AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ರಾಬರ್ಟ್’ ಬೆಡಗಿ ಆಶಾ ಭಟ್ ಕಡೆಯಿಂದ ಇಲ್ಲ ಹೊಸ ಸಿನಿಮಾ; ಕಾರಣ ಏನು?

ಆಶಾ ಭಟ್ ‘ರಾಬರ್ಟ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಂತರ ಹೊಸ ಚಿತ್ರಗಳಲ್ಲಿ ಕಾಣಿಸಿಕೊಂಡಿಲ್ಲ. ಅವರು ತೆಲುಗು ಚಿತ್ರ 'ಒರಿ ದೇವುಡ' ದಲ್ಲಿ ನಟಿಸಿದ್ದರು. ಕನ್ನಡದಲ್ಲಿ ಹೊಸ ಯೋಜನೆಗಳನ್ನು ಘೋಷಿಸಿಲ್ಲ. ಇದಕ್ಕೆ ಕಾರಣ ಅವರು ಪಾತ್ರ ಮತ್ತು ಕಥೆ ಎರಡನ್ನೂ ಇಷ್ಟಪಡಬೇಕು ಎಂದು ಬಯಸುವುದು.

‘ರಾಬರ್ಟ್’ ಬೆಡಗಿ ಆಶಾ ಭಟ್ ಕಡೆಯಿಂದ ಇಲ್ಲ ಹೊಸ ಸಿನಿಮಾ; ಕಾರಣ ಏನು?
ಆಶಾ ಭಟ್
ರಾಜೇಶ್ ದುಗ್ಗುಮನೆ
|

Updated on: May 19, 2025 | 11:25 AM

Share

ಆಶಾ ಭಟ್ (Asha Bhat) ಅವರು ದರ್ಶನ್ ನಟನೆಯ ‘ರಾಬರ್ಟ್’ ಚಿತ್ರದಲ್ಲಿ ನಟಿಸಿ ಕನ್ನಡಿಗರಿಗೆ ಹೆಚ್ಚು ಪರಿಚಿತರಾದರು. ಅವರ ಖ್ಯಾತಿ ಆ ಸಮಯದಲ್ಲಿ ಸಾಕಷ್ಟು ಹೆಚ್ಚಿತ್ತು. ಆ ಬಳಿಕ ಅವರು ಯಾವುದೇ ಕನ್ನಡ ಸಿನಿಮಾ ಘೋಷಣೆ ಮಾಡಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಕಾಡುತ್ತಲೇ ಇದೆ. ಇದಕ್ಕೆ ಕಾರಣ ಏನು ಎಂಬುದನ್ನು ಅವರು ಈವರೆಗೆ ರಿವೀಲ್ ಮಾಡಿಲ್ಲ. ಹಾಗಾದರೆ ಆಶಾ ಭಟ್ ಹೊಸ ಸಿನಿಮಾ ಘೋಷಣೆ ಮಾಡದೇ ಇರಲು ಕಾರಣ ಏನಿರಬಹುದು ಎಂಬುದರ ಬಗ್ಗೆ ಇಲ್ಲಿದೆ ಒಂದಷ್ಟು ಸಾಧ್ಯಾಸಾಧ್ಯತೆ.

ಆಶಾ ಭಟ್ 2014ರಲ್ಲಿ ‘ಸುಪ್ರಾ ಇಂಟರ್​ನ್ಯಾಷನಲ್’ ಕಿರೀಟ ಸಿಕ್ಕಿತು. ಆಗ ಅವರಿಗೆ 22 ವರ್ಷ ವಯಸ್ಸು. ಈ ಬಿರುದನ್ನು ಪಡೆದ ಮೊದಲ ಭಾರತೀಯ ಮಹಿಳೆ ಇವರು ಅನ್ನೋದು ಮತ್ತೊಂದು ವಿಶೇಷ. ಮಾಡೆಲಿಂಗ್ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ ಬಳಿಕ ಸಾಮಾನ್ಯವಾಗಿ ಚಿತ್ರರಂಗದಲ್ಲಿ ಆಫರ್ ಸಿಗುತ್ತದೆ. ಆಶಾ ಭಟ್​ಗೂ ಹಾಗೆಯೇ ಆಯಿತು.

