ಏನ್ ಸಖತ್ ಆಗಿ ಮಿಮಿಕ್ರಿ ಮಾಡ್ತಾರೆ ನೋಡಿ ರಚಿತಾ ರಾಮ್: ಈ ಟ್ಯಾಲೆಂಟ್​ನ ನೋಡಿದ್ದೀರಾ?

Rachita Ram: ರಚಿತಾ ರಾಮ್ ತಮ್ಮ ಒಳ್ಳೆಯ ನಟನೆಯ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. ಆದರೆ, ಅವರಲ್ಲಿ ಮಿಮಿಕ್ರಿ ಮಾಡುವ ಟ್ಯಾಲೆಂಟ್ ಕೂಡ ಎಂಬುದು ನಿಮಗೆ ತಿಳಿದಿದೆಯೇ? ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋ ನೋಡಿ ಸ್ವತಃ ಅವರ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ಏನ್ ಸಖತ್ ಆಗಿ ಮಿಮಿಕ್ರಿ ಮಾಡ್ತಾರೆ ನೋಡಿ ರಚಿತಾ ರಾಮ್: ಈ ಟ್ಯಾಲೆಂಟ್​ನ ನೋಡಿದ್ದೀರಾ?
Rachita Ram
Edited By:

Updated on: May 18, 2025 | 10:17 PM

ಕನ್ನಡದ ನಟಿ ರಚಿತಾ ರಾಮ್ (Rachita Ram) ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅವರು ನಟನೆ ಮಾಡುತ್ತಾರೆ ಅನ್ನೋದು ಎಲ್ಲರಿಗೂ ಗೊತ್ತು. ಅವರು ನಟನೆಯ ಮೂಲಕ ಸಾಕಷ್ಟು ಗಮನ ಸೆಳೆದಿದ್ದಾರೆ. ಆದರೆ, ಅವರಲ್ಲಿ ಮಿಮಿಕ್ರಿ ಮಾಡುವ ಟ್ಯಾಲೆಂಟ್ ಕೂಡ ಎಂಬುದು ನಿಮಗೆ ತಿಳಿದಿದೆಯೇ? ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋ ನೋಡಿ ಸ್ವತಃ ಅವರ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.

ರಚಿತಾ ರಾಮ್ ಅವರು ಕನ್ನಡ ಚಿತ್ರರಂಗದಲ್ಲಿ ಬರೋಬ್ಬರಿ 12 ವರ್ಷಗಳನ್ನು ಪೂರೈಸಿದ್ದಾರೆ. ಇಷ್ಟು ವರ್ಷಗಳ ಅವಧಿಯಲ್ಲಿ ರಚಿತಾ ರಾಮ್ ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ನಿಜ ಹೇಳಬೇಕು ಎಂದರೆ ಅವರು ನಟಿಸಿದ ಮೊದಲ ಸಿನಿಮಾ ‘ಬುಲ್ ಬುಲ್’ ಸೂಪರ್ ಹಿಟ್ ಆಯಿತು. ದರ್ಶನ್ ಜೊತೆ ಅವರು ನಟಿಸಿ ಗಮನ ಸೆಳೆದರು. ರಚಿತಾ ರಾಮ್ ಅವರು ಕನ್ನಡದ ಬೇಡಿಕೆಯ ನಟಿ ಆಗಿದ್ದಾರೆ. ಅವರು ಸೂಪರ್ ಆಗಿ ಮಿಮಿಕ್ರಿ ಮಾಡುವ ಟ್ಯಾಲೆಂಟ್​ನ ಕೂಡ ಹೊಂದಿದ್ದಾರೆ.

ರಚಿತಾ ರಾಮ್ ಅವರು ಮಿಮಿಕ್ರಿ ಮಾಡೋ ಟ್ಯಾಲೆಂಟ್​ನ ‘ಭರ್ಜರಿ ಬ್ಯಾಚುಲರ್ಸ್ ಸೀಸನ್ 2’ ವೇದಿಕೆ ಮೇಲೆ ತೋರಿಸಿದ್ದಾರೆ. ಅಸಲಿಗೆ ಇಲ್ಲಿ ಮಿಮಿಕ್ರಿ ಮಾಡುವ ಟಾಸ್ಕ್ ಕೊಟ್ಟಿದ್ದು ರಚಿತಾ ಅವರೇ. ಎಲ್ಲಾ ಸ್ಪರ್ಧಿಗಳಿಗೆ ತಮ್ಮ ಮಹಿಳಾ ಮೆಂಟರ್​ನ ಒಂದು ಸ್ಟೈಲ್​ನ ಅನುಕರಿಸಿ ತೋರಿಸುವ ಟಾಸ್ಕ್​ನ ಕೊಡಲಾಯಿತು. ಈ ಟಾಸ್ಕ್​ನ ಎಲ್ಲರೂ ಚೆನ್ನಾಗಿ ಮಾಡಿ ತೋರಿಸಿದರು.

ಆ ಬಳಿಕ ರಚಿತಾ ರಾಮ್ ಅವರು ಕೆಲವು ಸ್ಪರ್ಧಿಗಳ ಸ್ಟೈಲ್​ನ ಅನುಕರಿಸಿದರು. ಅವರು ಮಾಡಿದ್ದು ಎಷ್ಟು ಖಚಿತವಾಗಿತ್ತು ಎಂದರೆ ಎಲ್ಲರೂ ಚಪ್ಪಾಳೆ ಹೊಡೆದರು. ಇನ್ನೂ ಕೆಲವರು ಅವರಿಗೆ ತಲೆಬಾಗಿ ಬಿಟ್ಟರು. ರಚಿತಾ ಅವರಲ್ಲಿ ಇಷ್ಟೊಂದು ಟ್ಯಾಲೆಂಟ್ ಇದೆ ಎಂಬ ವಿಚಾರ ಅನೇಕರಿಗೆ ಗೊತ್ತೇ ಇರಲಿಲ್ಲ. ಈಗ ಅವರ ಈ ಟ್ಯಾಲೆಂಟ್​ನ ನೋಡಿ ಅನೇಕರು ಮೆಚ್ಚಿಕೊಂಡಿದ್ದಾರೆ.

ರಚಿತಾ ರಾಮ್ ಅವರು ಹಿರಿತೆರೆ ಹಾಗೂ ಕಿರಿತೆರೆ ಎರಡರಲ್ಲೂ ಬ್ಯುಸಿ ಇದ್ದಾರೆ. ಅವರು ಹಿರಿತೆರೆಯಲ್ಲಿ 12 ವರ್ಷ ಪೂರ್ಣಗೊಳಿಸಿದ್ದಕ್ಕೆ ದರ್ಶನ್ ಅವರಿಂದ ವಿಶೇಷ ವಿಶ್ ಸಿಕ್ಕಿದೆ ಅನ್ನೋದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