Abhishek Ambareesh: ಅಭಿಷೇಕ್​ ಅಂಬರೀಷ್​-ಅವಿವಾ ಬಿಡಪ ಅದ್ದೂರಿ ವಿವಾಹದ ಸುಂದರ ವಿಡಿಯೋ ವೈರಲ್​

|

Updated on: Jun 05, 2023 | 3:17 PM

Abhishek Ambareesh Wedding: ಬಹಳ ಅದ್ದೂರಿಯಾಗಿ ನಡೆದ ಈ ಮದುವೆ ಶಾಸ್ತ್ರಗಳು ಹೇಗಿದ್ದವು? ನವ ದಂಪತಿಯ ಉಡುಗೆ-ತೊಡುಗೆ ಹೇಗಿತ್ತು? ಅವಿವಾ ಬಿಡಪ ಧರಿಸಿದ ಆಭರಣಗಳ ವೈಭವ ಯಾವ ರೀತಿ ಇತ್ತು?

Abhishek Ambareesh: ಅಭಿಷೇಕ್​ ಅಂಬರೀಷ್​-ಅವಿವಾ ಬಿಡಪ ಅದ್ದೂರಿ ವಿವಾಹದ ಸುಂದರ ವಿಡಿಯೋ ವೈರಲ್​
ಅವಿವಾ ಬಿಡಪ, ಅಭಿಷೇಕ್​ ಅಂಬರೀಷ್​
Follow us on

ನಟ ಅಭಿಷೇಕ್​ ಅಂಬರೀಷ್​ (Abhishek Ambareesh) ಅವರು ಇಂದು (ಜೂನ್​ 5) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಅವಿವಾ ಬಿಡಪ (Aviva Bidapa) ಜೊತೆ ಅವರು ಸಪ್ತಪದಿ ತುಳಿದಿದ್ದಾರೆ. ಬೆಂಗಳೂರಿನಲ್ಲಿ ಈ ವಿವಾಹ ಸಮಾರಂಭ ಅದ್ದೂರಿಯಾಗಿ ನಡೆದಿದೆ. ದಕ್ಷಿಣ ಭಾರತ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಬಂದು ನವ ದಂಪತಿಗೆ ಅಭಿನಂದನೆ ತಿಳಿಸಿದ್ದಾರೆ. ರಜನಿಕಾಂತ್​, ಮೋಹನ್​ ಬಾಬು, ಕಿಚ್ಚ ಸುದೀಪ್​, ಯಶ್​, ಅನಿಲ್​ ಕುಂಬ್ಳೆ, ಸುಹಾಸಿನಿ ಮಣಿರತ್ನಂ, ಪವಿತ್ರಾ ಲೋಕೇಶ್​, ನರೇಶ್​, ವೆಂಕಯ್ಯ ನಾಯ್ಡು, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಮುಂತಾದವರು ಅಭಿಷೇಕ್​ ಅಂಬರೀಷ್​-ಅವಿವಾ ಬಿಡಪ ಮದುವೆಗೆ (Abhishek Aviva Wedding) ಸಾಕ್ಷಿಯಾದರು. ಈ ಸಂದರ್ಭದ ವಿಡಿಯೋವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಳ್ಳಲಾಗಿದೆ.

‘ರೆಬೆಲ್​ ಸ್ಟಾರ್​’ ಅಂಬರೀಷ್​ ಮತ್ತು ಸುಮಲತಾ ಅಂಬರೀಷ್​ ಅವರು ಸಿನಿಮಾ ಹಾಗೂ ರಾಜಕೀಯ ಎರಡೂ ಕ್ಷೇತ್ರದಲ್ಲಿ ಹೆಸರು ಮಾಡಿದವರು. ಹಾಗಾಗಿ ಅವರಿಗೆ ಈ ಎರಡೂ ಕ್ಷೇತ್ರದಲ್ಲಿ ಸ್ನೇಹಿತರಿದ್ದಾರೆ. ಬಹಳ ಅದ್ದೂರಿಯಾಗಿ ನಡೆದ ಈ ಮದುವೆ ಶಾಸ್ತ್ರಗಳು ಹೇಗಿದ್ದವು? ನವ ದಂಪತಿಯ ಉಡುಗೆ-ತೊಡುಗೆ ಹೇಗಿತ್ತು? ಅವಿವಾ ಬಿಡಪ ಧರಿಸಿದ ಆಭರಣಗಳ ವೈಭವ ಯಾವ ರೀತಿ ಇತ್ತು? ಮಗನ ಮದುವೆಯನ್ನು ಕಣ್ತುಂಬಿಕೊಂಡ ಸುಮಲತಾ ಅಂಬರೀಷ್​ ಅವರ ಭಾವುಕ ಕ್ಷಣ ಹೇಗಿತ್ತು ಎಂಬುದನ್ನು ವಿವರಿಸುವಂತಿದೆ ಈ ವಿಡಿಯೋ.

ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಈ ಅದ್ದೂರಿ ಮದುವೆ ನಡೆದಿದೆ. ಮುಂಜಾನೆಯೇ ಸುಮಲತಾ ಕುಟುಂಬದವರು ಚಾಮರ ವಜ್ರಕ್ಕೆ ಆಗಮಿಸಿದರು. ಅಭಿಷೇಕ್​ ಅವರು ಐಷಾರಾಮಿ ಕಾರಿನಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟರು. ಈ ವಿಡಿಯೋ ವೈರಲ್ ಆಗಿದೆ. ಒಕ್ಕಲಿಗರ ಸಮುದಾಯದಂತೆ ಮದುವೆ ಶಾಸ್ತ್ರಗಳು ನೆರವೇರಿವೆ. ಮೇಘನಾ ರಾಜ್ ಕೂಡ ಆಗಮಿಸಿ, ಖುಷಿಖುಷಿಯಿಂದ ಮಾತನಾಡಿದ್ದಾರೆ. ‘ಅಂಬರೀಷ್ ಅಂಕಲ್ ನಮಗೆ ಕುಟುಂಬದವರು ಇದ್ದ ಹಾಗೆ. ಅಭಿಷೇಕ್ ಕೂಡ ನಮ್ಮ ಫ್ಯಾಮಿಲಿ. ಈಗ ಅವಿವಾ ಕೂಡ ನಮ್ಮ ಕುಟುಂಬ ಸೇರಿಕೊಂಡಿದ್ದಾರೆ. ತುಂಬಾ ಖುಷಿಯ ವಿಚಾರ. ಸೌತ್ ಇಂಡಿಯಾ ಸಿನಿಮಾ ಇಂಡಸ್ಟ್ರಿಗೆ ಸೆಲೆಬ್ರೇಷನ್ ಸಮಯ’ ಎಂದಿದ್ದಾರೆ ಮೇಘನಾ ರಾಜ್.

ಇದನ್ನೂ ಓದಿ: Abhishek Aviva Wedding Highlights: ಅಭಿಷೇಕ್​-ಅವಿವಾಗೆ ಸುದೀಪ್​, ಯಶ್, ರಜನಿ ವಿಶ್

ಜೂನ್ 7ರಂದು ಬೆಂಗಳೂರಿನ ಪ್ಯಾಲೇಸ್​ ಗ್ರೌಂಡ್​ನಲ್ಲಿರುವ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ನಡೆಯಲಿದೆ. ಅಂದು ಎಲ್ಲಾ ಸೆಲೆಬ್ರಿಟಿಗಳು ಭಾಗಿ ಆಗಿ ಔತಣ ಸ್ವೀಕರಿಸಲಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.