‘ಆಚಾರ್​ & ಕೋ’ ಸಕ್ಸಸ್​​​ಮೀಟ್​ನಲ್ಲಿ ಯುವ ಜೊತೆಗಿನ ಸಿನಿಮಾ ಬಗ್ಗೆ ಮಾತಾಡಿದ ಅಶ್ವಿನಿ ಪುನೀತ್

|

Updated on: Jul 31, 2023 | 2:39 PM

ಬೆಂಗಳೂರಿನ ಸದಾಶಿವ ನಗರದಲ್ಲಿರುವ ಅಪ್ಪು ಮನೆಯಲ್ಲಿ ಅಶ್ವಿನಿ ಅವರು ಇಡೀ ತಂಡದ ಜೊತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಯುವ ಜೊತೆ ಸಿನಿಮಾ ಮಾಡುವ ವಿಚಾರದ ಕುರಿತೂ ಪ್ರಸ್ತಾಪ ಆಗಿದೆ.

‘ಆಚಾರ್​ & ಕೋ’ ಸಕ್ಸಸ್​​​ಮೀಟ್​ನಲ್ಲಿ ಯುವ ಜೊತೆಗಿನ ಸಿನಿಮಾ ಬಗ್ಗೆ ಮಾತಾಡಿದ ಅಶ್ವಿನಿ ಪುನೀತ್
ಅಶ್ವಿನಿ-ಯುವ
Follow us on

ಪಿಆರ್​ಕೆ ಪ್ರೊಡಕ್ಷನ್ಸ್ (PRK Production) ನಿರ್ಮಾಣದ ‘ಆಚಾರ್​ & ಕೋ’ ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರ ಜನ ಮೆಚ್ಚುಗೆ ಪಡೆದಿದೆ. ಇಡೀ ಕುಟುಂಬ ಕುಳಿತು ನೋಡುವ ರೀತಿಯಲ್ಲಿ ‘ಆಚಾರ್​ & ಕೋ’ ಸಿನಿಮಾ ಮೂಡಿಬಂದಿದೆ. ರೆಟ್ರೋ ಕಥೆಯನ್ನು ಒಳ್ಳೆಯ ರೀತಿಯಲ್ಲಿ ಕಟ್ಟಿಕೊಟ್ಟ ಖ್ಯಾತಿ ಸಿಂಧು ಶ್ರೀನಿವಾಸಮೂರ್ತಿಗೆ ಸಲ್ಲುತ್ತದೆ. ಈ ಚಿತ್ರದ ಸಕ್ಸಸ್ ಆಚರಿಸಲು ತಂಡ ಇಂದು (ಜುಲೈ 31) ಪ್ರೆಸ್​ಮೀಟ್ ಕರೆದಿತ್ತು. ಬೆಂಗಳೂರಿನ ಸದಾಶಿವ ನಗರದಲ್ಲಿರುವ ಅಪ್ಪು ಮನೆಯಲ್ಲಿ ಅಶ್ವಿನಿ (Ashwini Puneeth) ಅವರು ಇಡೀ ತಂಡದ ಜೊತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಯುವ ಜೊತೆ ಸಿನಿಮಾ ಮಾಡುವ ವಿಚಾರದ ಕುರಿತೂ ಪ್ರಸ್ತಾಪ ಆಗಿದೆ.

ಯುವ ಡೇಟ್ಸ್ ಕೊಡಬೇಕಷ್ಟೇ..

ಯುವ ಅವರ ಮೊದಲ ಸಿನಿಮಾಗೆ ‘ಯುವ’ ಎಂದೇ ಶೀರ್ಷಿಕೆ ನೀಡಲಾಗಿದೆ. ಈ ಚಿತ್ರಕ್ಕೆ ಹೊಂಬಾಳೆ ಫಿಲ್ಮ್ಸ್ ಬಂಡವಾಳ ಹೂಡುತ್ತಿದ್ದು, ಸಂತೋಷ್ ಆನಂದ್​ರಾಮ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಯುವ ಅವರನ್ನು ಪಿಆರ್​ಕೆ ಮೂಲಕ ಲಾಂಚ್ ಮಾಡಬೇಕು ಎಂಬ ಕನಸು ಅಪ್ಪುಗೆ ಇತ್ತು ಎನ್ನಲಾಗಿದೆ. ಈ ಕುರಿತು ಪ್ರಶ್ನೆ ಮಾಡಲಾಗಿದೆ. ಆಗ ಅಶ್ವಿನಿ ಅವರು ಮುಂದಿನ ಯೋಜನೆ ಬಗ್ಗೆ ಮಾಹಿತಿ ನೀಡಿದ್ದಾರೆ. ‘ನಾನು ಖಂಡಿತವಾಗಿಯೂ ಯುವ ಜೊತೆ ಸಿನಿಮಾ ಮಾಡುತ್ತೇನೆ. ಆದರೆ, ಅವರು ಡೇಟ್ಸ್ ಕೊಡಬೇಕು ಅಷ್ಟೇ’ ಎಂದು ಅಶ್ವಿನಿ ನಕ್ಕಿದ್ದಾರೆ.

