ಅಭಿ-ಅವಿವಾ ಬೀಗರೂಟಕ್ಕೆ ಸಿದ್ಧತೆ ಹೇಗಿದೆ? ಅಡುಗೆ ಭಟ್ಟರು ಕೊಟ್ಟ ಪರಿಪೂರ್ಣ ಮಾಹಿತಿ

|

Updated on: Jun 15, 2023 | 9:48 PM

ಅಭಿಷೇಕ್ ಅಂಬರೀಶ್-ಅವಿವಾ ಬಿದಪ್ಪ ಅವರ ಮದುವೆಯ ಬೀಗರ ಔತಣಕೂಟವನ್ನು ಮಂಡ್ಯದಲ್ಲಿ ಆಯೋಜಿಸಲಾಗಿದೆ. ಸಾವಿರಾರು ಸಂಖ್ಯೆಯ ಜನರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, ಔತಣ ಕೂಟಕ್ಕೆ ತಯಾರಿ ಹೇಗಿದೆ ಎಂಬುದನ್ನು ಮುಖ್ಯ ಬಾಣಸಿಗ ಪ್ರಕಾಶ್ ವಿವರಿಸಿದ್ದಾರೆ.

ಅಭಿ-ಅವಿವಾ ಬೀಗರೂಟಕ್ಕೆ ಸಿದ್ಧತೆ ಹೇಗಿದೆ? ಅಡುಗೆ ಭಟ್ಟರು ಕೊಟ್ಟ ಪರಿಪೂರ್ಣ ಮಾಹಿತಿ
ಬೀಗರೂಟ
Follow us on

ಅಂಬರೀಶ್-ಸುಮಲತಾ (Ambareesh-Sumalatha) ಪುತ್ರ ಅಭಿಷೇಕ್ ಅಂಬರೀಶ್ (Abhishek Ambareesh) ಅವರ ವಿವಾಹ ಇತ್ತೀಚೆಗಷ್ಟೆ ಅವಿವಾ ಬಿದಪ್ಪ (Aviva Bidappa) ಅವರೊಟ್ಟಿಗೆ ಅದ್ದೂರಿಯಾಗಿ ಬೆಂಗಳೂರಿನಲ್ಲಿ ನೆರವೇರಿದೆ. ಇದೀಗ ಈ ಇಬ್ಬರ ಮದುವೆಯ ಬೀಗರ ಔತಣ ಕೂಟವನ್ನು ಮಂಡ್ಯದಲ್ಲಿ ಮಾಡಲು ನಿಶ್ಚಯಿಸಿದ್ದು, ಜೂನ್ 16ರಂದು ಔತಣ ಕೂಟ ಆಯೋಜನೆಯಾಗಿದೆ. ಕಳೆದೆರಡು ದಿನಗಳಿಂದಲೂ ಇದಕ್ಕೆ ಸಿದ್ಧತೆಗಳು ನಡೆಯುತ್ತಿದ್ದು, ಔತಣ ಕೂಟಕ್ಕೆ ಅಡುಗೆ ತಯಾರಿಸುತ್ತಿರುವ ಅಡುಗೆ ಭಟ್ಟರ ಬೃಹತ್ ತಂಡದ ಮುಖ್ಯಸ್ಥರು ಔತಣ ಕೂಟದ ಬಗ್ಗೆ ಮಾಹಿತಿ ನೀಡಿದ್ದಾರೆ.

