ಮಂಡಿನೋವಿನಿಂದ ಚೇತರಿಸಿಕೊಂಡಿರೋ ಸಿದ್ದರಾಮಯ್ಯ ವಾಕಿಂಗ್ ಸ್ಟಿಕ್ ನೆರವಿನಿಂದ ಸದನದೊಳಗೆ ನಡೆದು ಹೋದರು
ಮನೆಯಿಂದ ವಿಧಾನಸೌಧಕ್ಕೆ ಕಾರಲ್ಲಿ ಬರುವ ಸಿಎಂ ಸಿದ್ದರಾಮಯ್ಯ ಕೂಡಲೇ ಕೆಳಗಿಳಿಯುವುದಿಲ್ಲ. ಅವರು ಬರುತ್ತಿರುವುದನ್ನು ನೋಡಿದ ಕೂಡಲೇ ಭದ್ರತಾ ದಳದ ಸಿಬ್ಬಂದಿ, ಅಂಗರಕ್ಷಕರು ಮತ್ತು ಪೊಲೀಸ್ ಓಡಿಬರುತ್ತಾರೆ. ಆದರೆ ಮುಖ್ಯಮಂತ್ರಿ ಫೋನಲ್ಲಿ ಯಾರೊಂದಿಗೋ ಮಾತಿನಲ್ಲಿ ಬ್ಯೂಸಿ. ಸುಮಾರು ಹೊತ್ತು ಅವರು ಫೋನಲ್ಲಿ ಮಾತಾಡುತ್ತಾರೆ.
ಬೆಂಗಳೂರು, 17 ಮಾರ್ಚ್: ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಅನುಭವಿಸುತ್ತಿದ್ದ ಮಂಡಿನೋವಿನಿಂದ (knee pain) ಚೇತರಿಸಿಕೊಂಡಂತಿದೆ. ಬಜೆಟ್ ಮಂಡನೆ, ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳುವುದು ಅಥವಾ ಬೇರೆ ಯಾವುದೇ ಕಾರ್ಯಕ್ರಮದಲ್ಲಿ ಭಾಗಿಯಾಗುವುದಿದ್ದರೂ ಅವರು ವ್ಹೀಲ್ ಚೇರ್ನಲ್ಲಿ ಓಡಾಡುತ್ತಿದ್ದರು. ಆದರೆ ಇವತ್ತು ಸದನದ ಕಲಾಪದಲ್ಲಿ ಭಾಗವಹಿಸಲು ಅವರು ವ್ಹೀಲ್ ಚೇರ್ ಬದಲು ಊರುಗೋಲಿನ ನೆರವಿನೊಂದಿಗೆ ವಿಧಾನಸೌಧಕ್ಕೆ ಬಂದು ಸದನದೊಳಗೆ ನಡೆದುಹೋದರು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: ಗ್ರಾಮೀಣ ಭಾಗದ ಜನರಿಗೆ ಗುಡ್ನ್ಯೂಸ್: ಇ ಖಾತಾ ನೀಡಲು ಸಿದ್ದರಾಮಯ್ಯ ಸಂಪುಟ ಒಪ್ಪಿಗೆ
Latest Videos