‘ನಮ್ಮ ಕಂದಮ್ಮನ ಮೇಲೆ ಆಶೀರ್ವಾದ ಇರಲಿ’; ಮೊದಲ ಬಾರಿಗೆ ಮಕ್ಕಳ ಮುಖ ರಿವೀಲ್ ಮಾಡಿದ ಅಮೂಲ್ಯ

| Updated By: ರಾಜೇಶ್ ದುಗ್ಗುಮನೆ

Updated on: Aug 19, 2022 | 6:38 PM

ಮಗು ಜನಿಸಿದ ನಂತರ ಅವರು ಸಾಮಾಜಿಕ ಜಾಲತಾಣದಿಂದ ಒಂದು ಬ್ರೇಕ್ ತೆಗೆದುಕೊಂಡಿದ್ದರು. ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ.

‘ನಮ್ಮ ಕಂದಮ್ಮನ ಮೇಲೆ ಆಶೀರ್ವಾದ ಇರಲಿ’; ಮೊದಲ ಬಾರಿಗೆ ಮಕ್ಕಳ ಮುಖ ರಿವೀಲ್ ಮಾಡಿದ ಅಮೂಲ್ಯ
ಅಮೂಲ್ಯ ಚಿತ್ರ ಕೃಪೆ: ಇನ್​ಸ್ಟಾಗ್ರಾಮ್
Follow us on

ನಟಿ ಅಮೂಲ್ಯ (Amulya) ಅವರಿಗೆ ಕಳೆದ ಕೆಲ ತಿಂಗಳ ಹಿಂದೆ ಅವಳಿ ಮಕ್ಕಳು ಜನಿಸಿದ್ದವು. ಮಗುವಿನ ಮುಖ ತೋರಿಸಿ ಎಂಬ ಒತ್ತಾಯ ಅಭಿಮಾನಿಗಳ ಕಡೆಯಿಂದ ಬಂದಿತ್ತು. ಆದರೆ, ನಟಿ ಅಮೂಲ್ಯ ಅವರು ಮಕ್ಕಳ ಫೋಟೋ ಹಂಚಿಕೊಂಡಿರಲಿಲ್ಲ. ಈಗ ಇದೇ ಮೊದಲ ಬಾರಿಗೆ ಅವಳಿ ಮಕ್ಕಳ ಮುಖವನ್ನು ರಿವೀಲ್ ಮಾಡಿದ್ದಾರೆ. ರೀಲ್ಸ್ ಮೂಲಕ ಮಕ್ಕಳ ಮುಖವನ್ನು ಫ್ಯಾನ್ಸ್​ಗೆ ತೋರಿಸಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಪ್ರೀತಿಯ ಕಮೆಂಟ್​ಗಳು ಬರುತ್ತಿವೆ.

ಅಮೂಲ್ಯ ಅವರು ಮೊದಲಿನಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಪ್ರೆಗ್ನೆಂಟ್ ಆಗಿದ್ದ ಸಂದರ್ಭದ ಹಲವು ಫೋಟೋಗಳನ್ನು ಅವರು ಹಂಚಿಕೊಂಡಿದ್ದರು. ಮಗು ಜನಿಸಿದ ನಂತರ ಅವರು ಸಾಮಾಜಿಕ ಜಾಲತಾಣದಿಂದ ಒಂದು ಬ್ರೇಕ್ ತೆಗೆದುಕೊಂಡಿದ್ದರು. ಈಗ ಅವರು ಸೋಶಿಯಲ್ ಮೀಡಿಯಾದಲ್ಲಿ ಮತ್ತೆ ಆ್ಯಕ್ಟೀವ್ ಆಗಿದ್ದಾರೆ. ಹೊಸಹೊಸ ಫೋಟೋಗಳ ಮೂಲಕ ಅವರು ಗಮನ ಸೆಳೆಯುತ್ತಿದ್ದಾರೆ. ಈಗ ಅವರು ಮಗುವಿನ ಫೋಟೋ ತೋರಿಸಿದ್ದಾರೆ.

