AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯಶ್, ರಾಮ್ ಚರಣ್ ಬಳಿಕ ವಿಜಯ್ ದೇವರಕೊಂಡ ಪಾಲಾದ ನರ್ತನ್ ಕತೆ

Narthan: ‘ಮಫ್ತಿ’ ನಿರ್ದೇಶಕ ನರ್ತನ್ ಈ ಹಿಂದೆ ಯಶ್​ಗೆ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಅದಾದ ಬಳಿಕ ರಾಮ್ ಚರಣ್ ಗೆ ಸಿನಿಮಾ ಮಾಡ್ತಾರೆ ಎಂಬ ಸುದ್ದಿ ಹರಿದಾಡಿತು. ಇದೀಗ ಮತ್ತೊಬ್ಬ ಹೀರೋಗೆ ಕತೆ ಹೇಳಿದ್ದಾರಂತೆ.

ಯಶ್, ರಾಮ್ ಚರಣ್ ಬಳಿಕ ವಿಜಯ್ ದೇವರಕೊಂಡ ಪಾಲಾದ ನರ್ತನ್ ಕತೆ
ಮಂಜುನಾಥ ಸಿ.
|

Updated on: Feb 27, 2024 | 7:10 PM

Share

‘ಮಫ್ತಿ’ (Mufti) ಸಿನಿಮಾ ನಿರ್ದೇಶಿಸಿದ್ದ ನರ್ತನ್ (Narthan), ಯಶ್​ಗಾಗಿ ಸಿನಿಮಾ ಮಾಡಲಿದ್ದಾರೆ ಎಂದು ಜೋರು ಸುದ್ದಿ ಹರಿದಾಡಿತ್ತು. ತಾವು ಯಶ್​ಗಾಗಿ ಕತೆ ಮಾಡುತ್ತಿರುವುದಾಗಿ ಸ್ವತಃ ನರ್ತನ್ ಹೇಳಿದ್ದರು. ಯಶ್​ಗಾಗಿ ಕತೆಯನ್ನು ಸಹ ರೆಡಿ ಮಾಡಿದ್ದರು ಆದರೆ ಅದೇಕೋ ಸಿನಿಮಾ ಸೆಟ್ಟೇರಲಿಲ್ಲ. ಕತೆಯ ಕೆಲವು ಅಂಶಗಳು ಯಶ್​ಗೆ ಹಿಡಿಸಲಿಲ್ಲವಾದ್ದರಿಂದ ಸಿನಿಮಾ ಕೈಬಿಟ್ಟಿದ್ದಾಗಿ ಹೇಳಲಾಗಿತ್ತು. ಬಳಿಕ ಅದೇ ಕತೆಯನ್ನು ತೆಲುಗಿನ ರಾಮ್​ ಚರಣ್​ಗಾಗಿ ಸ್ವತಃ ನರ್ತನ್ ನಿರ್ದೇಶನ ಮಾಡಲಿದ್ದಾರೆ ಎಂಬ ಸುದ್ದಿಗಳು ಕೇಳಿ ಬಂದಿತ್ತು. ಆದರೆ ಈಗ ಮತ್ತೊಮ್ಮೆ ನಾಯಕ ಬದಲಾಗಿದ್ದಾರೆ.

ನರ್ತನ್, ರಾಮ್ ಚರಣ್​ಗಾಗಿ ಸಿನಿಮಾ ಮಾಡುವುದು ಬಹುತೇಕ ಖಾತ್ರಿಯಾಗಿತ್ತು. ನರ್ತನ್, ರಾಮ್ ಚರಣ್​ಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದಾಗಲಂತೂ ಇಬ್ಬರೂ ಸಿನಿಮಾ ಮಾಡುತ್ತಿರುವುದು ಖಾತ್ರಿ ಎಂದೇ ಹೇಳಲಾಗಿತ್ತು. ಆದರೆ ಈಗ ಮತ್ತೆ ನರ್ತನ್ ಸಿನಿಮಾದ ನಾಯಕ ಬದಲಾಗಿದ್ದಾರೆ. ‘ಆರ್​ಆರ್​ಆರ್’ ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ರಾಮ್ ಚರಣ್ ರ ಸಿನಿಮಾ ಆದ್ಯತೆಗಳು ಬದಲಾಗಿದ್ದು, ಅವರೀಗ ನರ್ತನ್ ಜೊತೆ ಸಿನಿಮಾ ಮಾಡುತ್ತಿಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ಭೈರತಿ ರಣಗಲ್’ ಚಿತ್ರಕ್ಕೆ ಶೂಟಿಂಗ್ ಶುರು; ನರ್ತನ್-ಶಿವಣ್ಣ ಕಾಂಬಿನೇಷನ್ ಬಗ್ಗೆ ಇದೆ ನಿರೀಕ್ಷೆ

