‘ಕಾಲವೇ ಮೋಸಗಾರ’ ಚಿತ್ರದಿಂದ ಗಾಂಧಿನಗರಕ್ಕೆ ಹೊಸ ಹೀರೋ ಭರತ್ ಸಾಗರ್ ಎಂಟ್ರಿ

ಭರತ್ ಸಾಗರ್ ನಟಿಸಿರುವ ‘ಕಾಲವೇ ಮೋಸಗಾರ’ ಸಿನಿಮಾ ಜೂನ್ 20ರಂದು ಬಿಡುಗಡೆ ಆಗಲಿದೆ. ಸಂಜಯ್ ಪುರಾಣಿಕ್ ನಿರ್ದೇಶನ ಮಾಡಿದ್ದಾರೆ. ಸಾಕಷ್ಟು ತಯಾರಿಯೊಂದಿಗೆ ಭರತ್ ಅವರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಹೀರೋ ಆಗಿ ಅವರಿಗೆ ಇದು ಮೊದಲ ಸಿನಿಮಾ. ಹೊಸ ಹೀರೋ ಭರತ್ ಸಾಗರ್ ಬಗ್ಗೆ ಇಲ್ಲಿದೆ ಪರಿಚಯ..

‘ಕಾಲವೇ ಮೋಸಗಾರ’ ಚಿತ್ರದಿಂದ ಗಾಂಧಿನಗರಕ್ಕೆ ಹೊಸ ಹೀರೋ ಭರತ್ ಸಾಗರ್ ಎಂಟ್ರಿ
Bharath Sagar

Updated on: Jun 17, 2025 | 7:16 PM

ಕಳೆದ ಹಲವು ವರ್ಷಗಳಿಂದ ನಟ ಭರತ್ ಸಾಗರ್ (Bharath Sagar) ಅವರು ಚಿತ್ರರಂಗದಲ್ಲಿ ಇದ್ದಾರೆ. ‘ಆಟಕ್ಕುಂಟು ಲೆಕ್ಕಕ್ಕಿಲ್ಲ’, ‘ಮಾಯಾನಗರಿ’ ಮುಂತಾದ ಸಿನಿಮಾಗಳಲ್ಲಿ ಅವರು ಪಾತ್ರ ಮಾಡಿದ್ದರು. ಈಗ ‘ಕಾಲವೇ ಮೋಸಗಾರ’ (Kalave Mosagara) ಸಿನಿಮಾದಿಂದ ಹೀರೋ ಆಗಿದ್ದಾರೆ. ಭರತ್ ಅವರು ಹುಟ್ಟಿದ್ದು ಬೆಳೆದಿದ್ದು ಭದ್ರಾವತಿಯಲ್ಲಿ. ಶಾಲೆ ಕಲಿತಿದ್ದು ಸಾಗರದಲ್ಲಿ. ಬಳಿಕ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ್ದು ಮೈಸೂರಿನಲ್ಲಿ. ಬಳಿಕ ಬೆಂಗಳೂರಿಗೆ ಬಂದು ಉನ್ನತ ಶಿಕ್ಷಣದ ಜೊತೆಗೆ ಮಾಡೆಲಿಂಗ್ ಲೋಕದಲ್ಲಿ ಬ್ಯುಸಿ ಆಗಿದ್ದರು. ರಂಗಭೂಮಿಯ ನಂಟಿನಿಂದ ಅಭಿನಯವನ್ನೂ ಕಲಿತುಕೊಂಡರು. ಈಗ ಅವರು ‘ಕಾಲವೇ ಮೋಸಗಾರ’ ಚಿತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ.

