AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗಾಂಧಿನಗರದಲ್ಲಿ ಯಾರಿವರು ಡೆಡ್ಲಿ ಲವರ್ಸ್? ಶೀಘ್ರದಲ್ಲೇ ತಿಳಿಯಲಿದೆ ಪೂರ್ತಿ ಕಥೆ

ಇತ್ತೀಚೆಗೆ ನಡೆದ ‘ಡೆಡ್ಲಿ ಲವರ‍್ಸ್’ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮಕ್ಕೆ ‘ಹುಲಿಯಾ’ ಸಿನಿಮಾ ನಿರ್ಮಾಪಕ ಗೋವಿಂದರಾಜ್ ಅವರು ಚಾಲನೆ ನೀಡಿದರು. ನಾಗೇಂದ್ರ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಅಲ್ಲದೇ ಕಥೆ, ಚಿತ್ರಕಥೆ, ಸಂಕಲನ, ಸಂಭಾಷಣೆ ಹಾಗೂ ನಿರ್ಮಾಣ ಜವಾಬ್ದಾರಿಯನ್ನೂ ನಾಗೇಂದ್ರ ಅವರೇ ನಿಭಾಯಿಸಿದ್ದಾರೆ.

ಗಾಂಧಿನಗರದಲ್ಲಿ ಯಾರಿವರು ಡೆಡ್ಲಿ ಲವರ್ಸ್? ಶೀಘ್ರದಲ್ಲೇ ತಿಳಿಯಲಿದೆ ಪೂರ್ತಿ ಕಥೆ
Deadly Lovers Movie Team
ಮದನ್​ ಕುಮಾರ್​
|

Updated on: Jun 17, 2025 | 10:46 PM

Share

ಒಂದೆಡೆ ಪರಭಾಷೆ ಸಿನಿಮಾಗಳ ಪೈಪೋಟಿ, ಇನ್ನೊಂದೆಡೆ ಪ್ರೇಕ್ಷಕರ ಕೊರತೆ. ಹೀಗೆ ಹಲವು ಸಮಸ್ಯೆಗಳು ಇದ್ದರೂ ಕೂಡ ಹೊಸಬರ ಉತ್ಸಾಹ ಕಡಿಮೆ ಆಗುವುದಿಲ್ಲ. ಗಾಂಧಿನಗರಕ್ಕೆ ಹೊಸ ಹೊಸ ಚಿತ್ರತಂಡಗಳು ಎಂಟ್ರಿ ನೀಡುತ್ತಲೇ ಇರುತ್ತವೆ. ಈಗ ‘ಡೆಡ್ಲಿ ಲವರ್ಸ್’ ಹೆಸರಿನ ಹೊಸ ಸಿನಿಮಾ (Kannada Movie) ಬಿಡುಗಡೆಗೆ ಸಜ್ಜಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು. ‘ಡೆಡ್ಲಿ ಲವರ್ಸ್’ (Deadly Lovers) ಸಿನಿಮಾದಲ್ಲಿ ಹೊಸ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂನ್ 20ರಂದು ಈ ಸಿನಿಮಾ ಬಿಡುಗಡೆ ಆಗಲಿದೆ ಎಂದು ಟ್ರೇಲರ್ ಮೂಲಕ ತಿಳಿಸಲಾಗಿದೆ.

‘ಡೆಡ್ಲಿ ಲವರ್ಸ್’ ಎಂಬ ಟೈಟಲ್ ಕ್ಯಾಚಿ ಆಗಿದೆ. ಹಾಗಾದರೆ ಈ ಸಿನಿಮಾ ಕಥೆ ಏನಿರಬಹುದು ಎಂಬ ಕೌತುಕ ಸಹಜ. ಪ್ರೇಮಿಗಳಿಬ್ಬರು ಭೂಗತಲೋಕಕ್ಕೆ ಎಂಟ್ರಿಕೊಡುತ್ತಾರೆ. ವಿಲನ್​ಗೆ ಚಳ್ಳೆಹಣ್ಣು ತಿನ್ನಿಸಿ ಡ್ರಗ್ಸ್ ಹಣವನ್ನು ಪ್ರೇಮಿಗಳು ಕದಿಯುತ್ತಾರೆ. ಈ ವಿಷಯ ಗೃಹಮಂತ್ರಿಗೆ ತಿಳಿಯುತ್ತದೆ. ಮುಂದೇನಾಗುತ್ತದೆ ಎಂಬುದು ಸಸ್ಪೆನ್ಸ್. ಅಷ್ಟಕ್ಕೂ ಈ ಲವರ‍್ಸ್‌ ಇಬ್ಬರು ಡೆಡ್ಲಿ ಆಗಿದ್ದಕ್ಕೂ ಒಂದು ಕಾರಣ ಇದೆ ಎಂದು ಕಥೆಯ ಎಳೆಯನ್ನು ಬಿಟ್ಟುಕೊಟ್ಟಿದ್ದಾರೆ ನಿರ್ದೇಶಕರು.