ನರ್ತನ್ ಅವರು ಯಶ್​ಗಾಗಿ ಮಾಡಿದ್ದ ಕತೆಯನ್ನೇ ರಾಮ್​ ಚರಣ್​ಗೆ ಹೇಳಿದ್ದರು. ಯುವಿ ಕ್ರಿಯೇಶನ್ಸ್​ನವರು ಸಿನಿಮಾಕ್ಕೆ ಬಂಡವಾಳ ಹೂಡಲಿದ್ದಾರೆ ಎನ್ನಲಾಗಿತ್ತು. ಆದರೆ ರಾಮ್ ಚರಣ್ ಬೇರೆ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿಯಾಗಿರುವ ಕಾರಣ ನರ್ತನ್ ಜೊತೆಗಿನ ಸಿನಿಮಾದಿಂದ ಹೊರಗೆ ಬಂದಿದ್ದಾರೆ. ಇದೀಗ ಅದೇ ಕತೆಯನ್ನು ವಿಜಯ್ ದೇವರಕೊಂಡ ಅವರಿಗೆ ಸಿನಿಮಾ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ದೇವರಕೊಂಡಗೆ ನರ್ತನ್ ಕತೆ ಹೇಳಿದ್ದು ಎಲ್ಲವೂ ಓಕೆ ಆಗಿದೆ. ಸಿನಿಮಾವನ್ನು ಯುವಿ ಕ್ರಿಯೇಶನ್ಸ್​ನವರೇ ನಿರ್ಮಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ನರ್ತನ್ ಪ್ರಸ್ತುತ ಶಿವರಾಜ್ ಕುಮಾರ್ ನಟಿಸುತ್ತಿರುವ ‘ಭೈರತಿ ರಣಗಲ್’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್​ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಬಹುತೇಕ ಪೂರ್ಣವಾಗಿದೆ. ಸಿನಿಮಾವನ್ನು ಶಿವಣ್ಣ ಅವರ ಹೋಮ್ ಬ್ಯಾನರ್​ನಲ್ಲಿ ನಿರ್ಮಿಸಲಾಗಿದೆ. ಸಿನಿಮಾದಲ್ಲಿ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ‘ಮಫ್ತಿ’ ಸಿನಿಮಾದ ಭೈರತಿ ರಣಗಲ್ ಪಾತ್ರವನ್ನೇ ಮುಖ್ಯವಾಗಿರಿಸಿಕೊಂಡು ಈ ಸಿನಿಮಾ ಮಾಡಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ರಾಜಶೇಖರ್​​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ: ಸಚಿವ ಜಮೀರ್ ವಿರುದ್ಧ ದೂರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಪ್ರಸಿದ್ಧ ಆಭರಣ ಮಳಿಗೆಯಲ್ಲಿ 14 ಲಕ್ಷದ ಜ್ಯುವೆಲರಿ ಕದ್ದ ಮಹಿಳೆಯರು
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಗುಡ್ ಲಕ್; ಸಿದ್ದರಾಮಯ್ಯಗೆ ಡಿಸಿಎಂ ಡಿಕೆ ಶಿವಕುಮಾರ್ ಅಭಿನಂದನೆ
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಅರ್ಧಶತಕ ಬಾರಿಸಿಯೂ ತಂಡವನ್ನು ಗೆಲ್ಲಿಸದ ವಾರ್ನರ್
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ಸಾಕ್ಷಿ ನಾಶ ಹಿನ್ನೆಲೆ ರಾಜಶೇಖರ್​ ಶವ ಸುಟ್ಟು ಹಾಕಿದ್ದಾರೆ ಎಂದ ಶ್ರೀರಾಮುಲು
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ರಕ್ಷಿತಾ ಬೆಂಬಲಕ್ಕೆ ಬಂದ ಗಿಲ್ಲಿ, ರಾಶಿಕಾ ಜೊತೆ ಜಗಳ: ವಿಡಿಯೋ
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ಸಿದ್ದರಾಮಯ್ಯ ಇಲ್ಲ ಅಂದ್ರೆ ಕಾಂಗ್ರೆಸ್ ಪಕ್ಷ ಇಲ್ಲ: ರಾಜಣ್ಣ ಖಡಕ್​​ ಮಾತು
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ರಾಜಶೇಖರ್​ ತಾಯಿಗೆ ಡಿಕೆ ಶಿವಕುಮಾರ್​ ಸಾಂತ್ವನ: ಸರ್ಕಾರದಿಂದ ನೆರವು ಭರವಸೆ
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಸನ್​ರೂಫ್ ಬಳಿ ನಿಂತು ಕೈ ಬೀಸುತ್ತಿದ್ದಾಗ ಬ್ರೇಕ್ ಹಾಕಿದ ಕಾರು
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​
ಡ್ರಗ್ಸ್​ ದಂಧೆಕೋರರಿಗೆ ಶಾಕ್​: 3 ಕೆ.ಜಿ. MDMA ಸೀಜ್​, ಇಬ್ಬರು ಅರೆಸ್ಟ್​