‘ಭೈರತಿ ರಣಗಲ್’ ಚಿತ್ರಕ್ಕೆ ಶೂಟಿಂಗ್ ಶುರು; ನರ್ತನ್-ಶಿವಣ್ಣ ಕಾಂಬಿನೇಷನ್ ಬಗ್ಗೆ ಇದೆ ನಿರೀಕ್ಷೆ

‘ಭೈರತಿ ರಣಗಲ್’ ಸಿನಿಮಾ ‘ಮಫ್ತಿ’ ಪ್ರೀಕ್ವೆಲ್ ಆಗಿ ಮೂಡಿ ಬರಲಿದೆ. ಭೈರತಿ ರಣಗಲ್ ಹೇಗಿದ್ದ? ಆತನ ಹಿನ್ನೆಲೆ ಏನು ಎಂಬುದು ಈ ಸಿನಿಮಾದಲ್ಲಿ ತಿಳಿಯಲಿದೆ.

‘ಭೈರತಿ ರಣಗಲ್’ ಚಿತ್ರಕ್ಕೆ ಶೂಟಿಂಗ್ ಶುರು; ನರ್ತನ್-ಶಿವಣ್ಣ ಕಾಂಬಿನೇಷನ್ ಬಗ್ಗೆ ಇದೆ ನಿರೀಕ್ಷೆ
ನರ್ತನ್-ಶಿವಣ್ಣ
Follow us
Mangala RR
| Updated By: ರಾಜೇಶ್ ದುಗ್ಗುಮನೆ

Updated on: Aug 02, 2023 | 2:29 PM

ನಟ ಶಿವರಾಜ್​ಕುಮಾರ್ (Shivarjkumar) ಹಾಗೂ ನಿರ್ದೇಶಕ ನರ್ತನ್ ಕಾಂಬಿನೇಷನ್​ನಲ್ಲಿ ಮೂಡಿಬಂದ ‘ಮಫ್ತಿ’ ಸಿನಿಮಾ (Mufti Movie) ಸೂಪರ್ ಹಿಟ್ ಆಯಿತು. ಈ ಚಿತ್ರದಲ್ಲಿ ಭೈರತಿ ರಣಗಲ್ ಹೆಸರಿನ ಪಾತ್ರ ಮಾಡುವ ಮೂಲಕ ಶಿವರಾಜ್​ಕುಮಾರ್ ಗಮನ ಸೆಳೆದರು. ಈಗ ಇವರ ಕಾಂಬಿನೇಷನ್​ನಲ್ಲಿ ‘ಭೈರತಿ ರಣಗಲ್’ ಸಿನಿಮಾ ಮೂಡಿಬರುತ್ತಿದೆ. ಕೆಲ ತಿಂಗಳ ಹಿಂದೆ ಈ ಚಿತ್ರಕ್ಕೆ ಮುಹೂರ್ತ ನೆರವೇರಿತ್ತು. ಇಂದು (ಆಗಸ್ಟ್ 2) ಚಿತ್ರಕ್ಕೆ ಶೂಟಿಂಗ್ ಆರಂಭ ಆಗಿದೆ. ಸಿನಿಮಾ ಯಾವಾಗ ರಿಲೀಸ್ ಆಗಲಿದೆ ಎನ್ನುವ ನಿರೀಕ್ಷೆ ಅಭಿಮಾನಿಗಳಲ್ಲಿ ಮೂಡಿದೆ.

