ಅಭಿಮಾನಿಯ ಕಾಲ ಮೇಲೆ ಹರಿಯಿತು ಯಶ್ ಬೆಂಗಾವಲು ಪಡೆ ವಾಹನ

| Updated By: ರಾಜೇಶ್ ದುಗ್ಗುಮನೆ

Updated on: Feb 29, 2024 | 2:35 PM

Yash in Amrutheshwara Temple: ಬಳ್ಳಾರಿಯ ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನ ಉದ್ಘಾಟನೆ ನಡೆದಿದೆ. ಇಲ್ಲಿಗೆ ಯಶ್ ಆಗಮಿಸಿದ್ದಾರೆ. ಯಶ್ ಬರುತ್ತಾರೆ ಎನ್ನುವ ಸುದ್ದಿ ತಿಳಿದು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಯಶ್ ಅವರನ್ನು ಬೆನ್ನುಹತ್ತಿ ಬಂದಿದ್ದರು ಫ್ಯಾನ್ಸ್. ಈ ವೇಳೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ಬೆಂಗಾವಲು ಪಡೆಯ ವಾಹನ ಹರಿದಿದೆ.

ಅಭಿಮಾನಿಯ ಕಾಲ ಮೇಲೆ ಹರಿಯಿತು ಯಶ್ ಬೆಂಗಾವಲು ಪಡೆ ವಾಹನ
ಯಶ್
Follow us on

ನಟ ಯಶ್ (Yash) ಅವರು ಎಲ್ಲೇ ಹೋದರು ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಅವರ ಜೊತೆ ಸೆಲ್ಫಿಗಾಗಿ ಹಾತೊರೆಯುತ್ತಾರೆ. ಈ ರೀತಿಯ ಅನೇಕ ಘಟನೆಗಳು ನಡೆದಿವೆ. ಯಶ್ ಬರ್ತ್​​ಡೇ ದಿನ ನಡೆದ ದುರ್ಘಟನೆಯ ಕಹಿ ನೆನಪು ಹಸಿಯಾಗಿ ಇರುವಾಗಲೇ ಮತ್ತೊಂದು ಅಂಥದ್ದೇ ಘಟನೆ ನಡೆದಿದೆ. ನಟ ಯಶ್​ ಬೆಂಗಾವಲು ವಾಹನ ಹರಿದು ಅಭಿಮಾನಿಗೆ ಗಾಯ ಆಗಿದೆ. ಬಳ್ಳಾರಿಯ ಹೊರವಲಯದ ಬಾಲಾಜಿ ಕ್ಯಾಂಪ್​ನಲ್ಲಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಇಂದು ಬಳ್ಳಾರಿಯ ಅಮೃತೇಶ್ವರ ಸ್ಫಟಿಕ ಲಿಂಗ ದೇವಸ್ಥಾನ ಉದ್ಘಾಟನೆ ನಡೆದಿದೆ. ಇಲ್ಲಿಗೆ ಯಶ್ ಆಗಮಿಸಿದ್ದಾರೆ. ಯಶ್ ಬರುತ್ತಾರೆ ಎನ್ನುವ ಸುದ್ದಿ ತಿಳಿದು ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದರು. ಯಶ್ ಅವರನ್ನು ಬೆನ್ನುಹತ್ತಿ ಬಂದಿದ್ದರು ಫ್ಯಾನ್ಸ್. ಈ ವೇಳೆ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ಪಟ್ಟಣದ ವಸಂತ ಎಂಬ ಯುವಕನ ಕಾಲಿನ ಮೇಲೆ ಬೆಂಗಾವಲು ಪಡೆಯ ವಾಹನ ಹರಿದಿದೆ. ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ.

ಇದನ್ನೂ ಓದಿ: ಯಶ್, ರಾಮ್ ಚರಣ್ ಬಳಿಕ ವಿಜಯ್ ದೇವರಕೊಂಡ ಪಾಲಾದ ನರ್ತನ್ ಕತೆ

ಗದಗದ ಕಹಿ ಘಟನೆ

ಜನವರಿ 8ರಂದು ಯಶ್​ ಹುಟ್ಟಿದ ದಿನ. ಅದಕ್ಕೂ ಒಂದು ದಿನ ಮೊದಲು ಅಂದರೆ ಜನವರಿ 7ರಂದು ಕಹಿ ಘಟನೆ ಒಂದು ನಡೆದಿತ್ತು. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಯಶ್ ಕಟೌಟ್ ನಿಲ್ಲಿಸುವಾಗ ಕಬ್ಬಿಣದ ರಾಡ್ ವಿದ್ಯುತ್ ತಂತಿಗೆ ತಗುಲಿ ಮೂವರು ಫ್ಯಾನ್ಸ್ ಮೃತಪಟ್ಟಿದ್ದರು. ಕೆಲವರಿಗೆ ಗಾಯಗಳಾಗಿತ್ತು. ಸ್ವತಃ ಯಶ್ ಅವರು ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಈ ಘಟನೆಯ ಕಹಿ ನೆನಪು ಮಾಸುವ ಮೊದಲೇ ಮತ್ತೊಂದು ಅಂಥದ್ದೇ ಘಟನೆ ನಡೆದಿದೆ. ಯಾರಿಗೂ ಪ್ರಾಣಾಪಾಯ ಆಗಿಲ್ಲ ಅನ್ನೋದು ಖುಷಿಯ ವಿಚಾರ.

ಸಿನಿಮಾ ಕೆಲಸ

ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರವನ್ನು ಮಲಯಾಳಂನ ಗೀತು ಮೋಹನ್​ದಾಸ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ಶೀಘ್ರವೇ ಆರಂಭ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 2:33 pm, Thu, 29 February 24