ಬಾರ್​​​ನಲ್ಲಿ ಕಿರಿಕ್; ನಟ ನಿರಂಜನ್​ ಮೇಲೆ ಬಿಯರ್ ಬಾಟಲ್​​ನಿಂದ ಹಲ್ಲೆ

ನಟ ನಿರಂಜನ್ ಮೇಲೆ ಬೆಂಗಳೂರಿನ ಬಾರ್‌ನಲ್ಲಿ ಅಪರಿಚಿತರಿಂದ ಬಿಯರ್ ಬಾಟಲಿಯಿಂದ ಹಲ್ಲೆ ನಡೆದಿದೆ. ಮಾರ್ಚ್ 28ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. 'ಒಡೆಯ' ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದ ನಿರಂಜನ್, ನಟ ಎಂದು ಗೊತ್ತಾಗುತ್ತಿದ್ದಂತೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದಾರೆ.

ಬಾರ್​​​ನಲ್ಲಿ ಕಿರಿಕ್; ನಟ ನಿರಂಜನ್​ ಮೇಲೆ ಬಿಯರ್ ಬಾಟಲ್​​ನಿಂದ ಹಲ್ಲೆ
ನಿರಂಜನ್
Edited By:

Updated on: Apr 06, 2026 | 10:53 AM

ಕನ್ನಡ ಚಿತ್ರರಂಗದಲ್ಲಿ ಈಗತಾನೇ ಗುರುತಿಸಿಕೊಳ್ಳುತ್ತಿರುವ ನಟ ನಿರಂಜನ್ ಮೇಲೆ ಅಪರಿಚಿತ ವ್ಯಕ್ತಿಗಳು ಹಲ್ಲೆ ಮಾಡಿದ್ದಾರೆ. ಬೆಂಗಳೂರಿನ ಬಾರ್ ಒಂದರಲ್ಲಿ ನಡೆದ ಕಿರಿಕ್​ ಮಿತಿ ಮೀರಿದ್ದು, ಬಿಯರ್ ಬಾಟಲಿಯಿಂದ ನಟನ ಮೇಲೆ ಹಲ್ಲೆ ಮಾಡಲಾಗಿದೆ. ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ. ಮಾರ್ಚ್ 28ರಂದು ನಡೆದಿರುವ ಘಟನೆ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ದರ್ಶನ್ ಅಭಿನಯದ ‘ಒಡೆಯ’ (2019) ಸಿನಿಮಾದಲ್ಲಿ ನಿರಂಜನ್ ನಟಿಸಿದ್ದರು. ಈ ಸಿನಿಮಾದಲ್ಲಿ ದರ್ಶನ್ ಸಹೋದರನ ಪಾತ್ರದಲ್ಲಿ ಅವರು ಕಾಣಿಸಿಕೊಂಡರು. ಈ ಪಾತ್ರ ಅವರ ವೃತ್ತಿ ಜೀವನಕ್ಕೆ ಸಾಕಷ್ಟು ಮೈಲೇಜ್ ನೀಡಿತು. ಈಗ ಅವರು ವಿವಾದದ ಮೂಲಕ ಸುದ್ದಿ ಆಗಿದ್ದಾರೆ.

ಕೆಲಸದ ನಿಮಿತ್ತ ನಟ ಯಶಸ್ ಸೂರ್ಯ ನಿವಾಸಕ್ಕೆ ನಿರಂಜನ್ ತೆರಳಿದ್ದರು. ಭೇಟಿ ಬಳಿಕ ಮಂತ್ರಿ ಅಲೈಯನ್ಸ್ ಬಳಿಯ ಬಾರ್​ಗೆ ನಿರಂಜನ್ ಬಂದಿದ್ದರು. ನೀರು‌ ಕುಡಿಯಲೆಂದು ಬಾರ್​ಗೆ ಬಂದಿದ್ದಾಗಿ ನಿರಂಜನ್ ಹೇಳಿಕೊಂಡಿದ್ದಾರೆ. ಈ ವೇಳೆ ಬಾರ್​ ಅಲ್ಲಿ ಇದ್ದ ವ್ಯಕ್ತಿಯೋರ್ವ ನಿರಂಜನ್​ ತಳ್ಳಿದ್ದಕ್ಕೆ ಗಲಾಟೆ ಶುರುವಾಗಿದೆ.

ಇದನ್ನೂ ಓದಿ: ಇದು ದರ್ಶನ್ ಕಥೆ ಅಲ್ಲ: ‘ಬಾಸ್’ ಸಿನಿಮಾಗೆ ಸೆನ್ಸಾರ್ ಪ್ರಕ್ರಿಯೆ ಬಳಿಕ ನಿರ್ದೇಶಕರ ಸ್ಪಷ್ಟನೆ

ಈ ವೇಳೆ ನಿರಂಜನ್ ನಟ ಎಂಬ ವಿಷಯ ಅಪರಿಚಿತ ವ್ಯಕ್ತಿಗೆ ಗೊತ್ತಾಗಿದೆ. ‘ನೀನು ನಟನಾದರೆ ನನಗೇನು’ ಎಂದು ಅಪರಿಚಿತ ವ್ಯಕ್ತಿ ಬೈದಿದ್ದ. ಈ ವಿಷಯದ ಬಗ್ಗೆ ಬಾರ್ ಮಾಲೀಕರ ಜೊತೆ ಮಾತನಾಡುವಾಗ ಬಂದ ನಾಲ್ವರು ನಿರಂಜನ್​ ಜೊತೆ ಮತ್ತೆ ಕಿರಿಕ್ ಮಾಡಿಕೊಂಡಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಬಿಯರ್​ ಬಾಟಲಿಯಿಂದ ನಟನ ತಲೆಗೆ ಹೊಡೆದು ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಠಾಣೆಯಲ್ಲಿ ಎಫ್​ಐಆರ್​ ದಾಖಲಾಗಿದೆ.
2017ರ ‘ಜಲ್ಸಾ’ (2017) ಚಿತ್ರದ ಮೂಲಕ ನಿರಂಜನ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಕೆಲ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ‘ಒಡೆಯ’ ಚಿತ್ರದ ಪಾತ್ರಕ್ಕೆ ಮೆಚ್ಚುಗೆ ಸಿಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Follow Us