‘ಕಾಲವೇ ಮೋಸಗಾರ’ ಸಿನಿಮಾಗೆ ಸಂಜಯ್ ಪುರಾಣಿಕ್ ಅವರು ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸಮಯ ಗೆಲ್ಲುತ್ತಾ ಅಥವಾ ವ್ಯಕ್ತಿ ಗೆಲ್ಲುತ್ತಾನಾ ಎಂಬುದನ್ನು ಈ ಸಿನಿಮಾ ಮೂಲಕ ಅವರು ತೋರಿಸುತ್ತಿದ್ದಾರೆ. ನಾಯಕ ಭರತ್ ಸಾಗರ್ ಅವರಿಗೆ ಜೋಡಿಯಾಗಿ ಯಶಸ್ವಿನಿ ರವೀಂದ್ರ ಅಭಿನಯಿಸಿದ್ದಾರೆ. ಭರತ್ ಸಾಗರ್ ಅವರು ಮಾಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಭರತ್ ಸಾಗರ್ ಅವರು ಶ್ರಮಜೀವಿ. ಬೆಂಗಳೂರಿನಲ್ಲಿ ಅವರದ್ದೇ ತರಕಾರಿ ಅಂಗಡಿ ಇದೆ. ಬೆಳಗ್ಗೆ ಎದ್ದು ಅಂಗಡಿ ಕೆಲಸ ಆರಂಭಿಸಿ, ಮನೆಯಲ್ಲಿ ತಂದೆಗೆ ಅಡುಗೆ ಮಾಡಿಕೊಟ್ಟು, ಜಿಮ್, ಡ್ಯಾನ್ಸ್ ಅಭ್ಯಾಸ ಮಾಡುತ್ತಾ ಚಿತ್ರರಂಗದಲ್ಲಿ ತೊಡಗಿಕೊಂಡವರು ಅವರು. ಎಲ್ಲ ಜವಾಬ್ದಾರಿಯನ್ನು ನಿಭಾಯಿಸುತ್ತಲೇ ಅವರು ಹೀರೋ ಆಗುವ ಮಟ್ಟಕ್ಕೆ ಬೆಳೆದರು. ‘ನಾನು ಚಿತ್ರರಂಗಕ್ಕೆ ಬಂದು 10-11 ವರ್ಷ ಆಯಿತು. ಒಳ್ಳೆಯ ಕಲಾವಿದ ಆಗಬೇಕು ಎಂಬುದು ನನ್ನ ಗುರಿ’ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

‘ಕಾಲವೇ ಮೋಸಗಾರ’ ಸಿನಿಮಾದಿಂದ ತಮಗೆ ಯಶಸ್ಸು ಸಿಗುತ್ತದೆ ಎಂಬ ಭರವಸೆ ಭರತ್ ಅವರಿಗೆ ಇದೆ. ಯಾಕೆಂದರೆ, ಈ ಚಿತ್ರಕ್ಕೆ ಪುನೀತ್ ರಾಜ್​ಕುಮಾರ್ ಅವರು ಆಶೀರ್ವಾದ ಮಾಡಿದ್ದರು. ಹಾಡು ಮತ್ತು ಟ್ರೇಲರ್ ನೋಡಿ ಅವರು ಖುಷಿಪಟ್ಟಿದ್ದರು. ‘ದೊಡ್ಡ ದೊಡ್ಡ ತಂತ್ರಜ್ಞರು ನಮ್ಮ ಸಿನಿಮಾದಲ್ಲಿ ಕೆಲಸ ಮಾಡಿದ್ದಾರೆ. ಎಲ್ಲರ ಆಶೀರ್ವಾದ ಈ ಚಿತ್ರದ ಮೇಲಿದೆ’ ಎಂದಿದ್ದಾರೆ ಭರತ್.

ಇದನ್ನೂ ಓದಿ: ಪ್ರಭಾಕರ್ ವರ್ಕೌಟ್ ಯಾವ ರೀತಿ ಇರುತ್ತಿತ್ತು? ಫಿಟಸ್ನೆಸ್ ಗುಟ್ಟು ಹಸುವಿನ ಹಾಲು, ಸೇಬು  

ನಟನೆ ಎಂದರೆ ಏನು ಎಂಬುದು ನನಗೆ ರಂಗಶಂಕರಕ್ಕೆ ಹೋದಾಗಲೇ ತಿಳಿಯಿತು. ಶಂಕರ್ ನಾಗ್ ಎಂದರೆ ನನಗೆ ಬಹಳ ಇಷ್ಟ ಮತ್ತು ಸ್ಫೂರ್ತಿ. ಈಗ ನಾನು ಜಿಮ್ನಾಸ್ಟಿಕ್ ಮತ್ತು ಫೈಟ್ ಮಾಡಲು ಪುನೀತ್ ರಾಜ್​ಕುಮಾರ್ ಸ್ಫೂರ್ತಿ. ಎಲ್ಲ ಹೀರೋಗಳನ್ನು ಕೂಡ ನೋಡಿ ಕಲಿತಿದ್ದೇನೆ’ ಎಂದು ಭರತ್ ಸಾಗರ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.