‘CCB ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ; ಹೆದರಿ ಓಡಿ ಹೋಗೋ ಕೆಲಸ ನಾನೇನೂ ಮಾಡಿಲ್ಲ’

|

Updated on: Jan 08, 2021 | 4:36 PM

ಹೆದರಿ ಓಡಿ ಹೋಗುವ ಕೆಲಸ ನಾನೇನೂ ಮಾಡಿಲ್ಲ. ಸಿಸಿಬಿ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಸಿಸಿಬಿ ಮತ್ತೆ ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗ್ತ್ತೇನೆ ಎಂದು ವಿಚಾರಣೆ ಬಳಿಕ ರಾಧಿಕಾ ಕುಮಾರಸ್ವಾಮಿ ಹೇಳಿದರು.

‘CCB ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ; ಹೆದರಿ ಓಡಿ ಹೋಗೋ ಕೆಲಸ ನಾನೇನೂ ಮಾಡಿಲ್ಲ’
ರಾಧಿಕಾ ಕುಮಾರಸ್ವಾಮಿ
Follow us on

ಬೆಂಗಳೂರು: ಹೆದರಿ ಓಡಿ ಹೋಗುವ ಕೆಲಸ ನಾನೇನೂ ಮಾಡಿಲ್ಲ. ಸಿಸಿಬಿ ಕೇಳಿರುವ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಸಿಸಿಬಿ ಮತ್ತೆ ಕರೆದರೆ ಹಾಜರಾಗ್ತೇನೆ ಎಂದು ವಿಚಾರಣೆ ಬಳಿಕ ರಾಧಿಕಾ ಕುಮಾರಸ್ವಾಮಿ ಹೇಳಿದರು.

ಮತ್ತೆ ಕರೆದರೆ ವಿಚಾರಣೆಗೆ ಬರಲು ನಾನು ರೆಡಿ. ವಿಚಾರಣೆ ಕಂಪ್ಲೀಟ್ ಆಗಿದೆ, ಏನೂ ತೊಂದರೆ ಇಲ್ಲ. ಅಧಿಕಾರಿಗಳು ಕೇಳಿದ್ದನ್ನೆಲ್ಲಾ ನಾನು ಹೇಳಲ್ಲ, ಆಗಲ್ಲ ಎಂದು ರಾಧಿಕಾ ಕುಮಾರಸ್ವಾಮಿ ಹೇಳಿದರು.

ಬೆಂಗಳೂರು ಬಿಟ್ಟು ನಾನು ಎಲ್ಲಿಯೂ ಹೋಗುವುದಿಲ್ಲ. ಕುಟುಂಬಸ್ಥರು ಕಾಯುತ್ತಿದ್ದಾರೆ, ಅಲ್ಲಿಗೆ ಹೋಗುತ್ತಿದ್ದೇನೆ ಎಂದು ಹೇಳಿದರು.

ಇತ್ತ, ರಾಧಿಕಾ ಕುಮಾರಸ್ವಾಮಿ ಹೇಳಿಕೆ ದಾಖಲಿಸಿಕೊಂಡ ಬಳಿಕ ಪ್ರಕರಣದ ತನಿಖಾಧಿಕಾರಿ ಎಸಿಪಿ ನಾಗರಾಜುರಿಂದ ವಿಚಾರಣೆ ನಡೆಯಿತು. ನಟಿ ರಾಧಿಕಾ ಕುಮಾರಸ್ವಾಮಿ ಸಂಪೂರ್ಣ ವಿಚಾರಣೆ ನಡೆದಿದೆ. ಎಸಿಪಿ ನಾಗರಾಜ್​ ಸಂಪೂರ್ಣ ವಿಚಾರಣೆ ನಡೆಸಿದ್ದಾರೆ ಎಂದು ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್ ಮಾಹಿತಿ ಕೊಟ್ಟರು.

ನಟಿ ರಾಧಿಕಾ ಕುಮಾರಸ್ವಾಮಿ ಅಡ್ವಾನ್ಸ್ ತೆಗೆದುಕೊಂಡಿದ್ದ ಸಿನಿಮಾಕ್ಕೆ ಟೈಟಲ್ ರಿಜಿಸ್ಟ್ರೇಷನ್ ಆಗಿತ್ತಾ?

Published On - 4:35 pm, Fri, 8 January 21