23 ವರ್ಷಗಳ ಬಳಿಕ ರೀ-ರಿಲೀಸ್ ಆದ ‘ಅಪ್ಪು’; ಗಳಿಕೆಯಲ್ಲಿ ಎಲ್ಲ ದಾಖಲೆ ಉಡೀಸ್

ಪುನೀತ್ ರಾಜ್ಕುಮಾರ್ ಅವರ ಜನ್ಮದಿನಕ್ಕೆ ಮುನ್ನ ‘ಅಪ್ಪು’ ಸಿನಿಮಾ ಮರುಬಿಡುಗಡೆಯಾಗಿದ್ದು, ಅಭೂತಪೂರ್ವ ಯಶಸ್ಸು ಕಂಡಿದೆ. 23 ವರ್ಷಗಳ ಹಿಂದಿನ ಈ ಚಿತ್ರ ದೊಡ್ಡ ಮಟ್ಟದ ಗಳಿಕೆ ಮಾಡುತ್ತಿದೆ. ಹೋಳಿ ರಜೆ ಮತ್ತು ವೀಕೆಂಡ್‌ಗಳು ಚಿತ್ರದ ಯಶಸ್ಸಿಗೆ ಕಾರಣವಾಗಿವೆ. ಆ ಬಗ್ಗೆ ಇಲ್ಲಿದೆ ವಿವರ.

23 ವರ್ಷಗಳ ಬಳಿಕ ರೀ-ರಿಲೀಸ್ ಆದ ‘ಅಪ್ಪು’; ಗಳಿಕೆಯಲ್ಲಿ ಎಲ್ಲ ದಾಖಲೆ ಉಡೀಸ್
ಅಪ್ಪು ಸಿನಿಮಾ

Updated on: Mar 17, 2025 | 3:15 PM

ಪುನೀತ್ ರಾಜ್​ಕುಮಾರ್ ಅವರ ಜನ್ಮದಿನಕ್ಕೆ (ಮಾರ್ಚ್ 17) ಮೂರು ದಿನ ಮೊದಲು ಅಂದರೆ ಮಾರ್ಚ್ 14ರಂದು ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಯಿತು. ಈ ಚಿತ್ರವನ್ನು ಜನರು ಮುಗಿಬಿದ್ದು ವೀಕ್ಷಣೆ ಮಾಡುತ್ತಿದ್ದಾರೆ. ಈ ಸಿನಿಮಾ ರೀ-ರಿಲೀಸ್ ಆಗಿ ಒಳ್ಳೆಯ ಗಳಿಕೆ ಮಾಡುತ್ತಿದೆ. ಪುನೀತ್ (Puneeth Rajkumar) ಅಭಿಮಾನಿಗಳು ಮತ್ತೆ ಮತ್ತೆ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಸದ್ಯ ಯಾವುದೇ ಹೊಸ ಸಿನಿಮಾಗಳ ಅಬ್ಬರ ಇಲ್ಲ. ಇದು ಚಿತ್ರಕ್ಕೆ ಮತ್ತಷ್ಟು ಸಹಕಾರಿ ಆಗಿದೆ.

‘ಅಪ್ಪು’ ಸಿನಿಮಾ 2002ರಲ್ಲಿ ರಿಲೀಸ್ ಆಯಿತು. ಈ ಚಿತ್ರ ಆಗಿನ ಕಾಲಕ್ಕೆ ಸೂಪರ್ ಹಿಟ್ ಆಯಿತು. ಈ ಚಿತ್ರ ಪರಭಾಷೆಗಳಿಗೂ ರಿಮೇಕ್ ಆಯಿತು. ಈ ಸಿನಿಮಾ 23 ವರ್ಷಗಳ ಬಳಿಕ ರೀ-ರಿಲೀಸ್ ಕಂಡಿದೆ. ಕರ್ನಾಟಕಾದ್ಯಂತ ಸಿನಿಮಾ ಅಬ್ಬರಿಸುತ್ತಿದೆ. ಹೋಳಿ ಸಂದರ್ಭದ ರಜಾ ದಿನ, ಪುನೀತ್ ಜನ್ಮದಿನ, ವೀಕೆಂಡ್​ಗಳು ಚಿತ್ರದ ಗಳಿಕೆ ಹೆಚ್ಚಲು ಮತ್ತಷ್ಟು ಸಹಕಾರಿ ಆಗಿದೆ.

