ಬೆಂಗಳೂರು: ಮಹಾಮಾರಿ ಕೊರೊನಾ ಸೋಂಕಿಗೊಳಗಾಗಿದ್ದ ನಟ ದುನಿಯಾ ವಿಜಯ್ ಪೋಷಕರು ಸದ್ಯ ಗುಣಮುಖರಾಗಿದ್ದು ತಂದೆ-ತಾಯಿಯ ಕೊರೊನಾ ವಿರುದ್ಧದ ಕಾಳಗ ಮತ್ತು ದುನಿಯಾ ವಿಜಯ್ ತಮ್ಮ ಪೋಷಕರನ್ನು ಆರೈಕೆ ಮಾಡಿ ಕಾಪಾಡಿಕೊಂಡ ಬಗ್ಗೆ ವಿಜಯ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ.
ಕಳೆದ 25 ದಿನಗಳ ಹಿಂದೆ ದುನಿಯಾ ವಿಜಯ್ ತಂದೆ-ತಾಯಿಗೆ ಕೊರೊನಾ ಪಾಸಿಟಿವ್ ಬಂದಿತ್ತು. ಈ ವೇಳೆ ವೈದರ ಸಲಹೆ ಮೇರೆಗೆ ಮನೆಯಲ್ಲಿಯೇ ಆರೈಕೆ ಮಾಡಿದ್ದಾರೆ. ವಯಸ್ಸಾದ ಪೋಷಕರಿಗೆ ಸೋಂಕು ತಗುಲಿರುವುದು ತಿಳಿಯುತ್ತಿದ್ದಂತೆ ಭಯಪಡದೆ ಮಗನಾಗಿ ಅವರಿಗೆ ಆರೈಕೆ ಮಾಡಿ ಕೊರೊನಾ ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. 80 ವರ್ಷದ ತಂದೆ ರುದ್ರಪ್ಪ ಹಾಗೂ 76 ವರ್ಷದ ತಾಯಿ ನಾರಾಯಣಮ್ಮ ಕೊರೊನಾ ಗೆದ್ದು ಈಗ ಗುಣಮುಖರಾಗಿದ್ದಾರೆ. ಈ ಸಮಯದಲ್ಲಿ ದುನಿಯಾ ವಿಜಯ್ ಪೋಷಕರನ್ನು ಉಳಿಸಿಕೊಳ್ಳಲು ಸಾಕಷ್ಟು ಕಷ್ಟ ಪಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆರೈಕೆ ವಿಡಿಯೋ ಶೇರ್ ಮಾಡಿದ್ದಾರೆ.
ವಿಡಿಯೋ ನೋಡಲು ಇಲ್ಲಿಕ್ಲಿಕ್ಮಾಡಿ
ಕೊರೊನಾ ಬಂತು ಅಂತ ಧೈರ್ಯ ಕಳೆದುಕೊಳ್ಳಬೇಡಿ. ತಂದೆ-ತಾಯಿಯನ್ನು ಕೈಬಿಡಬೇಡಿ. ನನ್ನ ತಂದೆ-ತಾಯಿ ಬದುಕಿದ್ದಾರೆ ಎಂಬ ಖುಷಿಯಿಂದ ಈ ವಿಡಿಯೋವನ್ನು ಹಂಚಿಕೊಳ್ಳುತ್ತಿಲ್ಲ. ಎಷ್ಟೋ ಜನ ನನ್ನ ರೀತಿ ಸೇವೆ ಮಾಡಿ ತಂದೆ-ತಾಯಿಯನ್ನು ಕಳೆದುಕೊಂಡವರಿದ್ದಾರೆ. ಅವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಆದರೆ ಯಾವುದೇ ಕಾರಣಕ್ಕೂ ಧೃತಿಗೆಡಬೇಡಿ. ಕೊರೊನಾ ವಿರುದ್ಧ ಗೆಲ್ಲಲು ಸಕಾರಾತ್ಮಕವಾಗಿ ಯೋಚಿಸಿ. ಜೊತೆಗೆ ನನ್ನ ಜೀವನದಲ್ಲಿ ನಡೆದ ಈ ಘಟನೆ ಕೆಲವರಿಗೆ ಸ್ಫೂರ್ತಿಯಾಗುತ್ತದೆ ಎಂಬ ಕಾರಣಕ್ಕೆ ವಿಡಿಯೋ ಹಂಚಿಕೊಂಡಿದ್ದೇನೆ ಎಂದಿದ್ದಾರೆ.
ಇದನ್ನೂ ಓದಿ: ಸೇವ್ ಮೈಸೂರು ಎಂದ ದುನಿಯಾ ವಿಜಯ್, ಡಾಲಿ…!
Published On - 9:02 am, Wed, 26 May 21