ಇದನ್ನೂ ಓದಿ
Amulya: ನಟಿ ಅಮೂಲ್ಯ ಜೀವನ ಬದಲಿಸಿದ ‘ಚೆಲುವಿನ ಚಿತ್ತಾರ’ ಸಿನಿಮಾಗೆ 15 ವರ್ಷ; ನೆನಪಿನ ಪುಟ ತೆರೆದ ಐಸೂ
ಹೊಸ ಫೋಟೋಶೂಟ್​ನಲ್ಲಿ ಮಿಂಚಿದ ನಟಿ ಅಮೂಲ್ಯ; ಸಂತೂರ್ ಮಮ್ಮಿ ಎಂದ ಫ್ಯಾನ್ಸ್
ಮಗುವಿನ ಜತೆ ಮೊದಲ ಬಾರಿ ಫೋಟೋ ಹಂಚಿಕೊಂಡ ನಟಿ ಅಮೂಲ್ಯ; ಆದ್ರೂ ಫ್ಯಾನ್ಸ್ ಬೇಸರ
Amulya: ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ ಅಮೂಲ್ಯ; ಸಂತಸ ಹಂಚಿಕೊಂಡ ನಟಿಯ ಪತಿ ಜಗದೀಶ್

ಅಮೂಲ್ಯ ಅವರು ಫಿಟ್​ನೆಸ್​ಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಈ ಕಾರಣಕ್ಕೆ ಜಿಮ್ ಹಾಗೂ ಯೋಗ ಮಾಡುತ್ತಾರೆ. ಮಗು ಜನಿಸಿದ ಕೆಲವೇ ತಿಂಗಳ ಬಳಿಕ ಅವರು ಫಿಟ್ ಆಗಿ ಕಾಣಿಸಿಕೊಂಡಿದ್ದರು. ಅಮೂಲ್ಯ ಫೋಟೋ ನೋಡಿ ಅವರ ಫ್ಯಾನ್ಸ್ ಅಚ್ಚರಿ ಹೊರಹಾಕಿದ್ದರು.

ಅಮೂಲ್ಯ ಅವರು ಸಿನಿಮಾ ರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಇತ್ತೀಚೆಗೆ ಅವರು ನಟನೆಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಅವರು ಇನ್ನು ಕೆಲ ವರ್ಷ ಮಕ್ಕಳ ಆರೈಕೆಯಲ್ಲಿ ಬ್ಯುಸಿ ಆಗಲಿದ್ದಾರೆ.

‘ಗುರು ಶಿಷ್ಯರು’ ಸಿನಿಮಾದಲ್ಲಿ ಶರಣ್​ ಹಾಗೂ ನಿಶ್ವಿಕಾ ನಾಯ್ಡು ಅವರು ಜೋಡಿಯಾಗಿ ನಟಿಸಿದ್ದಾರೆ. ಈ ಸಿನಿಮಾ ‘ಆಣೆ ಮಾಡಿ ಹೇಳುತೀನಿ ನಾನು ನಿನ್ನವಳು..’ ಹಾಡು ಜನಮನ ಗೆದ್ದಿದೆ. ಯೂಟ್ಯೂಬ್​ನಲ್ಲಿ ಈ ಹಾಡು ಈವರೆಗೂ 25 ಲಕ್ಷಕ್ಕಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಅಜನೀಶ್​ ಬಿ. ಲೋಕನಾಥ್​ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದ ಈ ಗೀತೆ ಸೂಪರ್​ ಹಿಟ್​ ಆಗಿದೆ. ಅದೇ ಹಾಡನ್ನು ಆಯ್ಕೆ ಮಾಡಿಕೊಂಡು ಅಮೂಲ್ಯ ಇತ್ತೀಚೆಗೆ ರೀಲ್ಸ್ ಮಾಡಿದ್ದರು.

Published On - 6:30 pm, Fri, 19 August 22