‘ಅನಘ ಎಂಟರ್ ಪ್ರೈಸಸ್’ ಸಂಸ್ಥೆಯ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ. ಅಖಿಲ್ ಕುಮಾರ್ ಅವರು ನಾಯಕನಾಗಿ ನಟಿಸಿದ್ದರೆ. ಹೊಸ ನಟಿ ತನುಪ್ರಸಾದ್ ಅವರು ನಾಯಕಿ ಆಗಿದ್ದಾರೆ. ಎಸಿಪಿ ಪಾತ್ರದಲ್ಲಿ ಪ್ರೇಮಾ ಗೌಡ ಅಭಿನಯಿಸಿದ್ದಾರೆ. ಭಾಸ್ಕರ್, ವಿನೋದ್, ಲಹರಿ ವೇಲು, ಎ.ಆರ್. ಲೋಕೇಶ್ ಮುಂತಾದ ಕಲಾವಿದರು ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ
Image
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
Image
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
Image
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
Image
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ಲಯ ಕೋಕಿಲ ಅವರು ‘ಡೆಡ್ಲಿ ಲವರ್ಸ್’ ಸಿನಿಮಾಗೆ ಸಂಗೀತ ನೀಡಿದ್ದಾರೆ. ಹೆಚ್.ಎನ್. ನರಸಿಂಹಮೂರ್ತಿ ಅವರು ಛಾಯಾಗ್ರಹಣ ಮಾಡಿದ್ದಾರೆ. ವಿಕ್ರಂ ಸಿಂಗ್ ಅವರ ಸಾಹಸ ನಿರ್ದೇಶನ ಈ ಸಿನಿಮಾಗಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಎ.ಆರ್. ಲೋಕೇಶ್ ಕೆಲಸ ಮಾಡಿದ್ದಾರೆ. ಈ ಚಿತ್ರದ ಹಾಡುಗಳು ಮತ್ತು ಟ್ರೇಲರ್ ಸಿರಿ ಮ್ಯೂಸಿಕ್ ಮೂಲಕ ಬಿಡುಗಡೆ ಆಗಿವೆ.

ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ತಿರುಗಿಬಿದ್ದ ‘ಸಂಜು ವೆಡ್ಸ್ ಗೀತಾ 2’ ಚಿತ್ರತಂಡ; ನಟಿ ಮಾಡಿದ ತಪ್ಪೇನು?

‘ಡೆಡ್ಲಿ ಲವರ್ಸ್’ ಸಿನಿಮಾಗೆ ಮಂಚನ ಡ್ಯಾಂ ಮತ್ತು ಬೆಂಗಳೂರು ಸುತ್ತ ಮುತ್ತ ಚಿತ್ರೀಕರಣ ಮಾಡಲಾಗಿದೆ. ಈವರೆಗೂ ಹದಿನೆಂಟು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಪ್ರಶಾಂತ್ ನಾಯಕ್ ಅವರು ಈಗ ‘ತಾಂಡವ ಮೂವೀ ಮೇಕರ‍್ಸ್’ ಸಂಸ್ಥೆ ಮೂಲಕ ‘ಡೆಡ್ಲಿ ಲವರ್ಸ್’ ಸಿನಿಮಾದ ವಿತರಣೆ ಮಾಡುತ್ತಿದ್ದಾರೆ. ಅಂದಾಜು 50ರಿಂದ 60 ಚಿತ್ರಮಂದಿರಗಳಲ್ಲಿ ಈ ಸಿನಿಮಾ ಬಿಡುಗಡೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.