ಪುನೀತ್ ರಾಜ್ಕುಮಾರ್ ಮಾಲೆ ಧರಿಸಿ ಇರುಮುಡಿ ಕಟ್ಟು ತಲೆಮೇಲೆ ಹೊತ್ತು ಸಮಾಧಿಗೆ ನಡೆದು ಬಂದ ಅಭಿಮಾನಿ
ಪುನೀತ್ ರಾಜ್ಕುಮಾರ್ ಅವರಿಗೆ ತರಹೇವಾರಿ ಅಭಿಮಾನಿಗಳು, ಒಬ್ಬೊಬ್ಬರದು ಒಂದೊಂದು ಬಗೆಯ ಅಭಿಮಾನ. ಆದರೆ ಅಯ್ಯಪ್ಪನ ಭಕ್ತರಂತೆ ಮಾಲೆಧರಿಸಿ ನಟನ ಫೋಟೋವನ್ನು ಕುತ್ತಿಗೆಗೆ ನೇತಾಡಿಸಿಕೊಂಡು ನಡೆಯುತ್ತಾ ಅವರ ಸಮಾಧಿಗೆ ಹೋಗಿ ಪೂಜೆ ಸಲ್ಲಿಸುವ ಪರಿಕಲ್ಪನೆ ಈ ಅಭಿಮಾನಿಗೆ ಬಿಟ್ಟು ಬೇರೆ ಯಾರಿಗೂ ಬಂದಿರಲಿಕ್ಕಿಲ್ಲ.
ಬೆಂಗಳೂರು, ಮಾರ್ಚ್ 17: ಪುನೀತ್ ರಾಜ್ಕುಮಾರ್ ಅವರ ಜನಪ್ರಿಯತೆ ಎಲ್ಲರಿಗೂ ಗೊತ್ತಿದೆ. ಅವರ ಅಂತಿಮ ಸಂಸ್ಕಾರದಲ್ಲಿ ಭಾಗಿಯಾದವರ ಸಂಖ್ಯೆ 25 ಲಕ್ಷಕ್ಕೂ ಹೆಚ್ಚು ಅಂತ ಹೇಳಲಾಗಿದೆ. ಅವರಿಗೆ ಎಲ್ಲ ವಯೋಮಾನದ ಅಬಿಮಾನಿಗಳಿದ್ದರು. ಆದರೆ ಈ ಅಭಿಮಾನಿ ವಿಶಿಷ್ಟ ಮತ್ತು ವಿಭಿನ್ನ. ದೇಶದಾದ್ಯಂತ ಭಕ್ತರು ಅಯ್ಯಪ್ಪ ಮಾಲೆ ಧರಿಸುತ್ತಾರೆ, ವ್ರತ ಅಚರಿಸುತ್ತಾರೆ. ಇವರಾದರೋ ಪುನೀತ್ ರಾಜ್ಕುಮಾರ್ ಅವರ ಮಾಲೆ ಧರಿಸಿದ್ದಾರೆ ಮತ್ತು ಅವರ ಫೋಟೋ ಕೊರಳಿಗೆ ಹಾಕಿಕೊಂಡು, ತಲೆಮೇಲೆ ಇರುಮುಡ ಕಟ್ಟು ಹೊತ್ತು ನಟನ ಸಮಾಧಿ ಕಡೆ ಬರಿಗಾಲಲ್ಲಿ ನಡೆದುಬರುತ್ತಿದ್ದಾರೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಪುನೀತ್ ರಾಜ್ಕುಮಾರ್ ಅವರ ಸ್ಟಂಟ್ ಅನ್ನು ‘ಅಪ್ಪು ವೆಂಕಟೇಶ್’ ನೆನಪಿಸಿಕೊಂಡಿದ್ದು ಹೀಗೆ
Latest Videos