿದ್ದರು. ತಾಲಿಬಾನ್ ಅಲ್ಲಾ ಅಲ್ಲಾ ಸಾಂಗ್ಗಳು ವೆಸ್ಟರ್ನ್ ರೀತಿ ಇದ್ದವು. ಹೀಗಾಗಿ, ಲೋಕಲ್ ಫ್ಲೇವರ್ ಇರಲಿ ಎಂದು ಹೇಳುತ್ತಾರೇನೋ ಎನ್ನುವ ಭಯ ಇತ್ತು. ಆದರೆ, ಹಾಡು ಇಷ್ಟ ಆಯ್ತು. ಅಪ್ಪು ಸಖತ್ ಆಗಿ ಡ್ಯಾನ್ಸ್ ಮಾಡಿದರು. ಅವರ ಕೆಲಸದ ಜೊತೆ ನನ್ನ ಕೆಲಸವೂ ಚೆನ್ನಾಗಿ ಕಾಣ್ತಾ ಇತ್ತು’ ಎಂದಿದ್ದಾರೆ ಗುರುಕಿರಣ್.
ಇದನ್ನೂ ಓದಿ: ‘ಅಪ್ಪು’ ಚಿತ್ರಕ್ಕೆ 22 ವರ್ಷ: ಪುನೀತ್ ಚಿತ್ರಕ್ಕೆ ಈ ಟೈಟಲ್ ಸಿಕ್ಕಿದ್ದು ಹೇಗೆ ಗೊತ್ತಾ?
‘ಪುನೀತ್ ಅವರ ಜೊತೆ ಪರಿಚಯ ಮೊದಲೇ ಇತ್ತು. ಅಪ್ಪು ರಿಲೀಸ್ ಆದ ಬಳಿಕ ಪ್ರಸನ್ನ ಸೇರಿ ನಾಲ್ಕೈದು ಥಿಯೇಟರ್ಗೆ ಹೋಗಿದ್ದೆವು. ಅಣ್ಣಾವ್ರು ಕೂಡ ಸಿನಿಮಾ ನೋಡೋಕೆ ಬಂದಿದ್ದರು. ಆಗ ಅದು ಸಖತ್ ಥ್ರಿಲ್ ಕೊಡುತ್ತಿತ್ತು’ ಎಂದು ಹೇಳಿದ್ದಾರೆ ಗುರುಕಿರಣ್. ಪುನೀತ್ ಅವರನ್ನು ಮನೆಯಲ್ಲಿ ಅಪ್ಪು ಎಂದು ಕರೆಯಲಾಗುತ್ತಿತ್ತು. ಇದು ಅವರ ಪೆಟ್ ನೇಮ್. ಇದೇ ಹೆಸರನ್ನು ಸಿನಿಮಾಗೂ ನೀಡಲಾಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:03 am, Fri, 26 April 24