ತಂದೆ ಫೋಟೋಗೆ ಪೂಜೆ ಮಾಡಿ ಫ್ಯಾನ್ಸ್ ಜೊತೆ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ಅಭಿಷೇಕ್ ಅಂಬರೀಷ್

|

Updated on: Oct 03, 2023 | 8:24 AM

Abhishek Ambareesh Birthday: ಅಂಬರೀಷ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅಭಿಷೇಕ್ ಅವರನ್ನೂ ಅಂಬಿ ಫ್ಯಾನ್ಸ್ ಹಿಂಬಾಲಿಸುತ್ತಾರೆ. ಹೀಗಾಗಿ ಅವರ ಮನೆಯ ಸಮೀಪ ಅಭಿಮಾನಿಗಳು ನೆರೆದಿದ್ದರು. ಎಲ್ಲರ ಜೊತೆ ಅವರು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.

ತಂದೆ ಫೋಟೋಗೆ ಪೂಜೆ ಮಾಡಿ ಫ್ಯಾನ್ಸ್ ಜೊತೆ ಸಿಂಪಲ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡ ಅಭಿಷೇಕ್ ಅಂಬರೀಷ್
ಅಭಿಷೇಕ್ ಅಂಬರೀಷ್
Follow us on

ಅಭಿಷೇಕ್ ಅಂಬರೀಷ್ (Abhishek Ambareesh) ಅವರಿಗೆ ಇಂದು (ಅಕ್ಟೋಬರ್ 3) ಜನ್ಮದಿನದ ಸಂಭ್ರಮ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಎಲ್ಲರೂ ಶುಭಾಶಯ ಕೋರುತ್ತಿದ್ದಾರೆ. ಈ ಮೊದಲೇ ಹೇಳಿದಂತೆ ಅವರು ಅದ್ದೂರಿಯಾಗಿ ಬರ್ತ್​ಡೇ ಆಚರಿಸಿಕೊಂಡಿಲ್ಲ. ಸಿಂಪಲ್ ಆಗಿ ಅವರು ಹುಟ್ಟುಹಬ್ಬ ಮಾಡಿಕೊಂಡಿದ್ದಾರೆ. ಇದರ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ತಂದೆ ಅಂಬರೀಷ್ ಫೋಟೋಗೆ ಪೂಜೆ ಮಾಡುತ್ತಾ ಅವರು ಭಾವುಕರಾದರು.

ಅಂಬರೀಷ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅಭಿಷೇಕ್ ಅವರನ್ನೂ ಅಂಬಿ ಫ್ಯಾನ್ಸ್ ಹಿಂಬಾಲಿಸುತ್ತಾರೆ. ಹೀಗಾಗಿ ಅವರ ಮನೆಯ ಸಮೀಪ ಅಭಿಮಾನಿಗಳು ನೆರೆದಿದ್ದರು. ಎಲ್ಲರ ಜೊತೆ ಅವರು ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಬೆಳಿಗ್ಗೆ ಕೂಡ ಅವರು ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ.

ಈ ವರ್ಷ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕಾರಣದಿಂದಲೇ ಅವರು ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ನಿರ್ಧರಿಸಿದ್ದರು. ಈ ಕುರಿತು ಪೋಸ್ಟ್ ಕೂಡ ಹಾಕಿದ್ದರು. ಅಲ್ಲದೆ, ಮನೆ ಬಾಗಿಲಿಗೆ ಅಭಿಮಾನಿಗಳು ಬಂದರೆ ಅವರನ್ನು ಹಾಗೆಯೇ ಕಳುಹಿಸುವುದಿಲ್ಲ ಎಂದು ಕೂಡ ಅವರು ಹೇಳಿದ್ದರು. ಈಗ ಹಾಗೆಯೇ ಮಾಡಿದ್ದಾರೆ. ಎಲ್ಲರ ಜೊತೆ ಫೋಟೋಗೆ ಪೋಸ್ ಕೊಟ್ಟ ಬಳಿಕವೇ ಅಭಿಮಾನಿಗಳನ್ನು ಬೀಳ್ಕೊಟ್ಟಿದ್ದಾರೆ.

ಇದನ್ನೂ ಓದಿ: ‘ಪ್ರೀತಿಯಿಂದ ಮನೆ ಹತ್ತಿರ ಬಂದರೆ ಬರಬೇಡಿ ಅನ್ನೋದು ನಮ್ಮ ಸಂಪ್ರದಾಯವಲ್ಲ’: ಅಭಿಷೇಕ್ ಅಂಬರೀಷ್ ಹೀಗೆ ಹೇಳಿದ್ದೇಕೆ?

ಅಭಿಷೇಕ್ ಅಂಬರೀಷ್ ಅವರು 2019ರಲ್ಲಿ ರಿಲೀಸ್ ಆದ ‘ಅಮರ್’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆ ಬಳಿಕ ಅವರು ಯಾವುದೇ ಸಿನಿಮಾ ಮಾಡಿರಲಿಲ್ಲ. ಈಗ ‘ಬ್ಯಾಡ್ ಮ್ಯಾನರ್ಸ್’ ಹಾಗೂ ‘ಕಾಳಿ’ ಚಿತ್ರದ ಕೆಲಸದಲ್ಲಿ ಅವರು ತೊಡಗಿಕೊಂಡಿದ್ದಾರೆ. ಅಭಿಷೇಕ್ ಜನ್ಮದಿನದ ಪ್ರಯುಕ್ತ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ತಂಡದಿಂದ ಸಾಂಗ್ ಒಂದು ರಿಲೀಸ್ ಆಗುತ್ತಿದೆ. ‘ಕಾಳಿ’ ತಂಡದವರು ಯಾವ ರೀತಿಯಲ್ಲಿ ಪ್ಲ್ಯಾನ್ ಮಾಡಿಕೊಂಡಿದ್ದಾರೆ ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇದನ್ನೂ ಓದಿ: ತಲಕಾವೇರಿಯಲ್ಲಿ ಅಭಿಷೇಕ್ ಅಂಬರೀಷ್​-ಅವಿವಾ ದಂಪತಿಯಿಂದ ವಿಶೇಷ ಪೂಜೆ

ಅಭಿಷೇಕ್ ಅವರಿಗೆ ಸೋಶಿಯಲ್ ಮೀಡಿಯಾ ಮೂಲಕವೂ ವಿಶ್ ತಿಳಿಸಲಾಗುತ್ತಿದೆ. ಫ್ಯಾನ್ ಪೇಜ್​ಗಳಲ್ಲಿ ಅವರ ಫೋಟೊ ಹಾಕಿ ಸಂಭ್ರಮಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:08 am, Tue, 3 October 23