ಇದನ್ನೂ ಓದಿ
Image
ಶಿವಣ್ಣ-ಗೀತಾ ದಂಪತಿಗೆ ವಿವಾಹ ವಾರ್ಷಿಕೋತ್ಸವ; ಇಲ್ಲಿದೆ ಅಪರೂಪದ ಚಿತ್ರಗಳು
Image
ದರ್ಶನ್-ವಿಜಯಲಕ್ಷ್ಮೀ ವಿವಾಹ ವಾರ್ಷಿಕೋತ್ಸವ; ಮದುವೆ ಆಮಂತ್ರಣ ಪತ್ರ ವೈರಲ್
Image
ಪ್ರತಿಷ್ಠಿತ ಕಾನ್ಸ್ ಫಿಲ್ಮ್​ ಚಿತ್ರೋತ್ಸವದಲ್ಲಿ ಲಕ್ಷ್ಮೀ ನಿವಾಸ ನಟಿ ದಿಶಾ
Image
ಸಿನಿಮಾ ರಿಲೀಸ್​ಗೂ ಮೊದಲೇ ಸೋಲಿನ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ

2019ರಲ್ಲಿ ರಿಲೀಸ್ ಆದ ಹಿಂದಿಯ ‘ಜಂಗ್ಲೀ’ ಚಿತ್ರದಲ್ಲಿ ಆಶಾ ಭಟ್ ಅವರು ನಟಿಸಿದರು. ಅವರಿಗೆ ಕನ್ನಡ ಸಿನಿಮಾ ಮಾಡಬೇಕು ಎನ್ನುವ ಆಸೆ ಮೊದಲಿನಿಂದಲೂ ಇತ್ತು. ಆ ಆಸೆಯನ್ನು ಅವರು ‘ರಾಬರ್ಟ್’ ಚಿತ್ರದ ಮೂಲಕ ಈಡೇರಿಸಿಕೊಂಡರು. ದರ್ಶನ್ ನಟನೆಯ ಈ ಚಿತ್ರ ಯಶಸ್ಸು ಕಂಡಿತು. ಈ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಅವರು ಪರಿಚಯಗೊಂಡರು.

ಇದನ್ನೂ ಓದಿ: ಲಂಗ ದಾವಣಿ ಧರಿಸಿ ನಲಿದಾಡಿದ ‘ರಾಬರ್ಟ್​’ ನಟಿ ಆಶಾ ಭಟ್​

ಆ ಬಳಿಕ ಅವರು 2022ರಲ್ಲಿ ‘ಒರಿ ದೇವುಡ’ ಚಿತ್ರದ ಮೂಲಕ ತೆಲುಗು ಬಣ್ಣದ ಲೋಕಕ್ಕೆ ಕಾಲಿಟ್ಟರು. ಮೀರಾ ಹೆಸರಿನ ಪಾತ್ರವನ್ನು ಮಾಡಿದರು. ಆ ಬಳಿಕ ಆಶಾ ಭಟ್ ನಟನೆಯ ಯಾವುದೇ ಚಿತ್ರ ರಿಲೀಸ್ ಆಗಿಲ್ಲ. ಅವರು ಹೊಸ ಸಿನಿಮಾ ಬಗ್ಗೆ ಯಾವುದೇ ಘೋಷಣೆ ಕೂಡ ಮಾಡಿಲ್ಲ.

View this post on Instagram

A post shared by Asha Bhat (@asha.bhat)

ಈ ಮೊದಲು ಮಾಧ್ಯಮಗಳ ಜೊತೆ ಮಾತನಾಡಿದ್ದ ಆಶಾ ಭಟ್ ಅವರು, ಕನ್ನಡ ಚಿತ್ರಗಳನ್ನು ಮಾಡಬೇಕು ಎಂದು ಆಸಕ್ತಿ ತೋರಿಸಿದ್ದರು. ಹಾಗಂದ ಮಾತ್ರಕ್ಕೆ ಅವರು ಸಿಕ್ಕ ಎಲ್ಲಾ ಚಿತ್ರಗಳನ್ನು ಒಪ್ಪಿ ನಟಿಸಲು ರೆಡಿ ಇಲ್ಲ. ಪಾತ್ರ ಹಾಗೂ ಕಥೆ ಎರಡೂ ಇಷ್ಟ ಆಗಬೇಕು. ಈ ಕಾರಣದಿಂದಲೇ ಸೂಕ್ತ ಸ್ಕ್ರಿಪ್ಟ್​ಗಾಗಿ ಅವರು ಕಾಯುತ್ತಾ ಇರಬಹುದು ಎಂಬುದು ಅನೇಕರ ಅಭಿಪ್ರಾಯ. ಸದ್ಯ ಆಶಾ ಭಟ್ ಅವರು ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದು, ವಿವಿಧ ರೀತಿಯ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