ಮೊದಲ ದಿನ ಫ್ಯಾನ್​ ಶೋಗಳನ್ನು ಮುಂಜಾನೆಯೇ ಆಯೋಜನೆ ಮಾಡಲಾಗಿತ್ತು. ಇದರಿಂದ ಚಿತ್ರಕ್ಕೆ ಸಾಕಷ್ಟು ಹಣ ಹರಿದು ಬಂದಿದೆ. ‘ಅಪ್ಪು’ ಸಿನಿಮಾ ಭಾನುವಾರ ಒಂದೇ 30 ಲಕ್ಷ ರೂಪಾಯಿ ಆಸುಪಾಸಿನಲ್ಲಿ ಗಳಿಕೆ ಮಾಡಿದೆ ಎನ್ನಲಾಗಿದೆ. ಈ ಚಿತ್ರ ಮೂರು ದಿನಗಳಿಗೆ 1 ಕೋಟಿ ರೂಪಾಯಿ ಆಸುಪಾಸಿನಲ್ಲಿ ಕಲೆಕ್ಷನ್ ಮಾಡಿದೆ ಎಂದು ವರದಿ ಆಗಿದೆ. 23 ವರ್ಷಗಳ ಹಿಂದಿನ ಚಿತ್ರವೊಂದು ರೀ-ರಿಲೀಸ್ ಕಂಡು ಇಷ್ಟು ದೊಡ್ಡ ಮೊತ್ತದ ಗಳಿಕೆ ಆಗುತ್ತದೆ ಎಂದರೆ ಅದು ನಿಜಕ್ಕೂ ದಾಖಲೆಯೇ ಸರಿ. ಆದರೆ, ನಿರ್ಮಾಪಕರ ಕಡೆಯಿಂದ ಅಧಿಕೃತ ಘೋಷಣೆ ಆಗಿಲ್ಲ.

ಇದನ್ನೂ ಓದಿ
‘ಪುನೀತ್ ಕೊಟ್ಟ ಪ್ರೀತಿಯ ಭಿಕ್ಷೆ’; ಅಪ್ಪು ಬಗ್ಗೆ ಅನುಶ್ರೀ ಪ್ರೀತಿಯ ಮಾತು
ಮಕ್ಕಳ ಜೊತೆ ಪುನೀತ್ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ ಪುನೀತ್
ಲೋಹಿತ್ ಎಂದಿದ್ದ ಹೆಸರನ್ನು ಪುನೀತ್ ಆಗಿ ಬದಲಿಸಿದ್ದೇಕೆ ರಾಜ್​ಕುಮಾರ್?
ಅಪ್ಪು ಚಿತ್ರದಲ್ಲಿರೋ ಈ ಎರಡು ಡೈಲಾಗ್ ‘ರಾಜಕುಮಾರ’ ಸಿನಿಮಾದಲ್ಲೂ ಇದೆ

ಇದನ್ನೂ ಓದಿ: ಅಪ್ಪು ಚಿತ್ರದಲ್ಲಿರೋ ಈ ಎರಡು ಡೈಲಾಗ್ ‘ರಾಜಕುಮಾರ’ ಸಿನಿಮಾದಲ್ಲೂ ಇದೆ; ನೆನಪಿದೆಯಾ?

ಮಾರ್ಚ್ 17ರಂದು ಎಲ್ಲ ಕಡೆಗಳಲ್ಲಿ ಪುನೀತ್ ಕೂಗು ಕೇಳುತ್ತಿದೆ. ಏಕೆಂದರೆ ಇಂದು ಅವರ ಜನ್ಮದಿನ. ಈ ಜೋಶ್​ನಲ್ಲಿ ಪುನೀತ್ ಅಭಿಮಾನಿಗಳು ಸಿನಿಮಾ ವೀಕ್ಷಣೆ ಮಾಡುತ್ತಾ ಇದ್ದಾರೆ. ಹೀಗಾಗಿ, ಇಂದು ಕೂಡ ಒಳ್ಳೆಯ ಗಳಿಕೆ ಆಗೋ ಸಾಧ್ಯತೆ ಇದೆ. ಇತ್ತೀಚೆಗೆ ಸಿನಿಮಾಗಳು ಹೀಗೆ ಬಂದು ಹಾಗೆ ಹೋಗುತ್ತಿವೆ. ಯಾವ ಸಿನಿಮಾಗಳೂ ದೊಡ್ಡ ಮಟ್ಟದಲ್ಲಿ ಗೆಲುವು ಕಾಣುತ್ತಿಲ್ಲ. ಹೀಗಿರುವಾಗ ‘ಅಪ್ಪು’ ಸಿನಿಮಾ ರೀ-ರಿಲೀಸ್ ಆಗಿ ಮೆಚ್ಚುಗೆ ಪಡೆಯುತ್ತಿದೆ. ‘ಪಿಆರ್​ಕೆ ಪ್ರೊಡಕ್ಷನ್ಸ್’ ಮೂಲಕ ಈ ಚಿತ್ರವನ್ನು ರಿಲೀಸ್ ಮಾಡಲಾಗಿದೆ. ‘ಅಪ್ಪು’ ಸಿನಿಮಾಗೆ ಪುರಿ ಜಗನ್ನಾಥ್ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ರಕ್ಷಿತಾ ನಾಯಕಿ. ಈ ಸಿನಿಮಾನ ಪಾರ್ವತಮ್ಮ ರಾಜ್​ಕುಮಾರ್ ಅವರೇ ನಿರ್ಮಾಣ ಮಾಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:15 pm, Mon, 17 March 25