ಮಂಡ್ಯದ ಜನಪ್ರಿಯ ಕೇಟರ್ಸ್ ಆಗಿರುವ ಪರಿಪೂರ್ಣ ಕ್ಯಾಟರಿಂಗ್​​ನವರು ಔತಣ ಕೂಟಕ್ಕೆ ಅಡುಗೆ ತಯಾರಿಸುತ್ತಿದ್ದು, ಪರಿಪೂರ್ಣ ಕ್ಯಾಟರಿಂಗ್​ನ ಮಾಲೀಕರಾದ ಪ್ರಕಾಶ್ ಟಿವಿ9 ಜೊತೆ ಮಾತನಾಡಿದ್ದು, ಬರೋಬ್ಬರಿ 60,000 ಮಂದಿಗೆ ಮಾಂಸದೂಟವನ್ನು ತಯಾರು ಮಾಡಲಾಗುತ್ತಿದೆಯಂತೆ. ಮಾತ್ರವಲ್ಲದೆ ಒಂದೊಮ್ಮೆ ಜನ ಹೆಚ್ಚಿಗೆ ಆಗಮಿಸಿದರೆ ಅವರಿಗೂ ಅಡುಗೆ ತಯಾರಿಸಿ ಬಡಿಸಬೇಕೆಂಬ ನಿರ್ದೇಶನವನ್ನು ಅಂಬರೀಶ್ ಕುಟುಂಬದವರು ಮಾಡಿದ್ದು ಅದಕ್ಕಾಗಿ ಸಕಲ ತಯಾರಿಯನ್ನೂ ಮಾಡಿಕೊಳ್ಳಲಾಗಿದೆಯಂತೆ.

ಏಳು ಟನ್ ಮಟನ್, ಏಳು ಟನ್ ಚಿಕನ್ ಅನ್ನು ಅಡುಗೆಗೆ ಬಳಸಾಗುತ್ತಿದ್ದು ಅಡುಗೆಗೆ ಬೇಕಾದ ಮಾಂಸವನ್ನು ಸಿದ್ದಯ್ಯನ ಕೊಪ್ಪಲು ಹಾಗೂ ಚನ್ನಪಟ್ಟಣದಿಂದ ತರಿಸಲಾಗುತ್ತಿದೆ. ಅಡುಗೆ ಮಾಡಲು 200 ಮಂದಿ ಮುಖ್ಯ ಬಾಣಸಿಗರು, 200 ಮಂದಿ ಸಹಾಯಕ ಬಾಣಸಿಗರನ್ನು ನೇಮಿಸಲಾಗಿದೆ. ಇದರ ಜೊತೆಗೆ ಅಡುಗೆ ಬಡಿಸಲು 350 ಮಂದಿ ಇರಲಿದ್ದು, ಸ್ವಚ್ಛತೆಗೆಂದು ಸುಮಾರು 100 ಮಂದಿ ಮಹಿಳೆಯರನ್ನು ನೇಮಕ ಮಾಡಲಾಗಿದೆ.

ಇದನ್ನೂ ಓದಿ:ಅಭಿಷೇಕ್ ಅಂಬರೀಶ್-ಅವಿವಾ ಅರಿಶಿಣ ಶಾಸ್ತ್ರದ ಸಂಭ್ರಮ ಹೇಗಿತ್ತು? ಚಿತ್ರಗಳಲ್ಲಿ ನೋಡಿ

ಬೆಳಿಗ್ಗೆ 11 ಗಂಟೆಗೆ ಊಟ ಆರಂಭವಾಗಲಿದ್ದು ರಾತ್ರಿ ಎಷ್ಟೇ ಸಮಯವಾದರೂ ಆಹಾರ ಲಭ್ಯವಿರುವಂತೆ ವ್ಯವಸ್ಥೆ ಮಾಡಲಾಗಿದೆ. ಮಾಂಸಾಹಾರ ಮಾತ್ರವೇ ಅಲ್ಲದೆ ಸಸ್ಯಹಾರಕ್ಕೂ ವ್ಯವಸ್ಥೆ ಮಾಡಲಾಗಿದ್ದು, ಸಸ್ಯಹಾರದ ಅಡುಗೆ ಮಾಡಲು ಪ್ರತ್ಯೇಕ ಬಾಣಸಿಗರು ಹಾಗೂ ಸಸ್ಯಹಾರ ಊಟ ಮಾಡುವವರಿಗೆ ಪ್ರತ್ಯೇಕ ಜಾಗದ ವ್ಯವಸ್ಥೆಯನ್ನು ಸಹ ಮಾಡಲಾಗಿದೆ.