2017ರಲ್ಲಿ ‘ಮಫ್ತಿ’ ಸಿನಿಮಾ ರಿಲೀಸ್ ಆಯಿತು. ಶ್ರೀಮುರಳಿ ಹಾಗೂ ಶಿವಣ್ಣ ಕಾಂಬಿನೇಷನ್ ಕೆಲಸ ಮಾಡಿತು. ಈ ಚಿತ್ರದ ಮೊದಲಾರ್ಧದಲ್ಲಿ ಶ್ರೀಮುರಳಿ ಹೈಲೈಟ್ ಆದರೆ, ಎರಡನೇ ಭಾಗದಲ್ಲಿ ಶಿವರಾಜ್​ಕುಮಾರ್ ಪಾತ್ರ ಗಮನ ಸೆಳೆದಿತ್ತು. ‘ಭೈರತಿ ರಣಗಲ್’ ಸಿನಿಮಾ ‘ಮಫ್ತಿ’ ಪ್ರೀಕ್ವೆಲ್ ಆಗಿ ಮೂಡಿ ಬರಲಿದೆ. ಭೈರತಿ ರಣಗಲ್ ಹೇಗಿದ್ದ? ಆತನ ಹಿನ್ನೆಲೆ ಏನು ಎಂಬುದು ಈ ಸಿನಿಮಾದಲ್ಲಿ ತಿಳಿಯಲಿದೆ.

‘ಗೀತಾ ಪಿಕ್ಚರ್ಸ್’ ಮೂಲಕ ಗೀತಾ ಶಿವರಾಜ್​ಕುಮಾರ್ ಅವರು ‘ಭೈರತಿ ರಣಗಲ್’ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಇವರ ಪ್ರೊಡಕ್ಷನ್ ಹೌಸ್​ನ ಚೊಚ್ಚಲ ಸಿನಿಮಾ ‘ವೇದ’ ಮೆಚ್ಚುಗೆ ಪಡೆಯಿತು. ಇದು ಶಿವರಾಜ್​ಕುಮಾರ್ ನಟನೆಯ 125ನೇ ಸಿನಿಮಾ ಎಂಬ ಕಾರಣಕ್ಕೂ ವಿಶೇಷ ಎನಿಸಿಕೊಂಡಿದೆ. ‘ಭೈರತಿ ರಣಗಲ್’ ಶೂಟಿಂಗ್ ಬೇಗ ಪೂರ್ಣಗೊಳಿಸಿ ಸಿನಿಮಾನ ಆದಷ್ಟು ಬೇಗೆ ತೆರೆಗೆ ತರುವ ಆಲೋಚನೆ ಚಿತ್ರತಂಡದ್ದು. ‘ಮಫ್ತಿ’ ಚಿತ್ರದ ಪ್ರೀಕ್ವೆಲ್ ಆಗಿ ‘ಭೈರತಿ ರಣಗಲ್’ ಸಿನಿಮಾ ಮೂಡಿಬರುತ್ತಿರುವುದರಿಂದ ಪಾತ್ರವರ್ಗದಲ್ಲಿ ಬದಲಾವಣೆ ಆಗಲಿದೆ. ಶ್ರೀಮುರಳಿ ಅವರು ಈ ಚಿತ್ರದಲ್ಲಿ ನಟಿಸುತ್ತಿಲ್ಲ ಎನ್ನುವ ವಿಚಾರವನ್ನು ನಿರ್ದೇಶಕ ನರ್ತನ್ ಅವರು ಈ ಮೊದಲೇ ಖಚಿತಪಡಿಸಿದ್ದರು.

ಇದನ್ನೂ ಓದಿ: ನಂದಿನಿ ಉತ್ಪನ್ನಗಳ ರಾಯಭಾರಿ ಆದ ನಟ ಶಿವರಾಜ್​ಕುಮಾರ್

ಶಿವರಾಜ್​ಕುಮಾರ್ ಅವರು ಹಲವು ಸಿನಿಮಾ ಕೆಲಸಗಳಲ್ಲಿ ನಟಿಸುತ್ತಿದ್ದಾರೆ. ರಜನಿಕಾಂತ್​-ಶಿವಣ್ಣ ಒಟ್ಟಾಗಿ ನಟಿಸಿದ ತಮಿಳು ಸಿನಿಮಾ ‘ಜೈಲರ್​’ ಆಗಸ್ಟ್ 10ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಶಿವರಾಜ್​ಕುಮಾರ್ ಪಾತ್ರ 10 ನಿಮಿಷ ಇರಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