AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಷಾರಾಮಿ ಡಿಫೆಂಡರ್ ಖರೀದಿಸಿದ ಆ್ಯಕ್ಷನ್ ನಿರ್ದೇಶಕ ರವಿ ವರ್ಮ; ವಿಶೇಷ ವ್ಯಕ್ತಿಯಿಂದ ಹಸ್ತಾಕ್ಷರ

ಕನ್ನಡದ ಹೆಮ್ಮೆಯ ಆ್ಯಕ್ಷನ್ ಡೈರೆಕ್ಟರ್ ರವಿ ವರ್ಮಾ, ತೆಲುಗು, ಹಿಂದಿ ಸೇರಿದಂತೆ ಹಲವು ಭಾಷೆಗಳಲ್ಲಿ ಸಾಧನೆ ಮಾಡಿದ್ದಾರೆ. ಈಗ ಐಷಾರಾಮಿ ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಖರೀದಿಸಿದ್ದಾರೆ. ಸನ್ನಿ ಡಿಯೋಲ್, ಸಲ್ಮಾನ್ ಖಾನ್ ಜೊತೆ ಕೆಲಸ ಮಾಡಿರುವ ಅವರು, ತಮ್ಮ ದುಬಾರಿ ಕಾರಿಗೆ ಸನ್ನಿ ಡಿಯೋಲ್ ಅವರಿಂದಲೇ ಹಸ್ತಾಕ್ಷರ ಪಡೆದಿದ್ದಾರೆ. ರವಿ ವರ್ಮಾ ಅವರ ಕನಸು ನನಸಾಗಿದ್ದು, ಅವರ ಕಠಿಣ ಪರಿಶ್ರಮದ ಫಲವಾಗಿದೆ.

ಐಷಾರಾಮಿ ಡಿಫೆಂಡರ್ ಖರೀದಿಸಿದ ಆ್ಯಕ್ಷನ್ ನಿರ್ದೇಶಕ ರವಿ ವರ್ಮ; ವಿಶೇಷ ವ್ಯಕ್ತಿಯಿಂದ ಹಸ್ತಾಕ್ಷರ
ರವಿ ವರ್ಮ
ರಾಜೇಶ್ ದುಗ್ಗುಮನೆ
|

Updated on: Apr 23, 2026 | 7:38 AM

Share

ಆ್ಯಕ್ಷನ್ ಡೈರೆಕ್ಟರ್ ರವಿ ವರ್ಮ (Ravi Varma) ಅವರು ಕನ್ನಡ ಮಾತ್ರವಲ್ಲದೆ ತೆಲುಗು, ಹಿಂದಿ ಮೊದಲಾದ ಭಾಷೆಗಳಲ್ಲಿ ಕೆಲಸ ಮಾಡಿದ್ದಾರೆ. ಸಾಕಷ್ಟು ಚಾಲೆಂಜ್​​ಗಳನ್ನು ಎದುರಿಸಿ ಅವರು ಈ ಹಂತಕ್ಕೆ ಬಂದು ನಿಂತಿದ್ದಾರೆ. ತಮ್ಮ ಕೆಲಸ ಮಾತನಾಡುವಂತೆ ಅವರು ಮಾಡಿದ್ದಾರೆ. ಸನ್ನಿ ಯಶ್, ಸಲ್ಮಾನ್ ಖಾನ್, ಸನ್ನಿ ಡಿಯೋಲ್ ಸೇರಿದಂತೆ ಅನೇಕ ಸ್ಟಾರ್​​ಗಳ ಜೊತೆ ಕೆಲಸ ಮಾಡಿದ್ದಾರೆ. ಈ ಮಧ್ಯೆ ರವಿ ವರ್ಮ ಅವರು ದುಬಾರಿ ಕಾರನ್ನು ಖರೀದಿ ಮಾಡಿದ್ದಾರೆ. ಇದು ಇನ್ನೂ ಕನಸಿನ ರೀತಿ ಕಾಣುತ್ತಿದೆ ಎಂದು ಅವರು ಹೇಳಿದ್ದಾರೆ. ಈ ಕಾರಿಗೆ ವಿಶೇಷ ವ್ಯಕ್ತಿಯ ಹಸ್ತಾಕ್ಷರ ಬಿದ್ದಿದೆ.