ಮಾಂಸಾಹಾರಿಗಳಿಗೆ ಸಬ್ಬಕ್ಕಿ ಪಾಯಸ, ಬಾದುಶಾ, ಮುದ್ದೆ, ಬೋಟಿ ಗೊಜ್ಜು, ನಾಟಿ ಕೋಳಿ ಸಾರು, ಕಬಾಬ್, ಮಟನ್ ಪಲಾವ್, ಎಗ್, ರೈತಾ, ಅನ್ನ-ಸಾರು , ಸರಂ, ಬೀಡ, ಐಸ್​ಕ್ರೀಂ, ಮೊಸರು, ಬೀಡಾ, ನೀರಿನ್ ಬಾಟಲಿಗಳನ್ನು ಬಾಳೆ ಎಲೆಯ ಮೇಲೆ ಬಡಿಸಲಿದ್ದಾರೆ. ಇನ್ನು ಸಸ್ಯಹಾರಿಗಳಿಗೆ ಮೂರು ವಿಧದ ಪಲ್ಯಗಳು, ಹಪ್ಪಳ, ಪಾಯಸ, ಪೂರಿ ಸಾಗು, ಪುಲಾವ್, ಅನ್ನ-ಸಾರು, ಮಜ್ಜಿಗೆ, ಐಸ್​ಕ್ರೀಂ, ಬೀಡ ವ್ಯವಸ್ಥೆ ಮಾಡಲಾಗಿದೆ. ಸುಮಾರು 6000 ಮಂದಿ ಒಂದು ಪಂಕ್ತಿಯಲ್ಲಿ ಕೂತು ಆಹಾರ ಸೇವಿಸುವಂತೆ ವ್ಯವಸ್ಥೆ ಮಾಡಲಾಗಿದ್ದು, ಮಳೆ-ಬಿಸಿಲಿನಿಂದ ರಕ್ಷಣೆಗೆ ಜರ್ಮನ್ ಟೆಂಟ್ ಅಳವಡಿಸಲಾಗಿದೆ. ಜೊತೆಗೆ ವಿಶೇಷ ಫ್ಯಾನ್, ಲೈಟ್​ಗಳ ವ್ಯವಸ್ಥೆಯನ್ನು ಮಾಡಲಾಗಿದೆ. ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಸ್ಯಹಾರಿಗಳಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಸುಮಲತಾ ಅವರ ಕುಟುಂಬಕ್ಕೆ ಆಪ್ತರಾಗಿರುವ ಅನಕೆರೆ ಶಶಿಕುಮಾರ್ ಮಾತನಾಡಿ, ಅಂಬರೀಶ್ ಅವರ ಕನಸನ್ನು ಸುಮಲತಾ ಹಾಗೂ ಅಭಿಷೇಕ್ ನನಸು ಮಾಡುತ್ತಿದ್ದಾರೆ. ಎಷ್ಟೇ ಜನ ಬಂದರೂ ಎಲ್ಲರಿಗೂ ಊಟ ಹಾಕಲು ಸಿದ್ಧವಾಗಿದ್ದೇವೆ. ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ಒಟ್ಟಿಗೆ ಇಷ್ಟು ವ್ಯವಸ್ಥಿತವಾಗಿ ಊಟ ಹಾಕಿಸುತ್ತಿರುವುದು ಮಂಡ್ಯದಲ್ಲಿ ಇದೇ ಮೊದಲು ಎಂದಿದ್ದಾರೆ.

ಜೂನ್ 16 ರಂದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಈ ಅದ್ಧೂರಿ ಬೀಗರ ಔತಣ ಕೂಟವನ್ನು ಆಯೋಜಿಸಲಾಗಿದ್ದು. ಸಂಸದೆ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್-ಅವಿವಾ ಬಿದಪ್ಪ ಅವರುಗಳು ವಿಡಿಯೋ ಮೂಲಕ ಎಲ್ಲ ಹಿತೈಷಿಗಳು, ಸ್ನೇಹಿತರು, ಅಭಿಮಾನಿಗಳನ್ನು ಔತಣ ಕೂಟಕ್ಕೆ ಆಹ್ವಾನಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