ಚಿತ್ರ ನೋಡುವವರ ಸಂಖ್ಯೆ ಹೆಚ್ಚುತ್ತಿದೆ..

‘ಆಚಾರ್ & ಕೋ’ ಸಿನಿಮಾ ನೋಡುಗರ ಸಂಖ್ಯೆ ದಿನ ಕಳೆದಂತೆ ಹೆಚ್ಚುತ್ತಿದೆಯಂತೆ. ಕಳೆದ ವೀಕೆಂಡ್​ನಲ್ಲಿ ಹಲವು ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಂಡಿದೆ. ಈ ಬಗ್ಗೆ ಅಶ್ವಿನಿ ಮಾತನಾಡಿದ್ದಾರೆ. ‘ಆರಂಭದಲ್ಲಿ 6 ನಿಮಿಷದ ಕ್ಲಿಪ್ ನೋಡಿದಾಗಲೇ ಈ ಚಿತ್ರ ತುಂಬಾ ಇಷ್ಟ ಆಗಿತ್ತು. ಅಮ್ಮ (ಪಾರ್ವತಮ್ಮ) ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಮಾಡುತ್ತಿದ್ದ ಸಿನಿಮಾ ರೀತಿಯ ಫೀಲ್​​ನ ಈ ಚಿತ್ರ ನೀಡಿದೆ. ಈ ಚಿತ್ರವನ್ನು ಮಾಡಬೇಕು ಎಂದು ನಾನು ಅಪ್ಪು ಇಬ್ಬರೂ ನಿರ್ಧರಿಸಿದ್ದೆವು’ ಎಂದಿದ್ದಾರೆ ಅಶ್ವಿನಿ.

ಇದನ್ನೂ ಓದಿ: ಆಚಾರ್ ಆಂಡ್ ಕೋ’ ಸಿನಿಮಾ ನೋಡಿ ಪುನೀತ್​ರ ಸಿನಿಮಾದ ಹಾಡು ಹಾಡಿದ ರಾಘಣ್ಣ

‘ದಿನದಿಂದ ದಿನಕ್ಕೆ ಚಿತ್ರ ನೋಡುಗರ ಸಂಖ್ಯೆ ಹೆಚ್ಚುತ್ತಿದೆ. ನಮ್ಮ ಚಿತ್ರ ಎಲ್ಲಾ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಮ್ಮ ಹೇಳಿದಂತೆ ಕಾದಂಬರಿ ಓದಿ ಸಿನಿಮಾ ಮಾಡುತ್ತೇನೆ. ಪ್ರೊಡಕ್ಷನ್ ವಿಚಾರದಲ್ಲಿ ಅಪ್ಪು ಸ್ವಲ್ಪ ಫ್ರೀ ಇದ್ದರು. ಆದರೆ ಆ ವಿಚಾರದಲ್ಲಿ ನಾನು ಸ್ವಲ್ಪ ಸ್ಕ್ರಿಕ್ಟ್ ಆಗಿ ಇರುತ್ತೇನೆ. ನನಗೆ ಫ್ಯಾಮಿಲಿ ಮತ್ತು ಥ್ರಿಲ್ಲರ್ ಜಾನರ್ ಸಿನಿಮಾಗಳು ಅಂದ್ರೆ ಇಷ್ಟ. ಯಾರಾದರೂ ಥ್ರಿಲ್ಲರ್ ಕತೆ ಹೇಳಿದರೆ ಆ ಸಿನಿಮಾ ಮಾಡುತ್ತೇನೆ. ಮುಂದಿನ ದಿನಗಳಲ್ಲಿ ನಾನು ಹೆಚ್ಚು ಸಿನಿಮಾ ನಿರ್ಮಾಣ ಮಾಡುತ್ತೇನೆ’ ಎಂದು ಅವರು ಭರವಸೆ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

 

Published On - 2:19 pm, Mon, 31 July 23