ರವಿ ವರ್ಮ ಅವರು ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಖರೀದಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇದರ ಬೆಲೆ 1.27 ಕೋಟಿ ರೂಪಾಯಿ ಇಂದ ಆರಂಭ ಆಗಿ, 3.35 ಕೋಟಿ ರೂಪಾಯಿವರೆಗೆ ಇದೆ. ವಿವಿಧ ರೀತಿಯ ವೇರಿಯಂಟ್​​ಗೆ ವಿವಿಧ ರೀತಿಯ ಬೆಲೆ ನಿಗದಿ ಆಗಿದೆ. 2 ಲೀಟರ್ ಪೆಟ್ರೋಲ್ ಇಂಜಿನ್, 3 ಲೀಟರ್ ಡೀಸೆಲ್ ಇಂಜಿನ್, 5 ಲೀಟರ್ ವಿ8 ಇಂಜಿನ್ ವೇರಿಯಂಟ್​​ಗಳಲ್ಲಿ ಈ ಕಾರು ಲಭ್ಯ. ಇದು ಐಷಾರಾಮಿ ಆಫ್​​ರೋಡ್ ಎಸ್​​ಯಿವಿ ಕಾರು. ಐದು ಲೀಟರ್ ವಿ8 ಇಂಜಿನ್ ಕೇವಲ 4 ಸೆಕೆಂಡ್​​ಗಳಲ್ಲಿ ಜೀರೋದಿಂದ 100 ಕಿಮೀ ವೇಗವನ್ನು ತಲುಪುತ್ತದೆ.

ರವಿ ವರ್ಮ ಅವರು ಈ ಕಾರನ್ನು ಬಾಲಿವುಡ್ ನಟ ಸನ್ನಿ ಡಿಯೋಲ್ ಎದುರು ತೆಗೆದುಕೊಂಡು ಹೋಗಿದ್ದಾರೆ. ಈ ಕಾರನ್ನು ಸನ್ನಿ ಒಮ್ಮೆ ಓಡಿಸಿ ನೋಡಿದ್ದಾರೆ. ಇಷ್ಟೇ ಅಲ್ಲ, ಕಾರಿನ ಡ್ಯಾಶ್​​ಬೋರ್ಡ್ ಮೇಲೆ ಪ್ರೀತಿಯಿಂದ ಹಸ್ತಾಕ್ಷರ ಕೂಡ ಹಾಕಿ ಕೊಟ್ಟಿದ್ದಾರೆ. ಈ ಸಂದರ್ಭದ ವಿಡಿಯೋನ ರವಿ ವರ್ಮ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಕೊಲೆ ಬೆದರಿಕೆ ಆರೋಪ: ಫೈಟ್ ಮಾಸ್ಟರ್ ರವಿ ವರ್ಮಾ ಪ್ರತಿಕ್ರಿಯೆ

‘ಇನ್ನೂ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದೇನೆ’ ಎಂದು ಬರಹ ಆರಂಭಿಸಿದ್ದಾರೆ ರವಿ ವರ್ಮ. ಇಂದು ನನ್ನ ಹೊಸ ಡಿಫೆಂಡರ್ ಡ್ರೈವ್ ಮಾಡಿದೆ. ಇದು ಅವಾಸ್ತವಿಕವೆನಿಸುತ್ತಿದೆ’ ಎಂಬುದು ರವಿ ವರ್ಮ ಮಾತು. ಅವರಿಗೆ ಇದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ‘ಸನ್ನಿ ಡಿಯೋಲ್ ಅವರೇ ನಿಮ್ಮ ನಿರಂತರ ಬೆಂಬಲಕ್ಕಾಗಿ ತುಂಬಾ ಧನ್ಯವಾದಗಳು. ಇದಕ್ಕೆ ಕೃತಜ್ಞನಾಗಿರುತ್ತೇನೆ’ ಎಂದು ಅವರು ಬರೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
ವಿಶ್ವಾಸಮತ ಗೆದ್ದ ಬಳಿಕ ಮಹತ್ವದ ಘೋಷಣೆ ಮಾಡಿದ ತಮಿಳುನಾಡು ಸಿಎಂ ವಿಜಯ್​​
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
Live: ತಮಿಳುನಾಡು ಸಿಎಂ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್