ರಾಜ್​ಕುಮಾರ್ ಸಿನಿಮಾ ಸಹಿಹಾಕಿದ ಬಳಿಕ ಬದಲಾಯ್ತು ಸುಧೀರ್ ಬದುಕು

1973ರ ‘ಬೀಸಿದ ಬಲೆ’ ಸಿನಿಮಾ ಮೂಲಕ ಸುಧೀರ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಏಳೆಂಟು ವರ್ಷಗಳಲ್ಲಿ ಕೆಲವೇ ಕೆಲವು ಸಿನಿಮಾ ಮಾಡಿದರು. 1981ರಲ್ಲಿ ರಿಲೀಸ್ ಆದ ರಾಜ್​ಕುಮಾರ್ ನಟನೆಯ ‘ನೀ ನನ್ನ ಗೆಲ್ಲಲಾರೆ’ ಹಾಗೂ ‘ಕೆರಳಿದ ಸಿಂಹ’ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿ ಅವರು ಗಮನ ಸೆಳೆದರು.

ರಾಜ್​ಕುಮಾರ್ ಸಿನಿಮಾ ಸಹಿಹಾಕಿದ ಬಳಿಕ ಬದಲಾಯ್ತು ಸುಧೀರ್ ಬದುಕು
ರಾಜ್​ಕುಮಾರ್ ಸಿನಿಮಾ ಸಹಿಹಾಕಿದ ಬಳಿಕ ಬದಲಾಯ್ತು ಸುಧೀರ್ ಬದುಕು

Updated on: Aug 24, 2024 | 12:48 PM

ನಟ ಸುಧೀರ್ ಅವರು ವಿಲನ್ ಪಾತ್ರಗಳ ಮೂಲಕ ಗಮನ ಸೆಳೆದವರು. ಅವರಿಗೆ ಬೇಡಿಕೆಯ ಖಳನಟನಾಗಿ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು. ಅವರ ಮಗ ತರುಣ್ ಈಗ ಚಿತ್ರರಂಗದ ಬೇಡಿಕೆಯ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಸುಧೀರ್ ಅವರ ಬದುಕು ಆರಂಭದಲ್ಲಿ ಸಾಮಾನ್ಯ ಕಲಾವಿದರ ರೀತಿಯೇ ಇತ್ತು. ಯಾವಾಗ ರಾಜ್​ಕುಮಾರ್ ಸಿನಿಮಾ ಸಹಿ ಹಾಕಿದರೋ ಅಲ್ಲಿಂದ ಅವರ ಬದುಕು ಬದಲಾಯ್ತು. ಈ ಬಗ್ಗೆ ಸುಧೀರ್ ಪತ್ನಿ ಮಾಲತಿ ಸುಧೀರ್ ಅವರು ಮಾತನಾಡಿದ್ದರು.

1973ರ ‘ಬೀಸಿದ ಬಲೆ’ ಸಿನಿಮಾ ಮೂಲಕ ಸುಧೀರ್ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ಆ ಬಳಿಕ ಏಳೆಂಟು ವರ್ಷಗಳಲ್ಲಿ ಕೆಲವೇ ಕೆಲವು ಸಿನಿಮಾ ಮಾಡಿದರು. 1981ರಲ್ಲಿ ರಿಲೀಸ್ ಆದ ರಾಜ್​ಕುಮಾರ್ ನಟನೆಯ ‘ನೀ ನನ್ನ ಗೆಲ್ಲಲಾರೆ’ ಹಾಗೂ ‘ಕೆರಳಿದ ಸಿಂಹ’ ಚಿತ್ರಗಳಲ್ಲಿ ವಿಲನ್ ಪಾತ್ರ ಮಾಡಿ ಅವರು ಗಮನ ಸೆಳೆದರು. ರಾಜ್​ಕುಮಾರ್ ಜೊತೆ ಸುಧೀರ್ ನಟಿಸಬೇಕು ಎಂಬುದು ಪತ್ನಿ ಮಾಲತಿ ಅವರ ಆಸೆಯೂ ಆಗಿತ್ತು.

ರಾಜ್​ಕುಮಾರ್ ಸಿನಿಮಾದಲ್ಲಿ ನನ್ನ ಪತಿ ನಟಿಸಬೇಕಿತ್ತು ಎಂಬುದು ನನ್ನ ಆಸೆ ಆಗಿತ್ತು. ‘ರಾಘವೇಂದ್ರ ಸ್ವಾಮಿ ಇದಾನೆ ಬಿಡು’ ಎಂದು ಸುಧೀರ್ ಅವರು ಮಾಲತಿಗೆ ಹೇಳಿದ್ದರು. ದೇವರ ಮೇಲೆ ಮಾಲತಿಗೆ ಅಷ್ಟಾಗಿ ನಂಬಿಕೆ ಇರಲಿಲ್ಲ. ಹೀಗಾಗಿ, ಈ ಮಾತನ್ನು ಅವರು ಗಂಭೀರವಾಗಿ ಸ್ವೀಕರಿಸಿರಲಿಲ್ಲ. ಆದರೆ ಒಂದು ದಿನ ಚಮತ್ಕಾರ ನಡೆಯಿತು.

ರಾಯರ ವಾರ ಗುರುವಾರವೇ ರಾಜ್​ಕುಮಾರ್ ಅವರು ಸುಧೀರ್ ಮನೆಗೆ ಬಂದರು. ಕಾರು ಬಂದು ನಿಂತಿದ್ದು ನೋಡಿದ ಮಾಲತಿ ಅವರು ಹೋಗಿ ನೋಡಿದರೆ ರಾಜ್​ಕುಮಾರ್ ಹಾಗೂ ಪಾರ್ವತಮ್ಮ ಕಾರಲ್ಲಿ ಇದ್ದಿದ್ದರು. ‘ಸುಧೀರ್​ಗೆ ಬರೋಕೆ ಹೇಳು. ಇಲ್ಲೇ ವರದಣ್ಣವರ ಮನೆಯಲ್ಲಿ ಇರುತ್ತೇನೆ’ ಎಂದು ಹೇಳಿ ರಾಜ್​ಕುಮಾರ್ ಅವರು ತೆರಳಿದ್ದರು. ಅಲ್ಲಿ ಮಾತನಾಡಿದರು. ಆ ಬಳಿಕ ಕಚೇರಿಗೆ ಬರೋಕೆ ಹೇಳಿದ್ದರು.

ಇದನ್ನೂ ಓದಿ: ತರುಣ್​-ಸೋನಲ್​ ಮದುವೆಗೆ ಚಂದದ ಸೀರೆ ಧರಿಸಿ ಬಂದ ಆಶಿಕಾ ರಂಗನಾಥ್

ಕಚೇರಿಗೆ ಹೋದರೆ ಸುಧೀರ್ ಅವರಿಗೆ ‘ನೀ ನನ್ನ ಗೆಲ್ಲಲಾರೆ’ ಹಾಗೂ ‘ಕೆರಳಿದ ಸಿಂಹ’ದಲ್ಲಿ ನಟಿಸಿದ್ದರು. ಇದರಿಂದ ಅವರ ಬದುಕು ಸಂಪೂರ್ಣವಾಗಿ ಬದಲಾಗಿತ್ತು. ಈ ವಿಚಾರವನ್ನು ಮಾಲತಿ ಅವರೇ ಹೇಳಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಾಜೇಶ್ ದುಗ್ಗುಮನೆ

ರಾಜೇಶ್​ ಹೆಗಡೆಯವರು ಪತ್ರಿಕೋದ್ಯಮಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us